ಬೆಳಗಾವಿ: ಭಾರತೀಯ ಯುವಜನಾಂಗದ ಸ್ಪೂತರ್ಿಯ ಸೆಲೆಯಾಗಿರುವ ಸ್ವಾಮಿ ವಿವೇಕಾನಂದರು ಎಂದೂ ಸಂಕುಚಿತ ದೃಷ್ಟಿಯವರಾಗಿರಲಿಲ್ಲ, ರಾಮಕೃಷ್ಣ ಪರಮಹಂಸರ ಜೀವಶಿವಾ ಸಿದ್ದಾಂತದಿಂದ ಪ್ರೇರಿತರಾಗಿದ್ದರಲ್ಲದೆ ಸರ್ವದರ್ಮದ ತತ್ವಗಳನ್ನು ಅಧ್ಯಯನ ಮಾಡಿದವರೂ ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ಉದ್ಯಾನವನದಲ್ಲಿ ರವಿವಾರ ಆಯೋಜಿಸಿದ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಡಾ. ಸ್ವಾಮಿ ವಿವೇಕಾನಂದರ ಜೊತೆ ಮಿಡಿವ ಯುವಜನತೆ ಎನ್ನುವ ಸಂವಾದ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿ, ವೇದ, ವೇದಾಂತ, ಬೈಬಲ್, ಕುರಾನ್ ಮತ್ತು ಬುದ್ಧ ತತ್ವಗಳೆಲ್ಲವನ್ನೂ ತೀಕ್ಷ್ಣ ದೃಷ್ಟಿಯಿಂದ ಅಧ್ಯಯನ ಮಾಡಿದ್ದ ಅವರು 'ನಮ್ಮ ಮಾತೃ ಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮಿದುಳು, ಇಸ್ಲಾಮಿನ ದೇಹ- ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ' ಎಂದು ಧ್ವನಿಯೆತ್ತಿ ಪ್ರತಿಪಾದಿಸಿ ಸೌಹಾರ್ದತೆಯ ಸಂಕೇತವಾಗಿದ್ದಾರೆ. ಹಿಂದೆಂದಿಗಿಂತಲೂ ಇಂದು ನಮ್ಮ ದೇಶಕ್ಕೆ ಕೋಮು ಸೌಹಾರ್ದತೆಯ ಅಗತ್ಯವಿದ್ದು ಸ್ವಾಮಿ ವಿವೇಕಾನಂದರನ್ನು ಇಂಥ ಜನಪರ ನೆಲೆಗಳಲ್ಲಿ ಅಥರ್ೈಸಬೇಕು ಎಂದರು.
ಈ ಸಂದರ್ಭದಲ್ಲಿ ಅಡಿವೆಪ್ಪ ಇಟಗಿ, ಮನೋಹರ ಕಾಂಬಳೆ, ಆಕಾಶ ಬೇವಿನಕಟ್ಟಿ, ಸೈದು ಹಿರೇಮನಿ, ಸುನಿಲ್ ನಾಟೀಕಾರ್ ಗೌತಮ ಮಾಳಗೆ, ವಿಠ್ಠಲ ಹರಿಜನ, ವಿದ್ಯಾಶ್ರೀ ಕಾಂಬಳೆ ಸಂವಾದದಲ್ಲಿ ಪ್ರತಿಕ್ರಿಯಿಸಿದರು. ಪ್ರಾರಂಭದಲ್ಲಿ ಕಾವೇರಿ ಬುಕ್ಯಾಳಕರ, ಸುಧಾ ಕೊಟಬಾಗಿ, ಅನಿತಾ ಬನಪ್ಪಗೋಳ, ಗೋಪಿಕಾ ಹೇರಗೆ ಅವರು ಕ್ರಾಂತಿಗೀತೆಗಳನ್ನು ಹಾಡಿದರು.
