ಹೈದರಾಬಾದ್, ಜ 21: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಮಾಡುವ ಸರ್ಕಾರದ ವಿಕೇಂದ್ರಿಕರಣ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಟಿಡಿಪಿ ಸಂಸದ ಜಯದೇವ್ ಗಲ್ಲಾ ಅವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಅಮರಾವತಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರು ಮತ್ತು ಗಲ್ಲಾ ನಡುವೆ ನಡೆದ ಘರ್ಷಣೆಯ ಕಾರಣ ಗಲ್ಲಾ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದ್ದು,
ಜಯದೇವ್ ಗಲ್ಲಾ ಅವರನ್ನು ಮಂಗಳಾಗಿರಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು, ಇದೇ 31ವರೆಗೆ ಕಸ್ಟಡಿಗೆ ಒಪ್ಪಿಸಲಾಗಿದೆ .
ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಆಂಧ್ರಪ್ರದೇಶ ವಿಕೇಂದ್ರಿಕರಣ ಮಸೂದೆ ಅಂಗೀಕರಿಸಿದ ಕ್ರಮ ವಿರೋಧಿಸಿ ಆಂಧ್ರಪ್ರದೇಶದ ಹಲವೆಡೆ ಪ್ರತಿಭಟನೆ ಭುಗಿಲೆದ್ದಿದೆ.
ಆಂಧ್ರಪ್ರದೇಶ ಮೂರು ಭಾಗ ಮಾಡಿ ಮೂರು ರಾಜಧಾನಿ ಮಾಡುವುದರಿಂದ ರಾಜ್ಯಕ್ಕೆ ಬಹಳ ಆರ್ಥಿಕ ಹೊರೆಯಾಗಲಿದೆ. ಇದನ್ನು ತಡೆಯಲು ಹೋರಾಟ ಮಾಡುತ್ತಿರುವುದಾಗಿ ಸಂಸದ ಜಯದೇವ್ ಗಲ್ಲಾ ಹೇಳಿದ್ದಾರೆ.