ಲೋಕದರ್ಶನ ವರದಿ
ತಾಂಬಾ 21: ದುಡ್ಡೆ ದೋಡ್ಡಪ್ಪ ವಿದ್ಯೇಯೆ ಅದರಪ್ಪ ಎಂಬುದನ್ನು ಸಾಬಿತುಪಡಿಸಿದ ಗಂಗಾಮತ ಸಮಾಜದ ಬಡ ವಿದ್ಯಾಥರ್ಿ ಮಂಜುನಾಥ ತಳವಾರ ಎಂದು ಎಸ್.ವ್ಹಿವ್ಹಿಸಂಘದ ಚೇರಮನ್ ಜೆ.ಎಸ್.ಹತ್ತಳ್ಳಿ ಹೇಳಿದರು.
ಗ್ರಾಮದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿ ಶಿಕ್ಷಣದಲ್ಲಿ ಬಡವರು ಶ್ರೀಮಂತರು ಮೇಲು ಕೀಳು ಎಂಬ ಭಾವನೆ ಇಲ್ಲಾ, ಅದಕ್ಕಾಗಿ ಬಡತನದಲ್ಲಿ ಬೆಳೆದ ವಿದ್ಯಾರ್ಥಿ ಮಂಜುನಾಥ ಶಿವಾನಂದ ತಳವಾರ ಶೇ.99ರಷ್ಟು ಅಂಕ ಪಡೆದು ಗ್ರಾಮದ ಕೀರ್ತಿ ಹೇಚ್ಚಿಸಿದ್ದಾರೆ ಅದರಂತೆ ಸೈನಿಕ ಸ್ಕೋಲ್ನಲ್ಲಿ ವಿದ್ಯೆಯನ್ನು ಪಡೆದು ಶಿವರಾಮ ಮಣಗಿರಿ ಐಎಎಸ್ ಪಾಸಾಗಿರುವದು ಶ್ಲಾಘನಿಯ ಎಂದರು.
ಮಾಜಿ ತಾಪಂ ಸದಸ್ಯ ಎಸ್.ಎಸ್.ಕಲ್ಲೂರ ಮಾಜಿ ಗ್ರಾಪಂ ಅಧ್ಯಕ್ಷ ಎಮ್.ಡಿ.ಬಡದಾಳ, ಗುರುಸಂಗಪ್ಪ ಬಾಗಲಕೋಟ, ಎಮ್.ಡಿ.ಬೈರಾಮಡಗಿ, ರೇವಪ್ಪಾ ದೇವಪ್ಪಾ ತದ್ದೆವಾಡಿ, ಲಕ್ಷ್ಮಣ ಹಿರೇಕುರಬರ, ಹಣಮಂತ ಕಾಳೆ, ಸಂಜಿವ ಗೋರನಾಳ, ರಾಕೇಶ ಕಿನಗಿ, ಸೇರಿದಂತೆ ಮತ್ತಿತರರು ಇದ್ದರು.