ವಿಶೇಷ ಆಹ್ವಾನಿತರಾಗಿ ಜ್ಞಾನದೇವ ಕಾಂಬಳೆ, ಶಂಕರ ಬಾಗೇವಾಡಿ, ಅತೀಶ ಢಾಲೆ, ಶಿವಾನಂದ ನಾಯಕ, ವಿಶಾಲ ಮೇತ್ರಿ, ರಾಘವೇಂದ್ರ ಬನಹಟ್ಟಿ, ಸೂರಜ ಗಾಣಿಗೇರ, ರಾಜು ಕಾಂಬಳೆ, ಬಸವರಾಜ ಸುಲ್ತಾನಪುರೆ ಭಾಗವಹಿಸಿದ್ದರು. ಸಂತೋಷ ನಾಯಕ ಸ್ವಾಗತಿಸಿದರು, ದೇಮಣ್ಣಾ ಸೊಗಲದ ವಂದಿಸಿದರು. ಬಾಲಕೃಷ್ಣ ನಾಯಕ ಕಾರ್ಯಕ್ರಮ ನಿರೂಪಿಸಿದರು.
ಲಲಿತಾ ಕ್ಯಾಸನ್ನವರಗೆ ಗ್ಲೋಬಲ್ ಟೀಚರ್ ರೋಲ್ ಮಾಡೆಲ್ ಅವಾಡರ್್
ಬೆಳಗಾವಿ: ಇಲ್ಲಿನ ಭೂವಿಗಲ್ಲಿ ಶಾಲೆಯ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಲಲಿತಾ ಮ ಕ್ಯಾಸನ್ನರವರಿಗೆ ಎಮ್ವಿಎಲ್ಎ (ಮನುಷ್ಯ ಬಲ ವಿಕಾಸ ಲೋಕಸೇವಾ ಅಕ್ಯಾಡೆಮಿ) ಟ್ರಸ್ಟದಿಂದ ಗ್ಲೋಬಲ್ ಟೀಚರ ರೋಲ್ ಮಾಡೆಲ್ ಅವಾಡರ್್ ನೀಡಿ ಗೌರವಿಸಿದೆ.
ಮುಂಬೈನಲ್ಲಿ ಇತ್ತೀಚಿಗೆ ನಡೆದ ಗ್ಲೋಬಲ್ ಟೀಚರ ಅವಾಡರ್್ 2019ರ ಅಂತರಾಷ್ಟ್ರೀಯ ಸಮಾರಂಭದಲ್ಲಿ ಪದ್ಮಶ್ರೀ ಡಾ. ವಿಜಯಕುಮಾರ ಶಾಹ ಅಂತರಾಷ್ಟ್ರೀಯ ಭಾಷಣಕಾರ ಸುಶಿಲ್ಕುಮಾರ ಅಂತರಾಷ್ಟ್ರೀಯ ಸ್ಕಾಲರ್ ಸುಮೆದಾ ದಾನಿ ಎಂ ವಿ ಎಲ್ ಎ ಟ್ರಸ್ಟ್ ನ ಸಂಸ್ಟಾಪಕ ಮತ್ತು ಅದ್ಯಕ್ಷ ಕೃಷ್ಣಾ ಜಗದಾಳೆ ಇವರ ಉಪಸ್ಟಿತಿಯಲ್ಲಿ ಲಲಿತಾ ಮ ಕ್ಯಾಸನ್ನವರ ಇವರಿಗೆ ಸ್ಮರಣಿಕೆ ಪ್ರಸಸ್ತಿ ಪತ್ರ ಚಿನ್ನದಪದಕವನ್ನು ನೀಡಿ ಗೌರವಿಸಿದೆ. ಶಿಕ್ಷಕಿಯ ಈ ಸಾಧನೆಗೆ ಶಿಕ್ಷಕರು ಜಟಛಿ ಅಧ್ಯಕ್ಷರು ಸ್ನೇಹಿತರು ಕುಟುಂಬದವರು ಅಭಿನಂದಿಸಿದ್ದಾರೆ.