ಫುಟ್ಬಾಲ್ ಅಭಿಮಾನಿಗಳಿಗೆ ರಷ್ಯಾ ಅಧ್ಯಕ್ಷರಿಂದ ಸಿಹಿ ಸುದ್ದಿ


ಮಾಸ್ಕೋ 16: ಯಶಸ್ವೀ ಫುಟ್ಬಾಲ್ ವಿಶ್ವಕಪ್ ಟೂನರ್ಿ ಆಯೋಜನೆ ಮಾಡಿ ಸೈ ಎನಿಸಿಕೊಂಡ ರಷ್ಯಾ ಈಗ ಆದೇ ಖುಷಿಯಲ್ಲಿ ಫುಟ್ಬಾಲ್ ಅಭಿಮಾನಿಗಳಿಗೆ ಬಂಪರ್ ಉಡುಗೊರೆ ಘೋಷಿಸಿದೆ. 

ರಷ್ಯಾದಲ್ಲಿ ನಡೆದ ಫೀಫಾ ವಿಶ್ವಕಪ್ ಟೂನರ್ಿ ಯಶಸ್ವಿ ಆಯೋಜನೆ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಫುಟ್ಬಾಲ್ ಅಭಿಮಾನಿಗಳ ವೀಸಾ ನಿಯಮವನ್ನು ಸಡಿಲ ಮಾಡಿದ್ದು, ಫುಟ್ಬಾಲ್ ಅಭಿಮಾನಿಗಳಿಗೆ ಉಚಿತವಾಗಿ ರಷ್ಯಾ ಪ್ರವೇಶಕ್ಕೆ ವೀಸಾ ನೀಡುವುದಾಗಿ ಘೋಷಿಸಿದ್ದಾರೆ.  

ಈ ಬಗ್ಗೆ ಮಾತನಾಡಿರುವ ಪುಟಿನ್ ಅವರು, ಅತ್ಯಂತ ಯಶಸ್ವೀ ವಿಶ್ವಕಪ್ ಟೂನರ್ಿಗೆ ಆತಿಥ್ಯ ವಹಿಸಿದ್ದಕ್ಕಾಗಿ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಫೀಫಾ ಸಂಸ್ಥೆ ನಮ್ಮ ಮೇಲಿಟ್ಟಿದ್ದ ಭರವಸೆನ್ನು ಉಳಿಸಿಕೊಂಡಿದ್ದೇವೆ. ರಷ್ಯಾದ ಮತ್ತು ವಿಶ್ವಾದ್ಯಂತ ಇರುವ ಕ್ರೀಡಾಭಿಮಾನಿಗಳಿಗಾಗಿ ನಾವು ಇದನ್ನು ಮಾಡಿದ್ದು, ಟೂರ್ನಮೆಂಟ್ ಗಾಗಿ ರಷ್ಯಾಗೆ ಆಗಮಿಸಿದ ವಿದೇಶಿ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಪುಟಿನ್ ಹೇಳಿದ್ದಾರೆ. 

ಇನ್ನು ರಷ್ಯಾ ಅಧ್ಯಕ್ಷ ಪುಟಿನ್ ಫುಟ್ಬಾಲ್ ಅಭಿಮಾನಿಗಳಿಗೆ ವೀಸಾ ಉಚಿತ ಘೋಷಣೆ ಮಾಡಿದ್ದು, ಅಭಿಮಾನಿಗಳ ಗುರುತಿನ ಚೀಟಿ ಹೊಂದಿರುವ ವಿದೇಶಿ ಫುಟ್ಬಾಲ್ ಪ್ರೇಮಿಗಳು ಇನ್ನು ಮುಂದೆ ಒಂದು ವರ್ಷಗಳ ಕಾಲ ಉಚಿತವಾಗಿ ರಷ್ಯಾ ಪ್ರವೇಶಿಸಲು ವೀಸಾ ಪಡೆಯಬಹುದು ಎಂದು ಪುಟಿನ್ ಘೋಷಣೆ ಮಾಡಿದ್ದಾರೆ.