ಲೋಕದರ್ಶನ ವರದಿ
ತಾಂಬಾ 15: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಗ್ರಾಮದ ಬಸವೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ವಸತಿ ಶಾಲೆಯ ಕಾರ್ಯ ಶ್ಲಾಘನೀಯ ಎಂದು ಸಿಂದಗಿ ಶಾಸಕ ಎಮ್.ಸಿ. ಮನಗೂಳಿ ಹೇಳಿದರು.
ಅವರು ಶಾಸಕರ ಅನುದಾನದಲ್ಲಿ ಗ್ರಾಮದ ಬಸವೇಶ್ವರ ಸಕರ್ಾರಿ ಹಿರಿಯ ಪ್ರಾಥಮಿಕ ವಸತಿ ಶಾಲೆಯ ಕೋಣೆಗಳ ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಯಾವ ರೀತಿ ಕಾಮಗಾರಿ ಸಡೆಸಲಾಗುತ್ತಿದೆ ಎನ್ನುವ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿ ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಈ ಹಿಂದೆ ಏನಾಗಿದೆಯೋ ಗೊತ್ತಿಲ್ಲ. ಆದರೆ ಇನ್ನು ಮೂಂದೆ ಯಾವುದೇ ಕಳಪೆ ನಡೆಯಕೂಡದು. ಹಾಗೊಂದು ವೇಳೆ ಕಳಪೆ ನಡೆದದ್ದು ಕಂಡುಬಂದಲ್ಲಿ ಸಂಬಂಧಿಸಿದವರನ್ನೇ ಹೊಣೆ ಮಾಡಲಾಗುತ್ತದೆ, ಗುತ್ತಿಗೆದಾರರು ಎಚ್ಚೆತ್ತುಕೊಂಡು ಕಾಮಗಾರಿ ಮಾಡಬೇಕು. ಮಾನವನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಅತ್ಯವಶ್ಯವಾದದು, ಪ್ರತಿಯೊಬ್ಬ ಮಕ್ಕಳಿಗೆ ಪಾಲಕರು ಶಿಕ್ಷಣ ಕೊಡಿಸಲು ಮುಂದಾಗಬೇಕು, ಇಂದಿನ ಕಂಪ್ಯೂಟರ್ ಯುಗದಲ್ಲಿ ಪ್ರತಿಯೊಬ್ಬ ಮಕ್ಕಳಲ್ಲಿ ವಿಭಿನ್ನವಾದ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಿಕ್ಷಕರು ಮಕ್ಕಳಿಗೆ ಸಂಸ್ಕಾರವನ್ನು ಬೆಳೆಸಬೇಕು. ಮಕ್ಕಳ ಉಜ್ವಲ ಭವಿಷ್ಯ ರೂಪಿಸಲಿಕ್ಕೆ ಇಂತಹ ಶಾಲೆಗಳು ಪೂರಕವಾಗಿವೆ ಎಂದರು.
ಸುಭಾಷ್ ಅಳಗುಂಡಗಿ, ಸಿದ್ದಪ್ಪ ಕಿಣಗಿ, ಮಾದೇವಪ್ಪ ಮೂಲಿಮನಿ, ಚೇತನಗೌಡ ಪಾಟೀಲ, ಕಾಂತನಗೌಡ ಪಾಟೀಲ, ಸಿದ್ದು ಹತ್ತಳ್ಳಿ, ರಾಜು ಆಳೂರ, ದರೆಪ್ಪ ಕೆಂಗನಾಳ, ಭಿರಪ್ಪ ವಗ್ಗಿ, ಮಾಶೀಮ ಮಂಗಲಗೇರಿ, ರೀಯಾಜ್ ಮೂಮಿನ್, ಮಲಕಪ್ಪ ಹೋತರ್ಿ, ಅಪ್ಪಾಸಾಹೇಬ ಅವಟಿ, ವಿಠ್ಠಲ ಮೂಲಿಮನಿ, ಗೋಪಾಲ್ ಅವರಾದಿ, ಅಡಿವಪ್ಪ ರೋಟಿ, ಮಾಶೀಮ ಮಂಗಲಗೇರಿ, ಸುರೇಶ ಶಿವಪೂರ, ವಿಠ್ಠಲ ಹೋತರ್ಿ, ಸದಾಶಿವಾ ಗಡದ, ಬಂದು ನಾಗಾವಿ, ದುಡಪ್ಪ ಜಕಾತ್ತಿ, ಚಂದು ಮಾಶ್ಯಾಳ, ಸತೀಶ ನಾಟೀಕಾರ ಮತ್ತಿತರು ಉಪಸ್ಥಿತರಿದ್ದರು