ಲೋಕದರ್ಶನ ವರದಿ
ತಾಂಬಾ ಇಂಡಿ ಸಿಂದಗಿ 12: ತಾಲೂಕಿನಲ್ಲಿ ತೀವೃ ಬರಗಾಲದ ಛಾಯೇ ಆವರಿಸಿದೆ ರೈತಾಪಿ ಜನ ಕುಡಿಯಲು ನೀರು, ಹೋಟ್ಟೆಗೆ ಹಿಟ್ಟು ನೀಡುವ ಉದ್ಯೋಗ ಅರಸಿ ಜಾನುವಾರುಗಳನ್ನು ಮಾರಿಯೋ ಇಲ್ಲವೆ ಕಟ್ಟಿಕೊಂಡೋಗುಳೆ ಹೊರಟಿದ್ದಾರೆ. ಅದೇ ಕೊಳಚೆ ಪಕ್ಕದಲ್ಲಿ ಗುಂಡಿ ತೊಡಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು, ಮೆಕ್ಕಜೋಳದ ಮೇವು ಜಾನುರುಗಳಿಗೆ ನೀಡುವುದು ಇನ್ನೊಂದಿಷ್ಟು ಸಾಂತ್ವನದ ಮಾತುಗಳು ಇವಿಷ್ಟು ಬಿಟ್ಟರೆ ಸರಕಾರದ ಸಾದನೆ ಮತ್ತೇನು ಇಲ್ಲ.
ಬ್ರಿಟಿಷರು ಆಡಳಿತ ಮಾಡುವ ಸಂದರ್ಭದಲ್ಲಿ ವಿಜಯಪೂರ ನಗರದಲ್ಲಿ ಬರ ನಿವಾರಣೆ ಸಂಸ್ಥೆ ಎಂದು ತೆರೆದು ಬರ ನಿವಾರಣೆಗೆ ಪ್ರಯತ್ನಿಸುತ್ತ 72 ವರ್ಷ ಕಳೆದರು ವಿಜಯಪೂರ ಜಿಲ್ಲೆ ಬರಗಾಲದಿಂದ ಮುಕ್ತವಾಗಿಲ್ಲ ಬರಗಾಲ ನಿವಾರಣಾ ಸಂಸ್ಥೆ ಅದ್ಯಾವ ಕೆಲಸದಲ್ಲಿ ತೊಡಗಿದೆಯೋ ತಿಳಿಯದಂತಾಗಿದೆ. ಈ ಕುರಿತು. ಶ್ರಮಿಸಬೇಕಾದ ಜಿಲ್ಲೆಯ ಜನಪ್ರತಿನಿಧಿಗಳು ಬರಗಾಲದಿಂದ ಜನರು, ರೈತರು, ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವುದನ್ನು ನೋಡುತ್ತ ಜಾಣ ಕುರುಡುತನ ಪ್ರದರ್ಶನ ಸುತ್ತಿದ್ದಾರೆ.
ಕೆರೆಗೆ ನೀರು ತುಂಬುವ ಕಾಮಗಾರಿ ಎಲ್ಲಿ?
ಕೆರೆಗೆ ನೀರು ತುಂಬುವ ಕಾಮಗಾರಿಗೆ ರೂ 103 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಶೀಘ್ರ ಕೆಲಸ ಪ್ರಾರಂಭಿಸಲಾಗುವದು ಎಂದು ಜನಪ್ರತಿನಿದಿಗಳು ಹೇಳಿದರು. ಇನ್ನೂ ಅದರ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ನೀರಿಲ್ಲದೆ ರೈತರ ಜೀವನನಾಡಿಯಾದ ಲಿಂಬೆ, ಒಣಗಿ ಹೋಗಿವೆ. ದಾಳಿಂಬೆ, ದ್ರಾಕ್ಷಿ ಬಿಸಿಲಿಗೆ ಸುಟ್ಟು ಹೋಗಿವೆ. ರೈತರ ಜಮೀನಿನಲ್ಲಿ ಒಣಗಿ ನಿಂತ ಲಿಂಬೆ ಬೆಳೆಗೆ ಬೆಂಕಿ ಹಚ್ಚಿ ಸುಟ್ಟು ಹಾಕುತ್ತಿದ್ದದ್ದು ಕಣ್ಣಿನಿಂದ ನೋಡದ ಪರಿಸ್ಥಿತಿ ಎದುರಾಗಿದೆ. ಓಣಗಿ ಹೋದ ಬೆಳೆಗೆ ಪರಿಹಾರ ನೀಡಬೇಕಾದ ಸರಕಾರ ಹಾಗೂ ಜನ ಪ್ರತಿನಿದಿಗಳು