ಟಿ. ಎನ್. ಶೇಷನ್ ನಿಧನಕ್ಕೆ ಸೋನಿಯಾ ಸಂತಾಪ

ನವದೆಹಲಿ, ನ 11:   ನಿವೃತ್ತ   ಕೇಂದ್ರ  ಮುಖ್ಯ  ಚುನಾವಣಾ ಆಯುಕ್ತ  ಟಿ. ಎನ್. ಶೇಷನ್  ಅವರ ನಿಧನಕ್ಕೆ ಕಾಂಗ್ರೆಸ್  ಅಧ್ಯಕ್ಷೆ  ಸೋನಿಯಾ ಗಾಂಧಿ  ಸೋಮವಾರ ತೀವ್ರ ಸಂತಾಪ ಸೂಚಿಸಿದ್ದಾರೆ. ದೇಶದ ಚುನಾವಣಾ ಆಯೋಗವನ್ನು  ಬಲಿಷ್ಟಗೊಳಿಸಿದ ಹಾಗೂ  ಚುನಾವಣಾ ವ್ಯವಸ್ಥೆಯಲ್ಲಿ ಹಲವು ಮಹತ್ವದ ಸುಧಾರಣೆಜಾರಿಗೊಳಿಸಿ  ಪ್ರವರ್ತಕರೆನಿಸಿದ್ದ   ಶೇಷನ್  ಅವರನ್ನು  ದೇಶ ಸದಾ ಸ್ಮರಿಸಲಿದೆ ಎಂದು ಸೋನಿಯಾ ಗಾಂಧಿ  ತಮ್ಮ ಶೋಕ ಸಂದೇಶದಲ್ಲಿ  ತಿಳಿಸಿದ್ದಾರೆ.  ಶೇಷನ್  ಅತ್ಯುತ್ತಮ  ನಾಗರೀಕ  ಸೇವೆಗಳ  ಅಧಿಕಾರಿಯೂ ಆಗಿದ್ದರು,   ಕೇಂದ್ರ ಸಂಪುಟ ಕಾರ್ಯದರ್ಶಿಯಾಗಿಯೂ  ಅವರು   ಮಹತ್ವದ  ಸೇವೆ ಸಲ್ಲಿಸಿದ್ದರು  ಎಂದು  ಸೋನಿಯಾ ಗಾಂಧಿ ಸ್ಮರಿಸಿದ್ದಾರೆ.