ಪ್ರಕೃತಿ ವಿಕೋಪದಿಂದಾಗಿ ರೈತರು ಬೆಳೆದ ಸಂಪೂರ್ಣ ಬೆಳೆ ಹಾನಿ ಬೈಕ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶಿಲ್ದಾರ ಕೀರ್ತಿ ಚಾಲಕವರಿಗೆ ಶನಿವಾರ ಸರ್ಕಾರಕ್ಕೆ ಸಲ್ಲಿಸಿದರು

   ಪ್ರಕೃತಿ ವಿಕೋಪದಿಂದಾಗಿ ರೈತರು ಬೆಳೆದ ಸಂಪೂರ್ಣ ಬೆಳೆ ಹಾನಿ ಬೈಕ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶಿಲ್ದಾರ ಕೀರ್ತಿ ಚಾಲಕವರಿಗೆ ಶನಿವಾರ ಸರ್ಕಾರಕ್ಕೆ ಸಲ್ಲಿಸಿದರು Tahsildar Kirti Chalakari submitted the complete crop damage caused to the farmers by natural disast

ಲೋಕದರ್ಶನ ವರದಿ 


  ಪ್ರಕೃತಿ ವಿಕೋಪದಿಂದಾಗಿ ರೈತರು ಬೆಳೆದ ಸಂಪೂರ್ಣ ಬೆಳೆ ಹಾನಿ ಬೈಕ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶಿಲ್ದಾರ ಕೀರ್ತಿ ಚಾಲಕವರಿಗೆ ಶನಿವಾರ ಸರ್ಕಾರಕ್ಕೆ ಸಲ್ಲಿಸಿದರು 

  


ಮುದ್ದೇಬಿಹಾಳ   12:   ಮತಕ್ಷೇತ್ರದಲ್ಲಿ ಕಳೆದ  ಮೂರು ತಿಂಗಳ ನಿರಂತರ ಮಳೆಯಿಂದ ಪ್ರಕೃತಿ ವಿಕೋಪದಿಂದಾಗಿ ರೈತರು ಬೆಳೆದ  ಸಂಪೂರ್ಣ ಬೆಳೆ ಹಾನಿಯಾಗಿ ರೈತರು ತಿವ್ರ ಸಂಕಷ್ಟಲ್ಲಿದ್ದಾರೆ ಕಾರಣ ಸರಕಾರ ಈ ಕೂಡಲೇ ನೈಜ  ಸಮೀಕ್ಷೇ ನಡೆಸಿ ವರದಿ ತಾಲೂಕಾ ಆಡಳಿತದಿಂದ ವರದಿ ಪಡೆದಿಕೊಂಡು ಸೂಕ್ತ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಬೀದಿಗಳಿದು ರೈತರು ಹೋರಾಟಕ್ಕಿಯುವ ಪ್ರಸಂಗ ಎದುರಾಗಬಹುದು ಎಂದು ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಘಟಕದ ಅಧ್ಯಕ್ಷ ಎ ಎಸ್ ಪಾಟೀಲ(ನಡಹಳ್ಳಿ)ಯವರು ನೂರಕ್ಕೂ ಹೆಚ್ಚು ರೈತರೊಂದಿಗೆ ಬೈಕ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶಿಲ್ದಾರ ಕೀರ್ತಿ ಚಾಲಕವರಿಗೆ ಶನಿವಾರ ಸರ್ಕಾರಕ್ಕೆ ಸಲ್ಲಿಸಿದರು. . 


