ತಾಂಬಾ: ತೊಗರಿ ಖರೀದಿಗಾಗಿ ನೋದಣಿಗೆ ಸೇರಿದ ರೈತ ಸಮೂಹ

ಲಕ್ಷ್ಮಣ ಹಿರೇಕುರಬರ

ತಾಂಬಾ 25: ಬೆಂಬಲ ಬೇಲೆ ಯೋಜನೆಯಡಿ ತೊಗರಿ ಖರೀದಿಗೆ ಸರಕಾರ ಆರಂಬಿಸಿರುವ ನೋದಣಿ ಪ್ರಕ್ರೀಯೆಗೆ ನೀಡಿದ ಗಡುವಿಗೆ ಕೇವಲ 5ದಿನ ಬಾಕಿ ಇದೆ. ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹರಾರಿ ಸಂಘದ ಆಡಳಿತ ಮಂಡಳಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರ ಹಗ್ಗ ಜಗಾಟದಲ್ಲಿ ತೊಗರಿ ಖರೀದಿಯ ನೋದಣಿ ಕಾರ್ಯ ಸೂರುವಾಗಿ ಕೇವಲ ನಾಲ್ಕುದಿನವಾಗಿದೆ, ಆದರೆ ಅಧಿಕಾರಿಗಳ ಯಡವಟ್ಟು ತಂತ್ರಾಂಶದ ಲೋಪದೋಷದಿಂದ ರೈತರು ಅಗತ್ಯ ದಾಖಲೆ ಸಂಗ್ರಹಕ್ಕೆ ಸರ್ಕಸ್ ಮಾಡುವಂತಾಗಿದೆ. ಇದರಿಂದ ಪಿತ್ತ ಪದಾರ್ಥವಾಗಿರುವ ತೊಗರಿ ಬೇಳೆಗಾರನ ನೆತ್ತಿಗೆರುವಂತೆ ಮಾಡಿದೆ.

ಗ್ರಾಮ ಲೆಕ್ಕಾಧಿಕಾರಿಗಳಿಗೆ ದುಂಬಾಲು: ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ದರ್ಶಕ ತಂತ್ರಾಂಶದಡಿ ಬೇಳೆಗಳ ಸಮಿಕ್ಷೆ ಮಾಡಿದ್ದಾರೆ ಆದರೆ ಕೆಲಗ್ರಾಮಲೆಕ್ಕಾಧಿಕಾರಿಗಳ ಅಸಮರ್ಪಕ ಕಾರ್ಯ ನಿರ್ವಹಣೆ ಮತ್ತು ಸಮಿಕ್ಷೆ ವೇಳೆ ರೈತರ ಅಗತ್ಯ ಮಾಹಿತಿ ನೀಡದ ಕಾರಣ ಎಪ್ಐಡಿ ತಂತ್ರಾಂಶದಲ್ಲಿ ತೊಗರಿ ಬೇಳೆ ನಮೊದಾಗಿಲ್ಲ. ಕೆಲ ರೈತರ ಪಹಣಿ ಸಂಖ್ಯೆಯು ನಮೊದಾಗಿಲ್ಲ. ಹೀಗಾಗಿ ರೈತರು ಬೆಳೆ ದರ್ಶಕದಲ್ಲಿ ತೊಗರಿ ಬೆಳೆ ಸೇರಿಸುವಂತೆ ಒತ್ತಾಯಿಸಿ ಗ್ರಾಮಲೆಕ್ಕಾಧಿಕಾರಿಗಳಿಗೆ ದುಂಬಾಲು ಬೀಳ್ಳುತ್ತಿದ್ದಾರೆ.

 ಬೆಳೆದಶ್ಕ ತಂತ್ರಾಂಶದಲ್ಲಿ ಆಕ್ಷೇಪಣಿಗೆ ಅವಕಾಶವಿದೆ ಗ್ರಾಮ ಲೇಕ್ಕಾಧಿಕಾರಿಗಳು ಬೆಳೆದರ್ಶಕ ಯಾಪ್ ಹೊಂದಿದ ಟ್ಯಾಬ್ ಸಮೇತ ಮತ್ತೆ ರೈತರ ಜಮೀನಿಗೆ ತೆರಳಿ ದೃಢ ಪಡಿಸಿಕೊಳ್ಳಬೇಕು ನಂತರ ಕಚೇರಿಗೆ ಬಂದು ಜಿಪಿಎಸ್ ಸಹಿತ ಬೆಳೆ ಪೋಟುವನ್ನು ಆಪಲೋಡ ಮಾಡಬೇಕಿದೆ ನೋದಣಿ ಸಮಸ್ಯೆ ಎದುರಿಸುತ್ತಿರುವ ರೈತರು ಸಾಕಷ್ಟು ಸಂಖ್ಯೆಯಲ್ಲಿರುವ ಕಾರಣ ಗ್ರಾಮ  ಲೆಕ್ಕಾಧಿಕಾರಿಗಳು ಎಲ್ಲ ರೈತರ ಸಮಸ್ಯೆ ಸರಿಪಡಿಸಲು ಆಗುತ್ತಿಲ್ಲ,

ಕಡಿಮೆ ಬೇಲೆಗೆ ಮಾರಾಟ: ಸರಕಾರ 6100ರೂ ಬೆಂಬಲ ಗೋಷಿಸಿದೆ ನಂತರ ನೋದಣಿ ಹಾಗೂ ಖರೀದಿಗೆ ತಂತ್ರಾಂಶ ಸೇರಿದಂತೆ ನಾನಾ ಸಮಸ್ಯೆಗಳಿಂದ ವಿಳಂಬ ನೀತಿ ಅನುಸರಿಸುತ್ತದೆ ಇದರಿಂದ ಸಣ್ಣ ಪುಟ್ಟ ರೈತರು ಮತ್ತು ಹಣಕಾಸಿನ ತೋಂದರೆ ಅನುಭವಿಸುತ್ತಿರುವ ರೈತರು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್ ತೊಗರಿಗೆ 4500ರೂಗಳಿಂದ 5ಸಾವಿರ ರೂವರೆಗೆ ಮಾತ್ರ ಬೆಲೆಇದೆ ಹಿಗಾಗಿ ರೈತರು ಬೆಂಬಲ ಬೇಲೆಯಿಂದ ವಂಚಿತರಾಗುತ್ತಿದ್ದಾರೆ.