ಗೃಹ ಸಚಿವರ ವಿರುದ್ಧ ತಹಶೀಲ್ದಾರ ಆರೋಪ

ಶಿಗ್ಗಾವಿ08 : ನನ್ನ ಕಾಲಾವಧಿಯ ಒಳಗೆ ಯಾವುದೇ ಅವ್ಯವ್ಯಹಾರ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಿಲ್ಲ. ಕಟ್ಟು ನಿಟ್ಟಿನ ಅಧಿಕಾರ ನಡೆಸಿದ್ದೇನೆ. ಕಾನೂನ ಪ್ರಕಾರ ಎರಡು ವರ್ಷ ವಗರ್ಾವಣೆ ಮಾಡುವಂತಿಲ್ಲ. ನನ್ನ ವಿರುದ್ಧ ಯಾವುದೇ ದೂರುಗಳಿಲ್ಲ. ಆದರೂ ಕಾನೂನು ಬಾಹೀರವಾಗಿ ಗೃಹ ಸಚಿವರ ಶಿಫಾರಸ್ ಪತ್ರದ ಮೇರೆಗೆ ಸರಕಾರ ಮಾಡಿದ ನನ್ನ ವರ್ಗಾವಣೆಗೆ ತಡೆಯಾಜ್ಞೆ ತಂದು ಮತ್ತೇ ಅಧಿಕಾರ ಸ್ವೀಕರಿಸಿದ್ದೇನೆ ಎಂದು ಶಾಸಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ನೇರವಾಗಿ ತಹಶೀಲ್ದಾರ ಚಂದ್ರಶೇಖರ ಗಾಳಿ ಆರೋಪಿಸಿದರು.

ಶುಕ್ರವಾರ ತಹಶೀಲ್ದಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕರ್ಾರಿ ಸೇವೆಯನ್ನು ನಿಷ್ಠೆಯಿಂದ ಮಾಡಬೇಕೆಂದೇ ಅಧಿಕಾರ ಸ್ವೀಕರಿಸಿದ್ದೇನೆ. ಆದರೆ ಶಾಸಕರು ತಾಲೂಕಿನಲ್ಲಿ ನೆರೆಯಿಂದ ಹಾನಿಗೀಡಾದವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸಮಸ್ಯೆ ಕುರಿತು ಚಚರ್ಿಸಲು ಅವಕಾಶ ಕೊಡುತ್ತಿಲ್ಲ. ಸಮಯವನ್ನು ನೀಡುತ್ತಿಲ್ಲ. ಹೀಗಾದರೆ ಅಧಿಕಾರ ನಡೆಸುವುದು ಹೇಗೆ ಎಂದು ಪ್ರಶ್ನಿಸಿದ ಗಾಳಿ ಶಾಸಕರ ಮತ್ತು ಶಾಸಕರ ಬೆಂಬಲಿಗರ ಕಾರ್ಯವೈಖರಿ ಮತ್ತು ಒತ್ತಡಕ್ಕೆ ಅಸಮಾದಾನ ವ್ಯಕ್ತಪಡಿಸಿದರು.

ನೂತನ ತಹಶೀಲ್ದಾರರು, ಇಲ್ಲಿಯ ಭೌಗೋಳಿಕ ವಾಸ್ತವ ಅರಿತುಕೊಳ್ಳದೆ ಫೆ.6 ರಂದು ಸುದ್ದಿಗೋಷ್ಠಿ ನಡೆಸಿ ತಪ್ಪು ಮಾಹಿತಿಗಳನ್ನು ಸಾರ್ವಜನಿಕವಾಗಿ ರವಾನಿಸಿದ್ದಾರೆ, ಅವರು ತಿಳಿಸಿರುವಂತೆ ಮನೆ ಹಂಚಿಕೆಯಲ್ಲಿ ಯಾವುದೇ ತಾರತಮ್ಯವಾಗಿಲ್ಲ. ಎಲ್ಲವೂ ಪಾರದರ್ಶಕವಾಗಿ ಆಗಿದೆ, ತಾಲೂಕಿನ ಅಭಿವೃದ್ಧಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇನೆ. 

