ಸಂಕೇಶ್ವರದಲ್ಲಿ ಉಡಾನ-11 ಸಂಭ್ರಮದ ಕಾರ್ಯಕ್ರಮ ಶ್ರಮಪಟ್ಟು ಶಿಕ್ಷಣ ಪಡೆದು ಸುಂದರವಾದ ಬದುಕನ್ನು ಕಟ್ಟಿಕೊಳ್ಳಿ: ಮೀನಾ
ಸಂಕೇಶ್ವರ 10: ವಿದ್ಯಾರ್ಥಿಗಳಲ್ಲಿ ಗುರಿ ಹೊಂದುವ ಸಂಕಲ್ಪ ಇಟ್ಟುಕೊಂಡರೆ ಮಾತ್ರ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಯಶಸ್ವಿ ಕಾಣಬಹುದು ಎಂದು ಉಡಾನ-11 ನೇ ವರ್ಷದಲ್ಲಿ ಪಾದಾರೆ್ಣಗೊಳ್ಳುತ್ತಿರುವ ಸಾಂಸ್ಕೃತಿಕ ಸಂಭ್ರಮದಲ್ಲಿ ಭಾಗವಹಿಸಿ ಪ್ರೊಬೇಶನರಿ ಆಯ್.ಎ.ಎಸ್. ಅಧಿಕಾರಿ ದಿನೇಶ ಕುಮಾರ ಮೀನಾ ಇವರು ಎಸ್.ಡಿ.ವ್ಹಿ.ಎಸ್. ಸಂಘದ ಎ.ಬಿ. ಪಾಟೀಲ, ಪಬ್ಲಿಕ್ ಸ್ಕೂಲದಲ್ಲಿ ಅತಿಥಿಗಳ ಸ್ಥಾನದಿಂದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಶ್ರಮಪಟ್ಟು ಶಿಕ್ಷಣ ಪಡೆದು ತಮ್ಮ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗಡಿಭಾಗದಲ್ಲಿ ಸಿ.ಬಿ.ಎಸ್.ಈ. ಶಾಲೆ ಆರಂಭಗೊಳ್ಳಬೇಕೆಂದು ಕಳೆದ 11 ವರ್ಷಗಳ ಕನಸು ಹಾಗೂ ಸಂಕಲ್ಪ ಇಡೆರಿದೆ ಎಂದು ಎಸ್.ಡಿ.ವ್ಹಿ.ಎಸ್. ಸಂಘದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಹಾಗೂ ಶಿಕ್ಷಣ ಪ್ರೇಮಿ ಎ.ಬಿ. ಪಾಟೀಲರು ಈ ಗಡಿ ಭಾಗದಲ್ಲಿ ಸಾಕಷ್ಟು ಬಡರೈತರ ಕುಟುಂಬದ ಮಕ್ಕಳು ಈ ಶಾಲೆಯಲ್ಲಿ ಕಲಿಯಬೇಕೆಂದು ಈ ಶಾಲೆಯನ್ನು ಆರಂಭಿಸಿದ್ದೇವೆ, ಈ ಎಸ್.ಡಿ.ವ್ಹಿ.ಎಸ್. ಸಂಘದ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸುಮಾರು 3 ವಿದ್ಯಾರ್ಥಿಗಳು ಐ.ಎ.ಎಸ್. ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಇದರ ಬಗ್ಗೆ ತಮಗೆ ಹೆಮ್ಮೆಯ ವಿಷಯವೆಂದು ಹೇಳಲು ತಮಗೆ ತುಂಬಾ ಆನಂದವೆನಿಸುತ್ತಿದೆ, ಮುಂದುವರೆದು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಛಲ ಮತ್ತು ಗುರಿ ಇವುಗಳನ್ನು ವಿದ್ಯಾರ್ಥಿಗಳು ಮೈಗೂಡಿಸಬೇಕೆಂದು ವಿದ್ಯಾರ್ಥಿಗಳಿಗೆ ತಮ್ಮ ಭಾಷಣದಲ್ಲಿ ಹೇಳಿದರು, ಇಷ್ಟೊಂದು ಉತ್ತಂಗ ಮಟ್ಟದಲ್ಲಿ ಬೆಳೆಯಲು ಇಲ್ಲಿಯ ಶಿಕ್ಷಕ ವರ್ಗ ಮತ್ತು ಶಿಕ್ಷಕಿಯರು ಅವರ ಪಾತ್ರ ಬಹಳ ಪ್ರಾಮುಖ್ಯವಾಗಿದೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ತಮ್ಮ ಶಾಲೆಯು ಒಂದನೇಯ ರಾ್ಯಂಕ ಗಳಿಸಿದೆ ಎಂದು ಹೇಳಲು ತಮಗೆ ಸಂತೋಷವಾಗುತ್ತಿದೆ, ಇದಲ್ಲದೇ ಶಿಕ್ಷಕರ ಶ್ರಮವನ್ನು ಎ.ಬಿ. ಇವರು ಶ್ಲಾಘಿಸಿದಲ್ಲದೇ ಈ ಶಾಲೆಯಲ್ಲಿ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಗಮನಾರ್ಹ ವಿಷಯವಾಗಿದೆ.
