ಬೆಂಗಳೂರು/ಕೋಲ್ಕತಾ, ಮೇ 02 ಇಂದು ಪ್ರಸಿದ್ಧ ಬಂಗಾಳಿ ಚಿತ್ರನಿರ್ದೇಶಕ ದಿವಂಗತ ಸತ್ಯಜಿತ್ ರೇ ಅವರ ಜನ್ಮದಿನ ಕೋಲ್ಕತಾದಲ್ಲಿರುವ ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಸಂಸ್ಥೆ (ಎಸ್ ಆರ್ ಎಫ್ ಟಿಐ)ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಘಟಿಕೋತ್ಸವ ನಡೆಯಲಿದ್ದು, ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾಥರ್ಿಗಳಿಗೆ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಪ್ರಮಾಣ ಪತ್ರ ವಿತರಿಸಲಿದ್ದಾರೆ
ಸತ್ಯಜಿತ್ ರೇ ಅವರು ನಿರ್ದೇಶಕ ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಕಥೆಗಾರ ಮಾತು ಕಲಾ ವಿನ್ಯಾಸಕ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆ. ಅವರ ಪಥೇರ್ ಪಾ0ಚಾಲಿ, ಅಪರಾಜಿತೊ ಮೊದಲಾದ ಚಿತ್ರಗಳು ಹೆಸರಾಂತ ನಿದರ್ೆಶಕರಾದ ಅಕಿರಾ ಕುರೋಸಾವಾ, ಸ್ಟೀವನ್ ಸ್ಪೀಲ್ಬರ್ಗ, ಮಾರ್ಟಿನ್ಸೊರ್ಸಿ ಮುಂತಾದವರ ಮೆಚ್ಚುಗೆಗೆ ಪಾತ್ರವಾಗಿದೆ. ಸತ್ಯಜಿತ್ ರೇ 36 ಚಿತ್ರಗಳನ್ನುನಿರ್ದೇಶಿಸಿದ್ದು ಈ ಎಲ್ಲ ಅತ್ಯದ್ಭುತ ಚಿತ್ರಗಳಿಂದ ಬಹುತೇಕ ಕಲಾವಿದರು ಸ್ಫೂರ್ತಿ ಪಡೆದಿದ್ದಾರೆ.