ಬೆಂಗಳೂರು, ಫೆ 18, ಕನ್ನಡ ಚಿತ್ರ ರಸಿಕರು ಕೇವಲ ಸ್ಟಾರ್ ನಟರ ಚಿತ್ರಗಳನ್ನು ಮಾತ್ರವಲ್ಲದೆ, ಸದಭಿರುಚಿಯುಳ್ಳ ಯಾವುದೇ ಚಿತ್ರಗಳನ್ನು ಸ್ವಾಗತಿಸುವ ಮೂಲಕ ಹೊಸಬರಿಗೆ ಉತ್ತೇಜನ ನೀಡುತ್ತಿದ್ದಾರೆ ಅಲ್ಲದೆ ಇತ್ತೀಚೆಗೆ ವಿಶಿಷ್ಟ ಶೀರ್ಷಿಕೆಯ ಚಿತ್ರಗಳು ನಿರ್ಮಾಣವಾಗುತ್ತಿದ್ದು, ಈ ಸಾಲಿಗೆ 'ಎಲ್ಲಿ ನನ್ನ ವಿಳಾಸ’ ಕೂಡ ಸೇರ್ಪಡೆಯಾಗಲಿದೆ ಟ್ರೇಲರ್ ಕೂಡ ಆಸಕ್ತಿ ಹುಟ್ಟಿಸಿದ್ದು, ನಾಯಕ, ನಾಯಕಿ ಕಾಡಿನಲ್ಲಿ ವಿಳಾಸ ಹುಡುಕಿಕೊಂಡು ಹೋಗುವ ದೃಶ್ಯವಿದೆ ಜತೆಗೆ ಚಿತ್ರದಲ್ಲಿ ಎರಡು ಕ್ಲೈಮ್ಯಾಕ್ಸ್ ಇದೆ ಈ ಪ್ರಯೋಗವನ್ನು ಯಾರೂ ಮಾಡಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ.
ಚಲನಚಿತ್ರಗಳನ್ನು, ಚಿತ್ರನಟರನ್ನು ಅತಿಯಾಗಿ ಪ್ರೀತಿಸುವ ಉತ್ತರ ಕರ್ನಾಟಕದ ತಾಳಿಕೋಟೆಯ ಗಾವಡೆ ಬ್ರದರ್ಸ್ ಈ ಚಿತ್ರ ನಿರ್ಮಿಸಿದೆ ಜಗತ್ತಿನಲ್ಲಿ ವಿಳಾಸವಿಲ್ಲದ ವ್ಯಕ್ತಿಯೇ ಇಲ್ಲ. ಆದಾಗ್ಯೂ ಅಪ್ಪ ಅಮ್ಮನ ಹೆಸರಿಲ್ಲದೆ ತಮ್ಮದೇ ವಿಳಾಸ ಹೊಂದಬೇಕೆಂದು ಬಯಸುವ ಯುವಕನ ಸುತ್ತ ಸುತ್ತುವ ಕಥೆ ಹೊಂದಿರುವ ಚಿತ್ರ 'ಎಲ್ಲಿ ನನ್ನ ವಿಳಾಸ’. ಹುಟ್ಟಿದ ಪ್ರತಿಯೊಬ್ಬರಿಗೂ ತಂದೆ ತಾಯಿ ವಿಳಾಸ.... ಅದನ್ನು ಬಿಟ್ಟು ನಮ್ಮದೇ ವಿಳಾಸ ಹುಡುಕಿಕೊಂಡು ಹೋದಾಗ ಏನಾಗುತ್ತದೆ? ತಂದೆ, ತಾಯಿ ಮಾರ್ಗದರ್ಶನ ಧಿಕ್ಕರಿಸಿದರೆ ಎದುರಿಸಬೇಕಾಗುವ ಪರಿಣಾಮವೇನು ಎಂಬುದು ಚಿತ್ರಕಥೆ ಚಿತ್ರದಲ್ಲಿ ಯಾವುದೇ ಹಿಂಸೆ ಅಥವಾ ಅಶ್ಲಿಲ ದೃಶ್ಯಗಳಿಲ್ಲ ಎಂದು ನಿರ್ದೇಶಕ ಸಾಗರ್ ಗಾವಡೆ ತಿಳಿಸಿದ್ದಾರೆ. ಸಂತೋಷ್ ಗಾವಡೆ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಛಾಯಾಗ್ರಹಣ ಸುರೇಶ್, ಸಾಹಸ ಜಾನಿ ಮಾಸ್ಟರ್ ಹಾಗೂ ಅಕುಲ್ ಮಾಸ್ಟರ್ ನೃತ್ಯ ನಿರ್ದೇಶನವಿದೆ ಮಹೇಶ್ ಜೋಗಿ ಸಂಗೀತ ನಿರ್ದೇಶಿಸಿದ್ದು, 4 ಹಾಡುಗಳಿವೆ. ತಮಿಳುನಾಡು ಮೂಲದ ಅಜಯ್ ಆದಿತ್ ನಾಯಕ ನಟನಾಗಿ, ಪವಿತ್ರಾ ನಾಯಕ್ ನಾಯಕಿಯಾಗಿದ್ದು, ಸೂರ್ಯದೀಪ್, ಲಕ್ಕಿ ರಘು ನಾಯಕನ ಗೆಳೆಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ ಹಿರಿಯ ನಟ ಗಣೇಶ್ ರಾವ್, ನಾಯಕಿಯ ತಂದೆಯಾಗಿ, ಯುವ ಜನತೆಗೆ ಬುದ್ಧಿ ಹೇಳುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.