ಸ್ವಾಮಿ ವಿವೇಕಾನಂದರ ಧ್ಯೇಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಯುವಕರಿಗೆ ಕರೆ

ಕೊಪ್ಪಳ 15: ಸ್ವಾಮಿ ವಿವೇಕಾನಂದರ ಧ್ಯೇಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ  ಕೊಪ್ಪಳ ರಾಮಕೃಷ್ಣ ವಿವೇಕಾನಂದ ಆಶ್ರಮದ ಚೈತನ್ಯಾನಂದ ಮಹಾಸ್ವಾಮಿಗಳು ಯುವಕರಿಗೆ ಕರೆ ನೀಡಿದರು. 

            ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಕರ್ಾರಿ ಪ್ರಥಮ ದಜರ್ೆ ಪದವಿ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಇತ್ತೀಚೆಗೆ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾದ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆ  ಹಾಗೂ ಜೀವನಕೌಶಲ್ಯ ತರಬೇತಿ  ಕಾರ್ಯಗಾರ.ಉದ್ಘಾಟಿಸಿ ಅವರು ಮಾತನಾಡಿದರು. 

            ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳು, ಶಿಸ್ತು, ಹಾಗೂ ಸಿದ್ದಾಂತಗಳನ್ನು ಪ್ರತಿಯೊಬ್ಬ ವಿದ್ಯಾಥರ್ಿಯು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಕೌಶಲ್ಯ ಮತ್ತು ಜೀವನದ ಗುರಿ ಅರಿವಾಗುತ್ತದೆ ಹಾಗೂ ಪರಿಪಕ್ವವಾಗುತ್ತದೆ.  ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳು, ಶಿಸ್ತು, ಹಾಗೂ ಸಿದ್ದಾಂತಗಳನ್ನು ಪ್ರತಿಯೊಬ್ಬ ವಿದ್ಯಾಥರ್ಿಯು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಕೌಶಲ್ಯ ಮತ್ತು ಜೀವನದ ಗುರಿ ಅರಿವಾಗುತ್ತದೆ.  ವಿವೇಕಾನಂದರ ಧ್ಯೇಯ ಆದರ್ಶಗಳನ್ನು ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚೈತನ್ಯಾನಂದ ಮಹಾಸ್ವಾಮಿಗಳು ಹೇಳಿದರು. 

            ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕರಾದ ರಾಜೇಶ ಜಿ. ನಾಡಗೀರ ಅವರು ಮಾತನಾಡಿ, ಪ್ರಸ್ತುತ ಈಗಿನ ವಿದ್ಯಾಥರ್ಿಗಳಿಗೆ ಜೀವನ ಕೌಶಲ್ಯಗಳಲ್ಲಿ ಸಹಾನುಭೂತಿ, ಸ್ವಯಂ ಅರಿವು, ಭಾವನೆಗಳ ನಿರ್ವಹಣೆ ಒತ್ತಡ ನಿವಾರಿಸುವಿಕೆ, ಸಂವಹನ ಕೌಶಲ್ಯ, ಸೃಜನಾತ್ಮಕ ಚಿಂತನೆ, ಸಮಸ್ಯೆ ಪರಿಹರಿಸುವುದು ಹಾಗೂ ಸ್ವಯಂ ನಿಧರ್ಾರ ತೆಗೆದುಕೊಳ್ಳುವುದು ಎಂಬ ಹತ್ತು ಅಂಶಗಳಿಂದ ವ್ಯಕ್ತಿಯು ಮಾನಸಿಕವಾಗಿ ಸದೃಡನಾಗುತ್ತಾನೆ ಆಗಿದ್ದಾಗ ಮಾತ್ರ ವ್ಯಕ್ತಿ ಸಮಾಜದೊಡನೆ ಬೆರೆಯಲು ಸಾಧ್ಯವಾಗುತ್ತದೆ ಎಂದರು. 

            ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯರಾದ ಡಾ. ಸಿ.ಬಿ. ಚಿಲ್ಕರಾಗಿ ಅವರು ವಹಿಸಿದ್ದರು.  ಜಿಲ್ಲಾ ಯುವ ಸಮಾಲೋಚಕ ಭೀಮೆಶ ಕುರಿ ಯುವ ಸ್ಪಂದನಾ ಹಾಗೂ ಜೀವನ ಕೌಶಲ್ಯ ತರಬೇತಿಯ ಕಾರ್ಯಕ್ರಮದ ಕುರಿತು ಪರಿಚಯಿಸಿದರು.  ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕಿ ಪ್ರೊ. ಶೋಭಾ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರೊ. ಪ್ರಭುರಾಜ, ಪ್ರೊ. ನಟರಾಜ ಪಾಟೀಲ, ಪ್ರೊ. ಮಾರುತೇಶ ಬಿ. ಹಾಗೂ ಯುವ ಸ್ಪಂದನಾ ಯುವ ಪರಿವರ್ತಕಿ ಪದ್ಮಾ ವೈ. ಕಾತರಕಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.