ಶಹಜಾನ್ಪುರ, ಸೆ 18 ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಅವರ ವಿರುದ್ದ ಮಾಡಲಾಗಿರುವ ಲೈಂಗಿಕ ಹಿಂಸೆ ಆರೋಪ ಪ್ರಕರಣ ಸಂಬಂಧ ರಚಿಸಲಾಗಿರುವ ವಿಶೇಷ ತನಿಖಾ ತಂಡ ತನಿಖೆಯನ್ನು ವಿಳಂಬ ಮಾಡುತ್ತಿದೆ ಎಂದು ಸಂತ್ರಸ್ಥೆಯ ಕುಟುಂಬ ಸದಸ್ಯರು ದೂರಿದ್ದಾರೆ.
ನ್ಯಾಯಾಲಯ ಮುಂದೆ ಸಂತ್ರಸ್ಥೆ ಹೇಳಿಕೆಯನ್ನು ದಾಖಲಿಸಿಕೊಂಡ ನಂತರವೂ ಯಾವುದೇ ಕಾನೂನು ಪ್ರಕ್ರಿಯೆಯನ್ನು ನಡೆಸದೆ ನಿಷ್ಕ್ರಿಯೆ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಲಾಗಿದ್ದ ಅತ್ಯಾಚಾರ ಪ್ರಕರಣವನ್ನು, ನಂತರ ಶಹಜಾನ್ ಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಈ ಸಂಬಂಧ ಲಿಖಿತ ಮನವಿ ಸಲ್ಲಿಸಿದ್ದರೂ, ಅತ್ಯಾಚಾರ ಆರೋಪವನ್ನು ಪ್ರಕರಣದಲ್ಲಿ ಸೇರ್ಪಡೆಗೊಳಿಸಿಲ್ಲ ಎಂದು ದೂರಿದ್ದಾರೆ.
ಶಹಜಾನ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ಥೆಯ ಕುಟುಂಬ ಸದಸ್ಯರು, ಸಂತ್ರಸ್ಥೆ ಮ್ಯಾಜಿಸ್ಟ್ರೇಟ್ ಮುಂದೆ ಅಪರಾಧ ದಂಡ ಸಂಹಿತೆ ಸೆಕ್ಷನ್ 164ರಡಿ ಹೇಳಿಕೆ ದಾಖಲಿಸಿದ್ದರೂ, ಸ್ಥಳೀಯ ಪೊಲೀಸರು ಸ್ವಾಮಿ ಚಿನ್ಮಯಾನಂದ ವಿರುದ್ದ ಅತ್ಯಾಚಾರ ಆರೋಪ ದಾಖಲಿಸಿಕೊಂಡಿಲ್ಲ, ಬಂಧನದಿಂದ ತಪ್ಪಿಸಿಕೊಳ್ಳಲು ಸ್ವಾಮಿ ಅನಾರೋಗ್ಯದ ನಾಟಕವಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕಳೆದ ಸೋಮವಾರ, ಸ್ವಾಮಿ ಚಿನ್ಮಯಾನಂದ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಕಾರಣ ಔಷಧಿ ನೀಡಿದ್ದರು. ಮಂಗಳವಾರ ಖಾಸಗಿ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ
ಈ ನಡುವೆ ಆರೋಪಿ ತನ್ನ ಕಾಲೇಜಿನ ಐವರು ಪ್ರಿನ್ಸಿಪಾಲ್ ಗಳನ್ನು ಕರೆಸಿಕೊಂಡು, ಪೊಲೀಸರು ತಮ್ಮನ್ನು ಬಂಧಿಸಿದರೂ ಕಾಲೇಜಿಗೆ ಸಂಬಂಧಿಸಿದ ಆಡಳಿತ ಸುಸೂತ್ರವಾಗಿ ನಡೆಸಿತ್ತೇನೆ ಯಾವುದೇ ಭಯ ಭೇಡ ಎಂದು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ
ಮತ್ತೊಂದು ಕಾಲೇಜು ಆರಂಭಿಸುವ ತಮ್ಮ ಕನಸನ್ನು ಯಾರೊಬ್ಬರಿಂದಲೂ ವಿಫಲಗೊಳಿಸಲು ಸಾಧ್ಯವಿಲ್ಲ. ಎಷ್ಟೇ ಬೆಲೆ ತೆತ್ತಾದರೂ ಅದನ್ನು ಆರಂಭಿಸಿಯೇ ತೀರುತ್ತೇನೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.