ಮಕ್ಕಳನ್ನು ನೈತಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಂಸ್ಕಾರವಾಗಿ ಇವುಗಳನೆಲ್ಲ ಶಿಕ್ಷಕರು ಮತ್ತು ಪ್ರಾಧ್ಯಾಪಕರು ಮಕ್ಕಳಿಗೆ ಶಿಕ್ಷಣ ಬೋಧಿಸಬೇಕು ದುರದುಂಡೀಶ್ವರ ವಿದ್ಯಾಸಂವರ್ಧಕ ಶಿಕ್ಷಣ ಸಂಸ್ಥೆಯು ಕಳೆದ 9 ದಶಮಾನಗಳಿಂದ ಉನ್ನತ ಶಿಕ್ಷಣ ನೀಡುತ್ತಿರುವುದು ಮತ್ತು ಸಿ.ಬಿ.ಎಸ್.ಈ ವಿದ್ಯಾರ್ಥಿಗಳು 100 ಕ್ಕೆ 98 ರಷ್ಟು ಅಂಕಗಳನ್ನು ಗಳಿಸಿ ಎಸ್.ಡಿ.ವ್ಹಿ.ಎಸ್. ಸಂಘದ ವಿಜಯ ಪತಾಕೆಯನ್ನು ಹಾರಿಸಿದ್ದಾರೆ, ಇದಕ್ಕೆಲ್ಲ ಕಾರಣಿಭೂತರಾದ ಶಿಕ್ಷಣದ ಹರಿಕಾರ ಎ.ಬಿ. ಪಾಟೀಲರು ಮತ್ತು ಸಂಸ್ಥೆಯ ಎಲ್ಲ ಅಧ್ಯಾಪಕ ಪ್ರಾಧ್ಯಾಪಕರು ಇದಕ್ಕೆಲ್ಲ ಕಾರಣಿಭೂತರಾಗಿದ್ದಾರೆಂದು 11 ನೇ ಉಡಾನ ಸಂಭ್ರಮ ಸಮಾರಂಭದಲ್ಲಿ ಭಾಗವಹಿಸಿ ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಿಲಿಂಗೇಶ್ವರ ಸ್ವಾಮಿಜಿಗಳು ತಮ್ಮ ಆಶೀರ್ವಚನದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಹೋರಾಟಗಾರ ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕಿದ ಶಿಲ್ಪಕಾರ ದಿ. ಅಪ್ಪಣಗೌಡಾ ಪಾಟೀಲರ ಅವರ ನಡೆದುಬಂದ ದಾರಿ ಮತ್ತು ಸಕ್ಕರೆ ಕಾರ್ಖಾನೆ, ದಿ. ಹುಕ್ಕೇರಿ ತಾಲೂಕ ಗ್ರಾಮೀಣ ವಿದ್ಯುತ ಸಹಕಾರಿ ಸಂಘ ಮತ್ತು ತಮ್ಮ ಜೀವತಾವಧಿಯಲ್ಲಿ ಮೂರು ಬಾರಿ ಶಾಸಕರಾಗಿ ಮತ್ತು ರೈತರ ಹಿತಚಿಂತಕರಾಗಿದ್ದ ಬಗ್ಗೆ ಅವರ ಭಾವಚಿತ್ರಗಳನ್ನು ವೇದಿಕೆಯ ಮೇಲೆ ಚಿತ್ರಣ ತೋರಿಸುತ್ತಿದ್ದು ಮತ್ತು ದೇಶದ ಅನ್ನದಾತರ ಕಷ್ಟಗಳ ಬಗ್ಗೆ ಇನ್ನೂ ರೈತರು ಪರಿಸ್ಥಿತಿ ತುಂಬ ಶೋಚನಿಯವಾದ ಬಗ್ಗೆ ವಿದ್ಯಾರ್ಥಿಗಳು ರೈತರ ಬಗ್ಗೆ ಕಾರ್ಯಕ್ರಮವನ್ನು ರೂಪಿಸಿದ್ದು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ವಿದ್ಯಾರ್ಥಿಗಳು ಅವರ ಬಗ್ಗೆ ರೂಪಗಳನ್ನು ಧರಿಸಿ ಕೋಲುಗಳನ್ನು ಹಿಡಿದು ಆಡುತ್ತಿದ್ದು ಮತ್ತು ಶ್ರೀ9ಕೃಷ್ಣ ಪರಮಾತ್ಮನ ಬಗ್ಗೆ ನೃತ್ಯ ಮುಖಾಂತರ ಜನರಿಗೆ ರಸಮಂಜರಿಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನೀಡಿದರು.
ಸಂಘದ ಉಪಾಧ್ಯಕ್ಷ ಕಾಶೀನಾಥ ಶಿರಕೋಳಿ, ಸಂಘದ ನಿರ್ದೇಶಕರಾದ ವಿಜಯ ರವದಿ, ಆರ್.ಬಿ. ಪಾಟೀಲ, ವಿಶ್ವನಾಥ ತೋಡಕರ, ಎಸ್.ಎಮ್. ಪಾಟೀಲ, ಬಿ.ಎಸ್. ವೈರಾಗಿ, ಮತ್ತು ಎಸ್.ಡಿ.ವ್ಹಿ.ಎಸ್. ಸಂಘದ ಕಾರ್ಯದರ್ಶಿ ಜಿ.ಸಿ. ಕೋಟಗಿ ಮತ್ತು ಸಂಘದ ಆಡಳಿತ ಅಧಿಕಾರಿ ಡಾ: ಬಿ.ಎ. ಪೂಜಾರಿ, ಎ.ಬಿ. ಪಾಟೀಲ ಪಬ್ಲಿಕ ಸ್ಕೂಲ ಪ್ರಾಂಶುಪಾಲ ಎಮ್.ಎಸ್. ಕಾಮತ ನಿರೂಪಣೆ ಮಾಡಿದ್ದರು.
ಕೃಷ್ಣಾ ಹೊನಮನಿ, ಸಮೃದ್ಧಿ ಚೌಗಲಾ, ಪ್ರಾಚಿ ಮಲಾಜ, ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ್ ಶಿವಶರಣ ಅವಜಿ ಮೊದಲಾದವರು ಉಪಸ್ಥಿತರಿದ್ದರು.