ತಾಂಬಾ 05: ಪತ್ರಿಕೆಯಲ್ಲಿ ಇಂಡಿ ದೇವರಹಿಪ್ಪರಗಿ ರಸ್ತೆ ಹದಗೆಟ್ಟು ಹೋಗಿದೆ ಇತ್ತ ಹೋರಳಿ ನೋಡಿ ಎಂಬ ತೆಲೆಬರಹದ ಕಾಟಾಚಾರಕ್ಕಾಗಿ ದುರಸ್ತಿ ಕಾರ್ಯ ಕೈಗೊಂಡಿರುವದರಿಂದ ಗ್ರಾಮಸ್ಥರು ದುರಸ್ಥಿ ಕೈಗೊಂಡಿರುವ ಕಾಮಗಾರಿ ಬಿಟ್ಟು ಹೊಸ ರಸ್ತೆಯನೇ ಮಾಡಬೇಕಾಗಿತ್ತು, ಇಂಡಿ ವಿಭಾಗದಲ್ಲಿ ಬರುವ ಪಿಡಬ್ಲ್ಯೂಡಿ ಕಛೇರಿಗೆ ಸಂಬಂಧಪಟ್ಟ ರಸ್ತೆಗಳು ನವಿಕರಣ ಮಾಡಬೇಕಾದ ಅಧಿಕಾರಿಗಳು ಮೂಗಿಗೆ ತುಪ್ಪದ ವಾಸನೆ ತೋರಿಸುವ ಹಾಗೆ ಕೇವಲ ರಸ್ತೆಗಳು ದುರಸ್ಥಿ ಮಾಡುತ್ತಿದ್ದಾರೆ ಎಂದು ಹಾಜಿ. ಧಡೇದ, ಮಾಸಿಮ. ಮಂಗಳಬೇಡೆ ಕರವೇ ಗ್ರಾಮ ಘಟಕದ ಅಧ್ಯಕ್ಷರು ಶ್ರೀಶೈಲ್, ಸಂತೋಷ ಆಗ್ರಹೀಸಿದ್ದಾರೆ.
ರಸ್ತೆ ದುರಸ್ಥಿ ಕಾಮಗಾರಿ ಬಿಟ್ಟು ಹಾದಿನೇ ಹೊಸದಾಗಿ ಮಾಡಬೇಕು, ರಾತ್ರಿ ಆದರೆ ಸಾಕು ಲೈಟ್ ಫೋಕಸ್ದಲ್ಲಿ ಸೈಕಲ್ ಮೋಟರ್ ಅವರಿಗತ್ತು ರೋಡಯಾವದೂ ಗುಂಡಿಯಾವದೂ, ಮುಂದಿನದು ಏನು ಕಾಣಲ್ಲ ನೋಡರಿ, ಸಂಬಂಧಪಟ್ಟ ಶಾಸಕರು ಮತ್ತು ಅಧಿಕಾರಿಗಳು ರಸ್ತೆ ದುರಸ್ಥಿ ಬಿಟ್ಟು ಹೊಸ ರಸ್ತೆನೇ ಮಾಡಬೇಕೆಂದು ಯಲ್ಲಪ್ಪ. ಸಾಗನೂರ ಗೊರನಾಳ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.