ಯರಗಟ್ಟಿ 13: ಕೇಂದ್ರ ಸರ್ಕಾರ ಸಹಕಾರ ಸಂಸ್ಥೆಗಳ ಮೇಲೆ ವಿಧಿಸಿರುವ ಆದಾಯ ತೆರಿಗೆಯಿಂದ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದು ಸಹಕಾರ ಕ್ಷೇತ್ರವನ್ನು ಉಳಿಸಿ ಬೆಳೆಸಲು ಟಿಡಿಎಸ್ ಹಾಗೂ ಜಿಎಸ್ಟಿ ಆದಾಯ ತೆರಿಗೆಯನ್ನು ರದ್ದು ಮಾಡಬೇಕೆಂದು ನಿದರ್ೇಶಕ ಕನರ್ಾಟಕ ರಾಜ್ಯ ಪತ್ತಿನ ಸಹಕಾರ ಮಹಾಮಂಡಳ ಬೆಂಗಳೂರ ಉಮೇಶ ಬಾಳಿ ಆಗ್ರಹಿಸಿದರು.
ಯರಗಟ್ಟಿ ತಾಲೂಕಿನ ಸಹಕಾರ ಸಂಘಗಳ ಒಕ್ಕೂಟ ಹಮ್ಮಿಕೊಂಡಿರುವ ಸಹಕಾರ ಸಂಘಗಳ ಮೇಲಿನ ತೆರಿಗೆ ನೀತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಐವತ್ತೇರಡು ಸಾವಿರಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ, ಕೋಟ್ಯಾಂತರ ಜನ ಸದಸ್ಯರೊಂದಿಗೆ ಲಕ್ಷಾಂತರ ನಿರುದ್ಯೋಗಿಗಳಿಗೆ ಸಹಕಾರಿ ಕ್ಷೇತ್ರ ಉದ್ಯೋಗ ಕಲ್ಪಿಸಿಕೊಟ್ಟಿದೆ. ಡಿ.17 ರಂದು ಜಿಲ್ಲಾಮಟ್ಟದ ಎಲ್ಲ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಬ್ರಹತ್ ಪ್ರತಿಭಟನೆಯೊಂದಿಗೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸಕರ್ಾರಕ್ಕೆ ಮನವಿ ಅರ್ಪಿಸಲಿದ್ದು ಮುಂದೆ ಕೇಂದ್ರ ಸಚಿವೆ ನಿರ್ಮಲಾ ಶಿತಾರಾಂ ಅವರನ್ನು ನಿಯೊಗವೊಂದು ಬೇಟಿ ಮಾಡಿ ಮನವರಿಕೆ ಮಾಡಲಿದ್ದೇವೆ ಎಂದರು.ಅಝಾದ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಎ.ಕೆ.ಜಮಾದಾರ ಮಾತನಾಡಿ ಸುಮಾರು 110 ವರ್ಷಗಳಿಂದ ಸಹಕಾರ ಕ್ಷೇತ್ರ ದೇಶದಲ್ಲಿನ ರೈತರ, ಬಡವರ, ಮದ್ಯಮ ವರ್ಗದವರ ಸೇವೆ ನೀಡುವ ಕ್ಷೇತ್ರವಾಗಿದ್ದು ಸಹಕಾರ ಕ್ಷೇತ್ರದ ಲಾಬಾಂಶದಲ್ಲಿ ಶೇ30 ರಷ್ಟು ತೆರಿಗೆ ಕಟ್ಟುವುದು ಯಾವ ನ್ಯಾಯ ಎಂದರು.
ಪಟ್ಟಣದ ವಿವಿಧ ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಸಹಸ್ರಾರು ಸಂಖ್ಯೆಯಲ್ಲಿ ಕನಕದಾಸ ಅರ್ಬನ್ ಸೊಸೈಟಿಯಿಂದ ತೆರಿಗೆ ನೀತಿ ವಿರೋಧಿಸಿ ಘೋಷನೆಗಳನ್ನು ಕೂಗುತ್ತಾ ಎಮ್.ಜಿ.ರಸ್ತೆ ಮೂಲಕ ಮಹಾತ್ಮಾ ಗಾಂಧಿಜಿ ಪ್ರತಿಮೆಗೆ ಹೂ ಮಾಲೆ ಹಾಕಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ರಾಯಣ್ಣ ಪ್ರತಿಮೆಗೆ ಮಲಾರ್ಪಣೆ ಮಾಡಿ ಉಪ ತಹಶೀಲ್ದಾರ ಎಸ್.ಜಿ ದೊಡಮನಿ ಅವರಿಗೆ ಮನವಿ ಅಪರ್ಿಸಿದರು.
ಈ ಸಂಧರ್ಭದಲ್ಲಿ ಬಸವರಾಜ ಹಸಬಿ, ಎಮ್.ಬಿ.ರಾಯರ, ಶಂಕರ ರೆಬ್ಬೇನ್ನವರ, ಕುಮಾರ ಹಿರೇಮಠ, ಶಿವಾನಂದ ಮದ್ದಾನಿ, ಚಿದಂಬರ ಕಟ್ಟಿಮನಿ, ಶಂಕರಗೌಡ ಪಾಟೀಲ, ಸಿದ್ದಪ್ಪ ದೇವರಡ್ಡಿ, ಮೋಹನ ಹಾದಿಮನಿ, ಮಕ್ತುಂಸಾಬ ದಳವಾಯಿ, ಬಿ.ಎಲ್.ಹೊರಟ್ಟಿ, ಒಗೆಪ್ಪ ಬಿಜ್ಜನ್ನವರ, ಮಹೆಬೂಬ ನಧಾಪ, ವಿವಿಧ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.