ಲೋಕದರ್ಶನ ವರದಿ
ಶಿರಹಟ್ಟಿ 09: ಸ್ವಾಮಿ ವಿವೇಕಾನಂದರನ್ನು ಇಡೀ ದೇಶ ಮಾತ್ರವಲ್ಲ, ಇಡೀ ಪ್ರಪಂಚವೇ ಅವರ ಆದರ್ಶಗಳನ್ನು ಬಹಳ ಗೌರವಾದರಗಳಿಂದ ನೋಡುತ್ತದೆ. ಚಿಕಾಗೋದಲ್ಲಿ ಅವರು ನಡೆಸಿದ ಭಾಷಣ ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ಘಟನೆಯನ್ನು ಸುವಣರ್ಾಕ್ಷರಗಳಲ್ಲಿ ಬರೆದಿಡುವಂಥಹ ಕಾರ್ಯವಾಗಿದ್ದು, ಅಂದು ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ ಹಾಗೂ ಅವರ ತತ್ವಜ್ಞಾನಕ್ಕೆ ವಿದೇಶಿಯರಿಂದಲೂ ಜೈಕಾರದ ಗೌರವವನ್ನು ವಿದೇಶೀ ನೆಲದಲ್ಲಿ ದೊರಕಿಸಿಕೊಟ್ಟಿರುವುದು ಭಾರತೀಯರಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೂ ಇದು ಚೈತನ್ಯವನ್ನು ನೀಡಿದ್ದನ್ನು ನೋಡಿದರೆ ಸ್ವಾಮಿ ವಿವೇಕಾನಂದರು ಭಾರತಾಂಬೆಯ ಹೆಮ್ಮೆಯ ಮಗನಾಗಿ ಜನಿಸಿದವರು ಎಂದರೆ ತಪ್ಪಾಗಲಾರದು ಎಂದು ಪ್ರೋಫೆಸರ್ ಕೆ ಎ ಬಳಿಗೇರ ಕರೆ ನೀಡಿದರು.
ಅವರು ಸ್ಥಳೀಯ ಎಫ್.ಎಂ. ಡಬಾಲಿ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೇ ವಷರ್ಾಚರಣೆ ಸಮಿತಿಯ ಸಹಯೋಗದೊಂದಿಗೆ ಜರುಗಿದ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಜೀವನ ಮೌಲ್ಯಗಳು, ವಿಶ್ವಶಾಂತಿ, ವಿವಿಧತೆಯಲ್ಲಿ ಏಕತೆಯ ಬಗ್ಗೆ ಹಾಗೂ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ವಿಧ್ಯಾಥರ್ಿಗಳಿಗೆ ತಲುಪಿಸುವ ಉದ್ದೇಶದಿಂದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮಹಾಂತೇಶ ಭಜಂತ್ರಿ ಮಾತನಾಡುತ್ತಾ, ಮನುಷ್ಯನಿಗೆ ಶಾಂತಿ ನೆಮ್ಮದಿಯನ್ನು ತರುವುದೇಧರ್ಮದ ಮೂಲ ಉದ್ದೇಶವಾಗಿದೆ. ಯುದ್ಧದಲ್ಲಿ ಅಸಹಕಾರದ ಬದಲು ಸಹಕಾರ, ನಾಶದ ಬದಲು ಸ್ವೀಕಾರ, ವೈಮನಸ್ಸಿನ ಬದಲು ಶಾಂತಿ ಹಾಗೂ ಸಮನ್ವಯವೆಂಬ ವಿವೇಕಾನಂದರ ವಿಚಾರಧಾರೆಗಳನ್ನು ನೋಡಿದರೆ ರೋಮಾಂಚನವಾಗುತ್ತದೆ ಹಾಗೂ ಇವರ ಎಲ್ಲ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮೆಲ್ಲರ ಜೀವನದ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೋ. ಸುಧಾ ಹುಚ್ಚಣ್ಣವರ ಸ್ವಾಗತಿಸಿದರು, ಎಂ.ಕೆ ಲಮಾಣಿಯವರು ವಂದಿಸಿದರು, ಎನ್ ಹನುಮರಡ್ಡಿಯವರು ನಿರೂಪಿಸಿದರು. ಪಿ.ಎನ್ ಕುಲಕಣರ್ಿ, ವೈಎಸ್ ಪಂಗಣ್ಣವರ, ಎಫ್.ಎ ಬಾಬುಖಾನವರ ಹಾಗೂ ಎಲ್ಲ ಶಿಬ್ಬಂದಿ ವರ್ಗದವರು ಹಾಗೂ ಕುಮಾರಿ ಆರ್ ಆರ್ ಹೆಗಡೆ ಅವರ ಸಂಗಡಿಗಳು ಪ್ರಾರ್ಥನೆ ಮಾಡಿದರು.