ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿನೆ
Swami Vivekananda Jayanti and National Road Safety Week inaugurated
ಧಾರವಾಡ 13 : ವಿವೇಕಾನಂದವರು ಐಶ್ಚರ್ಯ, ಕೀರ್ತಿ, ಸುಖ, ಮತ್ತು ಸಂತೋಷ ಕೇವಲ ಕ್ಷಣಿಕ ಐಹಿಕ ಸುಖೋಪಭೋಗಿಯಾದ ಹುಳುವಿನಂತೆ ಸಾಯುವ ಬದಲು ಸತ್ಯವನ್ನು ಸಾರುತ್ತಾ “ಏಳಿ ಎದ್ದೇಳಿ ಕಾರ್ಯನಿರತರಾಗಿರಿ” ಎಂದು ನಾಡಿನ ಯುವ ಜನತೆ ಕರೆಯನ್ನು ಕೊಟ್ಟವರು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಪರಶುರಾಮ ಎಫ್. ದೊಡಮನಿ ಹೇಳಿದರು. ಭಾರತ ಸರಕಾರ ಮೇರಾ ಯುವ ಭಾರತ ಕೇಂದ್ರ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಸಂಚಾರಿ ಪೊಲೀಸ್ ಠಾಣೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸೋನಿಯಾ ಶಿಕ್ಷಣ ಮಹಾವಿದ್ಯಾಲಯ, ವಾಯುಪುತ್ರ ಸಾಂಸ್ಕೃತಿಕ ಕಲಾ, ಕ್ರೀಡಾ, ಶಿಕ್ಷಣ ಹಾಗೂ ಗ್ರಾಮಾಭಿವೃದ್ಧಿ ಯುವ ಸಂಘ ಧಾರವಾಡ ಇವರುಗಳ ಸಹಯೋಗದಲ್ಲಿ ಸೋನಿಯಾ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ವಿಶ್ವದ ಯುವ ಸಮೂಹವನ್ನು ಬಡಿದೆಬ್ಬಿಸಿದೆ. ಅಲ್ಲದೆ ದೇವರು ಮತ್ತು ಮಾನವ, ಧರ್ಮ ಮತ್ತು ವಿಜ್ಞಾನ, ವ್ಯಕ್ತಿ ಮತ್ತು ಸಮಾಜ ಹಾಗೂ ಸ್ತ್ರೀ ಮತ್ತು ಪುರುಷರ ನಡುವಿನ ಕಂದಕವನ್ನು ದೂರಮಾಡಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಸ್.ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವಕುಲದ ಒಳತಿಗಾಗಿ ತಮ್ಮ ಜೀವನ ಪೂರ್ತಿ ಶ್ರಮಿಸಿ, ಭಾರತದ ಸಂಸ್ಕೃತಿ, ಹಿರಿಮೆ, ಗರಿಮೆ,ವೇದ, ಉಪನಿಷತ್ತನ್ನು ಪರಿಚಯಿಸುವ ಮೂಲಕ ದೇಶದ ಶ್ರೀಮಂತ ಪರಂಪರೆ ಎತ್ತಿಹಿಡಿದವರು. ಇಂದಿನ ಯುವ ಜನರು ಗುರಿಯೊಂದಿಗೆ ಮುನ್ನೆಡೆಯಿರಿ ಎಂದು ಕಿವಿಮಾತು ಹೇಳಿದರು. ಧಾರವಾಡ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಸ್ಪೆಕ್ಟರ್‌ರಾದ ಶ್ರೀನಿವಾಸ ಸಿ. ಮೇಟಿ ಮಾತನಾಡಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಹಾಗೂ ಎಲ್ಲ ವಾಹನ ಚಾಲಕರು ಹಾಗೂ ಮಾಲೀಕರು ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳ ಒಂದು ಸೆಟ್‌ಅನ್ನು ವಾಹನದಲ್ಲಿ ಜೋಪಾನವಾಗಿ ಇಟ್ಟಿರಬೇಕು. ದಾಖಲೆಗಳು ಇಲ್ಲದೆ ರಸ್ತೆಗೆ ಬರಬಾರದು.
ಚಾಲನಾ ಪರವಾನಗಿ, ವಾಹನದ ಆರ್.ಸಿ, ವಿಮೆ ದಾಖಲೆ, ಎಮಿಷನ್ ಪ್ರಮಾಣ ಪತ್ರ ಮತ್ತಿತರ ವಿವರ ಹೊಂದಿರಬೇಕು. ಕಾನೂನುಗಳು ಬದಲಾಗಿದ್ದು ನಿಯಮಗಳ ಉಲ್ಲಂಘನೆಗೆ ದಂಡ ಹೆಚ್ಚಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಅಧಿಕಾರಿಗಳಾದ ದೀಪಾ ಜಾವುರ ಮಾತನಾಡಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಬಾಲ್ಯ ವಿವಾಹದ ಅನಾಹುತಗಳನ್ನ ತಪ್ಪಿಸಲು ಹೆಣ್ಣು ಮಕ್ಕಳು ಜಾಗೃತರಾಗಬೇಕು ಎಂದು ತಿಳಿಸಿದರು. ಮೇರಾ ಯುವ ಭಾರತ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿಗಳಾದ ಎಮ್. ಗೌತಮ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಇಲಾಖೆ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿ ಉಪನ್ಯಾಸಕರಾದ ಕಿರಣ ತೋಟಗಂಟಿ, ಧಾರವಾಡ ಮೈ ಭಾರತ ಕೇಂದ್ರದ ಶಿವಾಜಿ.ಎನ್.ಕೆ ಹಾಗೂ ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು. ನಿರೂಪಣೆ ಸಂತೋಷ ರ ಬಶೆಟ್ಟಿ, ವಂದನಾರೆ್ಣ ಬಸವರಾಜ ಗುಡ್ಡಪ್ಪನವರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 