ಲಖನೌ, 26 ಇಂದಿನಿಂದ ಆರಂಭವಾಗುವ ಸೈಯದ್ ಮೋದಿ ಬ್ಯಾಡ್ಮಿಂಟನ್ ಇಂಟನ್ಯರ್ಾಷನಲ್ ಚಾಂಪಿಯನ್ಶಿಪ್ ಟೂನರ್ಿಯಿಂದ ಕೊನೆಯ ಕ್ಷಣದಲ್ಲಿ ಸೈನಾ ನೆಹ್ವಾಲ್ ವಿಥ್ಡ್ರಾ ಮಾಡಿಕೊಂಡಿದ್ದಾರೆ. ಮೂರಿ ಬಾರಿ ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್ ಅನಾರೋಗ್ಯ ಹಾಗೂ ಗಾಯದ ಸಮಸ್ಯೆಯನ್ನು ದೀರ್ಘ ಕಾಲ ಎದುರಿಸಿದ್ದರು. ಕಳೆದ ಆರು ಟೂನರ್ಿಗಳಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಮೊದಲನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದರು.
29ರ ಪ್ರಾಯದ ಹೈದರಾಬಾದ್ ಆಟಗಾತರ್ಿ ಭಾನುವಾರವಷ್ಟೆ ಮುಂದಿನ ವರ್ಷ ಆರಂಭವಾಗುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ನಿಂದ ಹೊರ ನಡೆಯುವ ನಿಧರ್ಾರ ಘೋಷಿಸಿದ್ದರು. ಇದೀಗ ಟೂನರ್ಿ ಆರಂಭವಾಗುವ ಕೊನೆಯ ನಿಮಿಷದಲ್ಲಿ ಸೈಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಿಂದ ಹೊರ ನಡೆದಿದ್ದಾರೆ. ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಪಿ.ವಿ ಸಿಂಧು ಅವರು ಕೂಡ ಈ ಟೂನರ್ಿಯಿಂದ ಹೊರ ನಡೆದಿದ್ದಾರೆ. ಆದರೆ, ಈಗ ಭಾರತದ ಸಿಂಗಲ್ಸ್ ಅಗ್ರ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್, ಭಾನುವಾರವಷ್ಟೇ ಸ್ಕಾಟೀಷ್ ಓಪನ್ ಚಾಂಪಿಯನ್ ಆಗಿರುವ ಲಕ್ಷ್ಯಸೇನ್ ಅವರು ತಾರಾಗಣದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. ಜತೆಗೆ, ಸಾಯಿ ಪ್ರಣೀತ್, ಎಚ್.ಎಸ್ ಪ್ರಣಯ್, ಪರುಪಳ್ಳಿ ಕಶ್ಯಪ್ ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.