ಜಾಣಕುರುಡುತನ ಮೆರೆಯುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು 200 ಹೆಕ್ಟರ್ ಜಮೀನುಗಳಲ್ಲಿ ಬೆಳೆದ ವಿವಿಧ ತೋಟಗಾರಿಕೆ ಬೆಳೆಗಳು ಒಣಗಿ ಹೋಗಿವೆ. ಅಧಿಕಾರಿಗಳು ಸಮಿಕ್ಷೆ ಮಾಡಿದ ಕಡತ ಧೂಳು ತಿನ್ನುತ್ತಿವೆ. ಆದರೆ ರೈತರಿಗೆ ಸಾಂತ್ವನ ಹೇಳುತ್ತಿದ್ದಾರೆ ಹೊರತು ಪರಿಹಾರ ಮಾತ್ರ ಶೂನ್ಯ. ಬಿರುಕು ಬಿಟ್ಟ ನೆಲ ಜೀವ ಸುಡುವ ಭಯಂಕರ ಬಿಸಿಲಿನಲ್ಲಿ ಮುಗಿಯುಲಿನತ್ತ ದೃಷ್ಠಿ ಹಾಯಿಸಿ ಮಳೆರಾಯ ಯಾವಾಗ ಕರುಣೆ ತೋರುತ್ತಾನೆ ಎಂದು ರೈತರು ದಾರಿ ಕಾಯುತ್ತಿದ್ದಾರೆ. ಜಮೀನಿಗೆ ಹೋದರೆ ಕಡು ಬಿಸಿಲಿನ ಝಳ, ಗಿಡಗಳು ಒಣಗಿ ನಿಂತಿವೆ. ಹುಳಹುಪ್ಪಟ್ಟಿಗಳ ಕಿರುಚಾಟ, ಕುಡಿಯಲು ಹನಿ ನೀರು ಸಿಗುವುದಿಲ್ಲ ದನ
ಕರುಗಳಿಗೆ ಹೊಲದಲ್ಲಿ ಹುಲ್ಲು, ಕುಡಿಯಲು ನೀರಿಲ್ಲ.
ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರಕಾರ ತಾಲೂಕಿನ 5604 ಹೆಕ್ಟರ್ ಜಮೀನದಲ್ಲಿ ಲಿಂಬು, ದಾಳಿಂಬೆ, ದ್ರಾಕ್ಷಿ, ಬಾಳೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಇವೆ ಇದರಲ್ಲಿ 200 ಹೆಕ್ಟರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳು ನೀರಿನ ಅಭಾವದಿಂದ ಒಣಗಿ ಹೋಗಿವೆ ಸುಮಾರು 294 ರೈತರು ತೋಟಗಾರಿಕಾ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ರೈತರು ಪಡೆದ ಸಾಲ ತಿರಿಸುವುದು ಹೀಗೆ ಎಂದು ಚಿಂತಾಕ್ರಾಂತರಾದ ರೈತರು ಕೊನೆಯ ಪಕ್ಷ ಸಾಲ ತೀರಿಸಲು ಜಮೀನು ಮಾರುವ ಪ್ರಸಂಗ ಬರುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ. ನೀರಿನ ಅಭಾವದಿಂದ ಬೆಳೆ ಕಳೆದುಕೊಂಡು ರೈತರಿಗೆ ಬೆಳೆ ಪರಿಹಾರ ನೀಡಬೇಕು. ತೋಟಗಾರಿಕೆ ಬೆಳೆಗಳಾಧ ಲಿಂಬೆ ಧಾಳಿಂಬೆ ದ್ರಾಕ್ಷೀ ಬೇಳೆಗಳು ಹತ್ತು ವರ್ಷದಿಂದ ಜೋಪಾನ ಮಾಡಿರುತ್ತಾರೆ. ಆಬೇಳೆಗಳಿಗೆ ಸರಕಾರ ನೀರು ವದಿಗಿಸಬೇಕು ಎನ್ನುವ ಈ ರೈತರ ಬೇಡಿಕೆಗೆ ಸರಕಾರ ಸ್ಪಂದಿಸುವದೆ ಎಂಬುದು ಜನರ ಪ್ರಶ್ನೆಯಾಗಿದೆ.