ಶ್ರೀನಗರ, ಫೆ 19, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಶೋಧ ಕಾಯರ್ಾಚರಣೆಯಲ್ಲಿ ಮೂವರು ಉಗ್ರರು ಕೊಲ್ಲಲ್ಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಉಗ್ರರ ಅಡಗುವಿಕೆ ಬಗ್ಗೆ ಖಚಿತ ಮಾಹಿತಿ ಆಧರಿಸಿ ರಾಷ್ಟ್ರೀಯ ರೈಫಲ್ಸ್, ಜಮ್ಮು ಕಾಶ್ಮೀರ ಪೊಲೀಸರ ವಿಶೇಷ ಕಾಯರ್ಾಚರಣೆ ಗುಂಪು ಮತ್ತು ಸಿ ಆರ್ ಪಿ ಎಫ್ ನಿಂದ ಜಂಟಿಯಾಗಿ ಕನ್ಜಿಬಾಲ್, ಟ್ರಾಲ್ ಮತ್ತು ಪುಲ್ವಾಮಾಗಳಲ್ಲಿ ಬುಧವಾರ ಬೆಳಗಿನ ಜಾವ ಕಾಯರ್ಾಚರಣೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ಎಲ್ಲ ಹೊರಹೋಗುವ ಮಾರ್ಗಗಳನ್ನು ಬಂದ್ ಮಾಡಿದ್ದು ಭದ್ರತಾ ಪಡೆ ಹಳ್ಳಿಯ ನಿದರ್ಿಷ್ಟ ಪ್ರದೇಶ ಹೊಕ್ಕುವ ಸಂದರ್ಭದಲ್ಲಿ ಉಗ್ರರು ಹಠಾತ್ತನೆ ಸ್ವಯಂಚಾಲಿತ ಆಯುಧಗಳೊಂದಿಗೆ ದಾಳಿ ನಡೆಸಿದ್ದಾರೆ. ಭದ್ರತಾ ಪಡೆ ತಕ್ಕ ಪ್ರತ್ಯುತ್ತರ ನೀಡಿದ್ದು ಈ ಕಾಯರ್ಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಇತ್ತೀಚಿನ ವರದಿ ಲಭ್ಯವಾದಾಗ ಕಾಯರ್ಾಚರಣೆ ಇನ್ನೂ ಮುಂದುವರಿದಿತ್ತು. ಯಾವುದೇ ಅಹಿತಕರ ಘಟನೆ ತಡೆಯಲು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ ಎಂದೂ ಸಹ ಮೂಲಗಳು ತಿಳಿಸಿವೆ.