ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶೀಘ್ರವೇ ಸಿಹಿಸುದ್ದಿ ನೀಡಲಿರುವ ಟಿಟಿಡಿ

ತಿರುಮಲ, ಮೇ ೧೨,   ತಿಮ್ಮಪ್ಪನ ಭಕ್ತರಿಗೆ    ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)  ಸದ್ಯದಲ್ಲೇ  ಸಿಹಿ ಸುದ್ದಿ  ನೀಡುವ ಲಕ್ಷಣಗಳು  ಕಂಡುಬರುತ್ತಿವೆ.ತಿಮ್ಮಪ್ಪನ    ದರ್ಶನಕ್ಕಾಗಿ  ಭಕ್ತರಿಗೆ  ಅನುಮತಿಸಲು  ತಯಾರಿ ನಡೆಸುತ್ತಿದೆ. ಕೇಂದ್ರ  ಸರ್ಕಾರದ   ಆದೇಶ ನೋಡಿಕೊಂಡು  ಭಕ್ತರಿಗೆ   ದರ್ಶನ ಅವಕಾಶ ಕಲ್ಪಿಸುವ    ದಿನವನ್ನು  ನಿಗದಿಗೊಳಿಸಲಿದೆ  ಎಂದು ತಿಳಿದುಬಂದಿದೆ. 
ಸಾಮಾಜಿಕ ಅಂತರ  ಕಟ್ಟುನಿಟ್ಟಾಗಿ   ಪಾಲಿಸಬೇಕಾಗಿರುವ   ಕಾರಣ    ತಿಮ್ಮಪ್ಪನ ದರ್ಶನ  ವಿಧಾನದಲ್ಲಿ   ಸಾಕಷ್ಟು   ಬದಲಾವಣೆ  ತರಲು   ಟಿಟಿಡಿ   ತಯಾರಿ  ನಡೆಸುತ್ತಿದೆ   ಎಂಬ  ಮಾಹಿತಿ ಲಭ್ಯವಾಗಿದೆ.ಈ ಹಿಂದಿನಂತೆ  ಒಮ್ಮೆಗೆ    ಸಾವಿರಾರು ಮಂದಿಗೆ  ಅವಕಾಶ ಇನ್ನೂ ಸಾಧ್ಯವಿಲ್ಲವಾಗಿದ್ದು,   ಕೇವಲ ಸೀಮಿತ  ಸಂಖ್ಯೆಯ  ಭಕ್ತರಿಗೆ   ದರ್ಶನದ  ಅನುಮತಿ  ನೀಡಲಿದೆ.  ಕ್ಯೂ  ಕಾಂಪ್ಲೆಕ್ಸ್ ನಲ್ಲಿ  ಭಕ್ತರು  ಕಾಯುವ  ವಿಧಾನವನ್ನು ತಾತ್ಕಾಲಿಕವಾಗಿ   ಟಿಟಿಡಿ  ಅಂತ್ಯವಾಡಲಿದೆ,   ಟೈಮ್  ಸ್ಲಾಟ್  ನಿಂದ   ಬಂದ ಭಕ್ತರಿಗೆ   ತಕ್ಷಣವೇ  ದರ್ಶನ  ವ್ಯವಸ್ಥೆ ಮಾಡಲಿದೆ. ಮೊದಲು ಪ್ರಾಯೋಗಿಕವಾಗಿ  ಸ್ಥಳೀಯರನ್ನು ದರ್ಶನಕ್ಕೆ  ಅನುಮತಿ ನೀಡಲಾಗುವುದು. ಈ ವಿಧಾನ ಪರಿಶೀಲಿಸಿ  ಹೆಚ್ಚುವರಿ ದರ್ಶನ   ಮಾದರಿ  ಜಾರಿಯ  ಬಗ್ಗೆ  ಟಿಟಿಡಿ  ನಿರ್ಣಯ  ಕೈಗೊಳ್ಳಲಿದೆ. ಎಲ್ಲವೂ ಸರಿ ಹೋದರೆ  ಶೀಘ್ರದಲ್ಲಿಯೇ  ಭಕ್ತರಿಗೆ  ತಿಮ್ಮಪ್ಪನ ದರ್ಶನಕ್ಕೆ ಅನುಮತಿ ಲಭಿಸಲಿದೆ.