ಕಾಗವಾಡ 13: ದಂಡಾಧಿಕಾರಿಗಳು ಹಾಗೂ ತಹಶೀಲ್ದಾರಾದ ರಾಜೇಶ ಬುರ್ಲಿ ಅವರ ತಾಯಿ ಶಕುಂತಲಾ ರುದ್ರ್ಪ ಬುರ್ಲಿ(77) ಬುಧವಾರ ರಾತ್ರಿ ವಯೋಸಹಜ ಕಾಯಿಲೆಯಿಂದ ನಿಧನರಾದರು.
ಅವರಿಗೆ ತಹಶೀಲ್ದಾರ್ ರಾಜೇಶ್ ಬುರ್ಲಿ ಸೇರಿ ಇಬ್ಬರು ಪುತ್ರರು, ಮೂರು ಜನ ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ಅಥಣಿಯಲ್ಲಿ ಮೋಟಗಿ ಮಠದ ಲಿಂಗಾಯಿತ ರುದ್ರ ಭೂಮಿಯಲ್ಲಿ ನೆರವೇರಿತು.
ಅಂತಿಮ ಯಾತ್ರೆಯಲ್ಲಿ ವಿವಿಧ ಮಠಾಧೀಶರು, ಸ್ವಾಮೀಜಿಗಳು ಹಾಗೂ ಮುಖಂಡರು ಭಾಗವಹಿಸಿ ಸಂತಾಪ ಸೂಚಿಸಿದರು.