ಧಾರವಾಡ 01: ಕೆಲಗೇರಿಯ ಜೆ.ಎಸ್.ಎಸ್.ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಿಪ್ಪಾಣಿಯ ಕೆ.ಎಲ್.ಇ ಸಿ.ಬಿ.ಎಸ್.ಇ ಶಾಲೆಯಲ್ಲಿ ಸೆ.18ರಿಂದ 21ರವರೆಗೆ ಜರುಗಿದ ಸಿ.ಬಿ.ಎಸ್.ಇ. ಸೌತ್ ಝೋನ್- ಟೇಕ್ವಾಂಡೊ ಪಂದ್ಯಾವಳಿ -2019ರಲ್ಲಿ ಸಾಧನೆ ಮೆರೆದಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ಸಂಜನಾ ಬಳ್ಳಾರಿ ಬಂಗಾರದ ಪದಕ, ಪ್ರೇಮಾ ಕುಲಕರ್ಣಿ ಬೆಳ್ಳಿ ಪದಕ, ರಚಿತಾ ಪಾಟೀಲ ಬೆಳ್ಳಿ ಪದಕ, ಸಿಂಚನಾ ಪಾಟೀಲ ಬೆಳ್ಳಿ ಪದಕ, ವೈದೇಹಿ ಕುಲಕಣರ್ಿ, ಸಿರಿ ನಂದಿಹಳ್ಳಿ ಮತ್ತು ಮನೋಜ ಕುಮಾರ ಅವರು ಕಂಚಿನ ಪದಕ ಪಡೆದಿರುತ್ತಾರೆ.
ವೈಷ್ಣವಿ ಪತ್ತೆನವರ್, ವಿವೇಕ್ ಸೂರ್ಯವಂಶಿ, ಹಷರ್ಿತ್ ಹಾನಗಲ್ ಹಾಗೂ ಆದಿತ್ಯ ಸಾಳುಂಕೆ, ಯಶೋದಾ ಬಣ್ಣೆ, ನಿಧಿ ಗೋವನ್ನವರ ಎಂಬ ವಿದ್ಯಾಥರ್ಿಗಳು ಭಾಗವಹಿಸಿರುತ್ತಾರೆ. ಇವರೊಂದಿಗೆ ತಂಡದ ತರಬೇತುದಾರ ಆನಂದ ಕಿಟದಾಳ ತಂಡದ ವ್ಯವಸ್ಥಾಪಕರಾಗಿ ಬೆನಜೀರ ಬುಡನ್ಖಾನ್ ಕೂಡ ಪ್ರಯಾಣಿಸಿದ್ದರು.
ವಿದ್ಯಾರ್ಥಿಗಳಾದ ಸಂಜನಾ ಬಳ್ಳಾರಿ, ಪ್ರೇಮಾ ಕುಲಕರ್ಣಿ , ರಚಿತಾ ಪಾಟೀಲ, ಸಿಂಚನಾ ಪಾಟೀಲ ಅವರು ಉತ್ತರ ಪ್ರದೇಶದ ಬಲರಾಮ್ಪುರ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸಿ.ಬಿ.ಎಸ್.ಇ. ಟೇಕ್ವಾಂಡೊ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಈ ಸಾಧನೆಯನ್ನು ಮಾಡಿದವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತಾಧಿಕಾರಿ ಎಂ. ಪಿ. ಬಗಲಿ, ಶಾಲೆಯ ಪ್ರಾಂಶುಪಾಲ ಲಿಲಿಯನ್ ಆಂತೋಣಿ ಶಾನ್ ಅವರು ಮತ್ತು ದೈಹಿಕ ಶಿಕ್ಷಕ ದೀಪಕ ಕಾಂಬಳೆ ಹಾಗೂ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.