ಸಿರುಗುಪ್ಪ :- ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂದು ತಹಸೀಲ್ದಾರ್ ಹಾಗೂ ತಾಲೂಕು ಕಾರ್ಯನಿವರ್ಾಹಕ ದಂಡಾಧಿಕಾರಿ ದಯಾನಂದ ಹೆಚ್ ಪಾಟೀಲ್ ಅವರು ಹೇಳಿದರು. ಕನರ್ಾಟಕ ಸರಕಾರ ಭಾರತ ಚುನಾವಣಾ ಆಯೋಗ ತಾಲ್ಲೂಕು ಆಡಳಿತವು ಕಮ್ಮವಾರಿ ಕಲ್ಯಾಣ ಮಂಟಪ ಬಳ್ಳಾರಿ ರಸ್ತೆ ಸಿರುಗುಪ್ಪದಲ್ಲಿ ಆಯೋಜಿಸಿದ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ-2020 ಮತದಾರರ ಪಟ್ಟಿಯ ಪರಿಶೀಲನೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಸೆಪ್ಟೆಂಬರ್ 1ರಿಂದ ಅಕ್ಟೊ?ಬರ್ 15 ನೇ 2019 ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತೆಗೆದು ಹಾಕುವಿಕೆ, ತಿದ್ದುಪಡಿ, ಪರಿಶೀಲನೆ ಮತ್ತು ದೃಢೀಕರಣ, ಈ ದಿಸೆಯಲ್ಲಿ ನೀವು ಮಾಡಬೇಕಾಗಿರುವುದು ಭಾರತೀಯ ಪಾಸ್ ಪೋರ್ಟ, ಚಾಲನೆ ಪರವಾನಿಗೆ ಆಧಾರ್ ಕಾರ್ಡ, ಪಡಿತರ ಚೀಟಿ, ಸರಕಾರಿ ಅರೆ ಸರಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ರೈತರ ಗುರುತಿನ ಚೀಟಿ, ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ಒಂದು ದಾಖಲೆಯೊಂದಿಗೆ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಮತದಾನ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ ಅಟಲ್ ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯತ್ ಮತಗಟ್ಟೆ ಅಧಿಕಾರಿ ಮತ್ತು ವೆಬ್ ಸೈಟ್ ಮುಖಾಂತರ ಪರಿಶೀಲಿಸಿ ದೃಢೀಕರಿಸಿಕೊಳ್ಳುವುದು ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್ ಎನ್ ವಿಎಸ್ ಐ ಪೋರ್ಟಲ್ 1950ಮತದಾರರ ಸಹಾಯವಾಣಿ, ಒಳಗೊಳ್ಳುವ ಸುಗಮ ಮತ್ತು ನೈತಿಕ ಚುನಾವಣೆಗಾಗಿ ಮತದಾರ ವಿವರಗಳನ್ನು ಪರಿಶೀಲಿಸಿ,ಸರಿಪಡಿಸಿ,ದೃಢಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಎಸ್ ಸೋಮಲಿಂಗಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ್ ಅವರು ಉಪನ್ಯಾಸ ನೀಡಿದರು.ಜಿಲ್ಲಾ ಪಂಚಾಯತ್ ಸದಸ್ಯರಾದ ಕೋಟೆ ರೆಡ್ಡಿ, ಬಿಜೆಪಿ ಮುಖಂಡ ಉಡೆಗೋಳ್ ಖಾಜಾಸಾಬ್, ಜನಾಭಿಪ್ರಾಯ ಮುಖಂಡರಾದ ಎ.ಅಬ್ದುಲ್ ನಬಿ, ಸಿಪಿಐ ಮೌನೇಶ್ ಮಾಲಿ ಪಾಟೀಲ್, ಗ್ರೆ?ಡ್ 2 ತಹಸೀಲ್ದಾರ್ ಕುಮಾರಸ್ವಾಮಿ,ಸಿರುಗುಪ್ಪ ನ್ಯಾಯಾಲಯದ ಅಧಿಕಾರಿ,ತಾಲ್ಲೂಕು ಕಛೇರಿ ಮಂಜುನಾಥ್,ತಾಲ್ಲೂಕು ಸಮಾಜ ಕಲ್ಯಾಣ ಸಹಾಯಕ ನಿದರ್ೆಶಕ ಶಾಶೂ ಮೋದಿನ್, ಬಿಸಿಎಂ ಅಧಿಕಾರಿ ಶ್ಯಾಮಪ್ಪ,ನಗರಸಭೆಯ ಅಧಿಕಾರಿ, ಶಿಕ್ಷಣ ಇಲಾಖೆಯ ವಿಜಯರಂಗಾರೆಡ್ಡಿ, ಕಂದಾಯ ಪರಿವಿ?ಕ್ಷಕ ಎಸ್ ಮೊಹಮ್ಮದ್ ಸಾದಿಖ್,ನಾಡ ತಹಸೀಲ್ದಾರರು,ಗ್ರಾಮ ಲೆಕ್ಕಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಂಗನವಾಡಿ ಕಾರ್ಯಕರ್ತರು,ಶಾಲಾ ಮಕ್ಕಳು ಭಾಗವಹಿಸಿದ್ದರು. ಸಿರುಗುಪ್ಪ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 4ರಿಂದಾ 7 ರವರಿಗೆ ಕಾನೂನು ಸಾಕ್ಷರತಾ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಹಶಿಲ್ದಾರ್ ದಯಾನಂದ ಹೆಚ್ ಪಾಟೀಲ್ ತಿಳಿಸಿದರು.