ತಾಂಬಾ 14: ರೈತರಿಗೆ ದೊರಕಬೇಕಾದ ಪ್ರತಿಯೊಂದು ಯೋಜನೆಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿತ್ತೇವೆ. ಎಂದು ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೆದಲಗಿ ಹೇಳಿದರು
ಹಿರೇರೂಗಿ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತೊಗರಿ ಕೇಂದ್ರದ ಸದುಪಯೋಗ ಮಾಡಿ ಕೋಳ್ಳಬೇಕು ನನ್ನ ಕ್ಷೇತ್ರದಲ್ಲಿ ಅಷ್ಟೇ ಅಭಿವೃದ್ದಿ ಮಾಡದೆ ಇಡೀ ಜಿಲ್ಲೆಯಲ್ಲಿ ಅಭೀವೃದ್ದಿ ಕಾರ್ಯಗಳು ಪ್ರಾರಂಭಗೊಂಡಿವೆ ಪ್ರತಿಯೊಬ್ಬ ರೈತನಿಗೆ ಸರಕಾರದ ಯೋಜನೆ ತಲುಪಿಸಲು ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತಿದೆನೆ ಇದಕ್ಕೆ ತಮ್ಮ ಸಹಕಾರ ಇರಬೇಕು ಎಂದರು.
ಅಧ್ಯಕ್ಷ ಮೋದಿನಸಾಬ ಬಾಗವಾನ ಮಾತನಾಡಿ ಸರಕಾರ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟನಲ್ಲಿ ತೊಗರಿಗೆ ಬೆಂಬಲ ಬೆಲೆ ಘೋಷಿಸಿದೆ ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಈಗಾಗಲೇ ರೈತರು ತೊಗರಿ ಮಾರಟಕ್ಕೆ ಹೆಸರು ನೊಂದಣಿ ಮಾಡಿದವರು ಸರತಿಗೆ ಅನುಗುಣವಾಗಿ ಕೇಂದ್ರಕ್ಕೆ ನೀಡಬೇಕು ಖರೀದಿ ಕೇಂದ್ರದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು ಉಪಾಧ್ಯಕ್ಷ ನೀಲಮ್ಮ ಜಮಾಧಾರ ಸದಸ್ಯರಾದ ಹಣಮಂತ ಲಚ್ಯಾಣ. ಹಣಮಂತ ಮಸಳಿ. ಜಟ್ಟೆಪ್ಪ ವಂದಾಲ. ಜಟ್ಟೆಪ್ಪ ಪೂಜಾರಿ. ಜಟ್ಟೆಪ್ಪ ತಳಕೇರಿ. ಪರಸುರಾಮ ಹತ್ತರಕಿ. ರಾಮಣ್ಣ ಚೀಲಿ. ಶಿವಕಾಂತವ್ವ ಉಪ್ಪಾರ. ಶ್ರೀದೇವಿ ಹಲಸಂಗಿ. ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಾದ ಎಸ್.ಆರ್.ಹೊಗಾರ ಗ್ರಾಂಪಂ ಅಧ್ಯಕ್ಷ ಜಟ್ಟೆಪ್ಪ ಮರಡಿ, ಬಸಲಿಂಗಪ್ಪ ಜಂಬಗಿ, ಮಲ್ಲಿಕಾರ್ಜುನ ಗಿಣ್ಣಿ ಪರಶುರಾಮ ಹತ್ತರಕಿ, ಶಿವು ಹುಗಾರ, ರಾಮು ಚೀಲಿ ಇದ್ದರು.