ವಿಶ್ವ ಪಾರಂಪರಿಕ ಸಪ್ತಾಹಕ್ಕೆ ತಹಶೀಲ್ದಾರ ಇಂಗಳೆ ಚಾಲನೆ

ಬಾಗಲಕೋಟೆ: ಭಾರತೀಯ ಪುರಾತತ್ವ ಸವರ್ೇಕ್ಷಣ ಇಲಾಖೆ ಹಾಗೂ ಪ್ರಾಸೋದ್ಯಮ ಇಲಾಖೆ ಸಹಯೋಗದಲ್ಲಿ ನವೆಂಬರ 19 ರಿಂದ 25 ವರೆಗೆ ಹಮ್ಮಿಕೊಂಡ ವಿಶ್ವ ಪರಂಪರಾ ಸಪ್ತಾಹ ಕಾರ್ಯಕ್ರಮಕ್ಕೆ ಬಾದಾಮಿ ತಹಶೀಲ್ದಾರ ಎಸ್.ಎಸ್.ಇಂಗಳೆ ಚಾಲನೆ ನೀಡಿದರು.

  ಐತಿಹಾಸಿಕ ತಾಣವಾದ ಪಟ್ಟದಕಲ್ಲಿನಲ್ಲಿ ಮಂಗಳವಾರ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಪ್ರಾಚೀನ ಸ್ಮಾರಕಗಳ ರಕ್ಷಣೆ ಮತ್ತು ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಾಚೀನ ಸ್ಮಾರಕಗಳು ದೇಶದ ಆಸ್ತಿ ಇದ್ದಂತೆ. ಅವುಗಳ ರಕ್ಷಣೆ ಮಾಡುವುದು ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಧಾರವಾಡ ವಿಭಾಗದ ಪುರಾತತ್ವ ಇಲಾಖೆಯ ಅಧೀಕ್ಷಕ ಎ.ಅನಿಲಕುಮಾರ, ಅಧೀಕ್ಷಕ ಪುರಾತತ್ವ ಅಭಿಯಂತರ ಜಿ.ಕಾಮರಾಜ, ಸಹಾಯಕ ಪುರಾತತ್ವ ಅಭಿಯಂತರ ತೇಜಸ್ವಿ, ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಕನ್ಸಲ್ಟಂಟ್ ಅನಿಲಕುಮಾರ ಸೇರಿದಂತೆ ಓಲಂಪಿಕ್ ವಿಜೇತರಾದ ಸಿದ್ಧಾರೂಢ ಕೊಪ್ಪದ, ಪ್ರಾಚಾರ್ಯ ಸಂಕದಾಳ ಉಪಸ್ಥಿತರಿದ್ದರು. 

   ನಂತರ ಪಟ್ಟದಕಲ್ಲಿನಿಂದ ಚಿಮ್ಮಲಗಿ ಗ್ರಾಮದ ವರೆಗೆ ಪಾರಂಪರಿಕ ಬೈಕ್ ರ್ಯಾಲಿ ನಡೆಯಿತು. ಚಿಮ್ಮಲಗಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಪ್ರಾಚೀನ ಕಾಲದ ಸಂರಕ್ಷಣೆ ಮತ್ತು ಮಹತ್ವ ಕುರಿತು ಜಾಗೃತಿ ಮತ್ತು ಸಂವಾದ ಕಾರ್ಯಕ್ರಮ ಜರುಗಿತು. ನಂತರ ಬೈಕ್ ರ್ಯಾಲಿ ಐಹೊಳೆವರಗೆ ನಡೆದು ಐಹೊಳೆಯ ಮ್ಯೂಸಿಯಂನಲ್ಲಿ ಪುರಾತತ್ವ ಸ್ಮಾರಕಗಳ ಛಾಯಾಚಿತ್ರ ಪ್ರದರ್ಶ ನಡೆಸಲಾಯಿತು. ಬೈಕ್ ರ್ಯಾಲಿಯಲ್ಲಿ 80ಕ್ಕೂ ಹೆಚ್ಚು ಬೈಕ್ ಸವಾರರು ಪಾಲ್ಗೊಂಡಿದ್ದರು. ಈ ಸಪ್ತಾಹ ನವೆಂಬ 25 ವರಗೆ ಜರುಗಲಿದೆ.