ಇಡಿ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಿಗಿಂತಲೂ ಈ ಬಾರಿ ನಮ್ಮ ಮುದ್ದೇಬಿಹಾಳ ಮತಕ್ಷೇತ್ರವೂ ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿದು  ರೈತು ಬೆಳೆ ಬೆಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ ಮಾತ್ರವಲ್ಲದೇ ತೀವ್ರ ಸಂಕಷ್ಟದಲ್ಲಿದ್ದಾರೆ. ಸರಕಾರದ ಇಲಾಖೆಗಳ ವರದಿಗಳ ಪ್ರಕಾರ ವಾಡಿಕೆ ಗಿಂತ ಶೇ. 150 ಕ್ಕೂ ಹೆಚ್ಚು ಮಳೆಯಾಗಿದೆ ಎಂದು ತಿಳಿದುಬಂದಿದೆ. ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ.7.50 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಸಂಪೂರ್ಣ ನಾಶವಾಗಿದೆ. ಅದರಂತೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟೆ ಹಾಗೂ ನಿಡಗುಂದಿ ತಾಲೂಕುಗಳ ವ್ಯಾಪ್ತಿಯಲ್ಲಿ 1 ಲಕ್ಷ 24,000 ಸಾವಿರ ಹೆಕ್ಟರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ ಮು0ಗಾರು ಬೆಳೆ ಸಂಪೂರ್ಣ ನಷ್ಟವಾಗಿರುತ್ತದೆ. ಮೂರು ತಿಂಗಳಿನಿಂದ ನಿರಂತರ ಮಳೆಯಿಂದಾಗಿ ಆಗಿರುವ ಬೆಳೆ ಹಾನಿಯನ್ನು ಪ್ರಕೃತಿ ವಿಕೋಪದಿಂದ ಆಗಿರುವ ಬೆಳೆಹಾನಿ ಎಂದು ಪರಿಗಣಿಸಿ ಸರಕಾರಕ್ಕೆ ನೈಜ ಮತ್ತು ವಾಸ್ತವ ವರದಿಯನ್ನು ಸಲ್ಲಿಸಬೇಕು. ಇದು ಪ್ರವಾಹದಿಂದ ಆಗಿರುವ ಹಾನಿಯಲ್ಲ, ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ. ಒಂದಿಬ್ಬರು ತಳಮಟ್ಟದ ಅಧಿಕಾರಿಗಳನ್ನು ರೈತರ ಹೊಲಗಳಿಗೆ ಕಳುಹಿಸಿ ಸಂಪೂರ್ಣ ಬೆಳೆ ಹಾನಿಯ ಸಮೀಕ್ಷೆಯನ್ನು ಕಾಲಮಿತಿಯಲ್ಲಿ ಜಿಪಿಎಸ್ ಮೂಲಕ ಮಾಡಲು ಸಾಧ್ಯವಿಲ್ಲ, ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾಧಿಕಾರಿಗಳು ನೇಮಿಸಿರುವ ಅಧಿಕಾರಿಗಳು ಪ್ರತಿ ತಾಲೂಕಿನಲ್ಲಿ ಒಂದೆರಡು ಹಳ್ಳಿಗಳ ಸಂಪೂರ್ಣ ಸಮೀಕ್ಷೆ ನಡೆಸಿ ಪ್ರಕೃತಿ ವಿಕೋಪದಿಂದಾದ ನೈಜ ಹಾನಿಯ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ನಿರಂತರ ಮಳೆಯಿಂದಾಗಿರುವ ಬೆಳೆ ಹಾನಿಯ ನೈಜತೆಯನ್ನು ಮುಚ್ಚಿಟ್ಟು ಸ0ಕಟದಲ್ಲಿರುವ ರೈತರ ಜೊತೆ ಚೆಲ್ಲಾಟ ಆಡದಂತೆ ತಾಲೂಕಾ ಆಡಳಿತ ಹಾಗೂ ಜಿಲ್ಲಾ ಆಡಳಿತಕ್ಕೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ,  

ಈ ಕೂಡಲೇ ವಿಜಯಪುರ ಜಿಲ್ಲೆಯ ರೈತರು ಬೆಳೆದ ಸುಮಾರು 7.50 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಯನ್ನು ಪ್ರಕೃತಿ ವಿಕೋಪದಿಂದಾದಸಂಪೂರ್ಣ ನನಷ್ಟವೆಂದು ಘೋಷಿಸಿ ಸರ್ಕಾರಕ್ಕೆ ಕೂಡಲೇ ವರದಿಯನ್ನು ಸಲ್ಲಿಸಬೇಕು. ಪರಿಹಾರವನ್ನು ನಾವು ಸರ್ಕಾರಕ್ಕೆ ಕೇಳುತ್ತಿದ್ದೇವೆಯೇ ಹೊರತು ಜಿಲ್ಲಾಡಳಿತ ಅಥವಾ ತಾಲೂಕ ಆಡಳಿತಕ್ಕೆ ಅಲ್ಲ, ಪರಿಹಾರ ಎಷ್ಟು ಕೊಡುತ್ತಾರೆ ಎನ್ನುವುದನ್ನು ಸರ್ಕಾರ ಮಟ್ಟದಲ್ಲಿ ತೀರ್ಮಾನಿಸಲಿ ಆದರೇ ಮೊದಲು  ಬೆಳೆ ಹಾನಿಯ ವಾಸ್ತವ  ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಪ್ರತಿ ಗ್ರಾಮ, ಗ್ರಾಮ ಪಂಚಾಯತ್, ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆಹಾನೀಗೀಡಾದ ಎಲ್ಲಾ ರೈತರ ಪಟ್ಟಿ ಲಗತ್ತಿಸಬೇಕು ಎಲ್ಲಿಯವರೆಗೆ ಈ ಬೇಡಿಕೆ ಈಡೇರುವುದಿಲ್ಲವೋ ಅಲ್ಲಿಯವರೆಗೆ ರೈತರು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಾಗಿದ್ದೇವೆ. 

 ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ತಾಲೂಕಾ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ. ರೈತರಿಗೆ ನ್ಯಾಯ ಒದಗಿಸುವಲ್ಲಿ ಪ್ರಯತ್ನಿಸಬೇಕು. ನಿರ್ಲಕ್ಷ್ಯ ತೋರಿದಲ್ಲಿ ರೈತರಿಗೆ ಅನ್ಯಾಯ ಮಾಡುವ ಪ್ರಯತ್ನ ನಡೆದಲ್ಲಿ ಕಾನೂನನ್ನು ಮೀರಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಶಾಂತಿಭಂಗವಾದಲ್ಲಿ ಅದಕ್ಕೆ ತಾಲೂಕ ಆಡಳಿತ, ಜಿಲ್ಲಾಡಳಿತವೇ ಹೊಣೆಯಾಗುತ್ತದೆ ವಿನ: ಪ್ರತಿಭಟನೆಗೆ ಇಳಿದ ರೈತರನ್ನು ಹೊಣೆ ಮಾಡಲು ಸಾಧ್ಯವಿಲ್ಲವೆಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಕೂಡಲೇ ಬೇಡಿಕೆ ಈಡೇರಿಸದಿದ್ದಲ್ಲಿ ಇದೇ ದಿ 13 ರಿಂದ ಆಯಾ ಗ್ರಾಮ, ಗ್ರಾಮ ಪಂಚಾಯತ್, ಹೋಬಳಿ ಹಾಗೂ ತಾಲೂಕಾ ಕೇಂದ್ರಗಳಲ್ಲಿರುವ ಸರ್ಕಾರಿ ಕಛೇರಿಗಳ ಮುಂದೆ ಪ್ರತಿಭಟನೆ ಮತ್ತು ಆಯಾ ಗ್ರಾಮಗಳಲ್ಲಿ ಹಾಯ್ದು ಹೋಗುವ ಮುಖ್ಯ ರಸ್ತೆಗಳಲ್ಲಿ ರಸ್ತೆತಡೆ ನಡೆಸುವುದರ ಮೂಲಕ ಬೇಡಿಕೆ ಈಡೇರುವವರೆಗೆ ನಿರಂತರ ಹೋರಾಟ ನಡೆಸುವುದಾಗಿಮನವಿಯಲ್ಲಿ ತಿಳಿಸಿದ್ದಾರೆ. 

ಈ ವೇಳೆ  ಬಿಜೆಪಿ ತಾಲೂಕಾ ಮಂಡಲದ ಅಧ್ಯಕ್ಷ ಜಗಗಧೀಶ ಪಂಪಣ್ಣವರ, ಮುಖಂಡರಾದ ಮಲಕೇಂದ್ರಾಯಗೌಡ ಮುನ್ನಾಧಣಿ ನಾಡಗೌಡ, ಪಾಟೀಲ, ಗೀರಿಶಗೌಡ ಪಾಟೀಲ, ಸೋಮನಗೌಡ ಬಿರಾದಾರ, ಸೋಮನಗೌಡ ಮೇಟಿ, ಗುರುನಾಥ ದೇಶಮುಖ, ಕೇಂಚಪ್ಪ ಬಿರಾದಾರ,ಸಂಜು ಬಾಗೇವಾಡಿ,  ಮಂಜುನಾಥಗೌಡ ಪಾಟೀಲ, ಚೇತನ್ ಸಂಗಮ,ಶಂಕರಗೌಡ ಶಿವಣಗಿ, ಹುಲಗಪ್ಪ ಕಿಲಾರಟ್ಟಿ, ಸಂಗಣ್ಣ ಹತ್ತಿ, ಸುಭಾಸ ಕಟ್ಟಿಮನಿ, ಸಂಗಮೇಶ ಗುಂಡಕನಾಳ ಸೇರಿಧಮತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.