ಈಗಾಗಲೇ ಅಗಸ್ಟ್ ಮತ್ತು ಸಪ್ಟೆಂಬರ ನೆರೆ ಕೆಲಸ ಮತ್ತು ಮನೆ ಹಂಚಿಕೆಯಲ್ಲಿ ಬೇಜವಾಬ್ದಾರಿತೋರಿದ, ಕರ್ತವ್ಯಕ್ಕೆ ನಿರ್ಲಕ್ಷತೋರಿದ, ಸಾರ್ವಜನಿಕರ ಹಿತಾಸಕ್ತಿಗೆಧಕ್ಕೆ ಮತ್ತು ಮೇಲಅಧಿಕಾರಿಗಳ ಆಧೇಶದಉಲ್ಲಂಘನೆ ಮಾಡಿದ ಮೂವರು ಗ್ರಾಮ ಲೆಕ್ಕಾಧಿಕಾರಿಗಳಾದ ಸಿ.ಡಿ.ಮಳಲಿ, ಶಿದ್ದರಾಮ ಇಂದೂರ, ಎಚ್ಚರೇಶ ಹಿರೇಗೌಡ್ರ ಅವರನ್ನು ಅಮಾನತ್ತು ಮಾಡಲಾಗಿದೆ. ಇದಲ್ಲದೆ ಇವರಿಗೆ ಸಹಕರಿಸಿದ ಗ್ರಾಮ ಲೆಕ್ಕಾಧಿಕಾರಿಯ ಮಗ ಮಾಲತೇಶ ವಾಲಿಕಾರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೇನೆ ಎಂದರು.

ಒಟ್ಟಾರೆ ತಾಲೂಕಿನಲ್ಲಿ ಎ ಗ್ರೇಡ್ 26, ಬಿ ಗ್ರೇಡ್ 1376 ಮತ್ತು ಸಿ ಗ್ರೇಡ್ 2328 ಮನೆ ಫಲಾನುಭವಿಗಳು ಅರ್ಹರಿದ್ದಾರೆ. ಇವುಗಳಲ್ಲಿ ಎ ಮತ್ತು ಬಿ. ಗ್ರೇಡ್ ಮನೆಗಳಿಗೆ ಹಣ ಮಂಜೂರ ಮಾಡುವ ಅಧಿಕಾರ ತಹಶೀಲ್ದಾರರಿಗೆ ಇರುವುದಿಲ್ಲ. ಅವರಿಗೆ ಸಕರ್ಾರವೇ ನೇರವಾಗಿ ಹಣ ಮಂಜೂರು ಮಾಡುತ್ತದೆ. ಸಿ. ಗ್ರೇಡ್ನ 2328 ಮನೆಗಳಿಗೆ 50 ಸಾವಿರದಂತೆ 11 ಕೋಟಿ 64 ಲಕ್ಷರೂ. ರೂಗಳನ್ನು ನಮ್ಮ ಕಚೇರಿಯಿಂದ ಈಗಾಗಲೇ ಫಲಾನುಭವಿಗಳಿಗೆ ಸಂದಾಯ ಮಾಡಲಾಗಿದೆ. ಇದಲ್ಲದೆ ಪಟ್ಟಿಯನ್ನು ಪುನರ್ ಪರಿಶೀಲನೆ ಮಾಡಿ ಅನರ್ಹರನ್ನು ಹೊರಹಾಕಿ ಸಕರ್ಾರಕ್ಕೆ ಸುಮಾರು 3 ಕೋಟಿರೂ. ಉಳಿತಾಯ ಮಾಡಿದ್ದೇನೆ ಎಂದರು.

ದಾಖಲಾತಿ ಕೊರತೆಯಿಂದ 183 ಮನೆಗಳು ಇನ್ನೂ ಮಂಜೂರಾತಿ ದೊರೆಯಬೇಕಿದೆ. ಈ ಕುರಿತು ಹಲವು ಬಾರಿ ಸಚಿವರ ಗಮನಕ್ಕೆ ತಂದರೂ ಅವರು ಇತ್ತ ಗಮನ ಹರಿಸುತ್ತಿಲ್ಲ. ಇದಲ್ಲದೆ ಬೆಳೆ ನಷ್ಟ ಪರಿಹಾರ ಮೊತ್ತ ವಿತರಣೆಯಲ್ಲಿ ಒಂದಿಷ್ಟು ಸಮಸ್ಯೆಯಾಗಿದೆ. ಬ್ಯಾಂಕ್ ಅಧಿಕಾರಿಗಳ ತಪ್ಪಿನಿಂದಲೂ ಅರ್ಹ ರೈತರಿಗೆ ಅನ್ಯಾಯವಾಗಿದೆ. ಕೆಲ ಗ್ರಾಮಲೆಕ್ಕಾಧಿಕಾರಿಗಳ ಕೈಚಳಕಿನಿಂದಲೂ ಬೇರೆಯೊಬ್ಬರ ಪರಿಹಾರ ಮೊತ್ತ ವಿತರಣೆಯಾಗಿದೆ. ತಪ್ಪು ಮಾಡಿದ ಗ್ರಾಮಲೆಕ್ಕಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಲು ಶಿಪಾರಸ್ಸು ಮಾಡಲಾಗಿದೆ ಎಂದು ಗಾಳಿ ಸ್ಪಷ್ಟಪಡಿಸಿದರು.