ಪ್ರವಾಹ ಪರಿಸ್ಥಿತಿಯ ಸಮರ್ಥ ನಿರ್ವಹಣೆ : ಸರ್ಕಾರದ ಸಾಧನೆ ಬಿಂಬಿಸುವ ಪ್ರದರ್ಶನಕ್ಕೆ ಚಾಲನೆ

ಕೊಪ್ಪಳ  09: ಸರ್ಕಾರದ ನೂರು ದಿನದ ಸಾಧನೆ ಮತ್ತು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳನ್ನು  ಪ್ರದರ್ಶಿಸುವ ಮೂಲಕ ಜನರಿಗೆ ಮಾಹಿತಿ ತಲುಪಿಸಲು ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆನೆಗೊಂದಿ ಉತ್ಸವದ ಮುಖ್ಯ ವೇದಿಕೆ ಬಳಿ ಸ್ಥಾಪಿಸಿರುವ  ವಸ್ತು ಪ್ರದರ್ಶನಕ್ಕೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ.ಟಿ. ರವಿ ಅವರು ಚಾಲನೆ ನೀಡಿದರು.  

ಇತ್ತೀಚೆಗೆ ಸಂಭವಿಸಿದ 22 ಜಿಲ್ಲೆಗಳ 103 ತಾಲೂಕುಗಳ ಪ್ರವಾಹ ಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರದ ಪರಿಹಾರ,  ರಾಜ್ಯ ಸರ್ಕಾರದಿಂದ 6,450 ಕೋಟಿ ರೂ. ಗಳನ್ನು ಪರಿಹಾರ ಕಾರ್ಯಗಳಿಗೆ ಮಂಜೂರು ಮಾಡಿದ್ದು ಪ್ರವಾಹ ಸಂತ್ರಸ್ತರ ನೋವಿಗೆ ಸರ್ಕಾರ ಮಿಡಿದಿರುವುದು.

ನೆರೆ ಮತ್ತು ಪ್ರವಾಹದಿಂದ  ಸಂಪರ್ಕ ಕಳೆದುಕೊಂಡಿದ್ದ 178 ರಸ್ತೆ ಹಾಗೂ ಸೇತುವೆಗಳ ಪೈಕಿ 142 ರಸ್ತೆ ಸಂಚಾರ ಪುನರ್ ನಿರ್ಮಾಣ ಕೈಗೊಂಡಿದೆ. ಬೆಳೆ ನಷ್ಟ ಅನುಭವಿಸಿದ್ದ 1,38,725 ಫಲಾನುಭವಿಗಳಿಗೆ 282 53 ಕೋಟಿ ರೂ. ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿರುವ ಮಾಹಿತಿ.

ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ಹೊಸ ಆವಿಷ್ಕಾರ ಗಳಿಗೆ ಉತ್ತೇಜನ ನೀಡಲು ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ರಚಿಸಿರುವ ಕ್ರಮ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ಕೇಂದ್ರ ಸರ್ಕಾರದ ಜೊತೆಗೆ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿರುವ ವಿವರ,  ಸಂಕಷ್ಟಕ್ಕೆ ಒಳಗಾದ ನೇಕಾರರ ಆರ್ಥಿಕ ಸಬಲೀಕರಣಕ್ಕಾಗಿ ಸಾಲಮನ್ನಾ,  ಮೀನುಗಾರರ ಸಾಲಮನ್ನಾ, ವಿಶೇಷವಾಗಿ ಮಹಿಳಾ ಮೀನುಗಾರರಿಗೆ ಅನುಕೂಲಕ್ಕೆ ಆದ್ಯತೆ ನೀಡಿರುವುದು ಈ ಪ್ರದರ್ಶನ ಒಳಗೊಂಡಿದೆ.

ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾರಣ ಸೃಷ್ಟಿಸಿ ಕೈಗಾರಿಕೆಗೆ ಉತ್ತೇಜನ ಹಾಗೂ ಸುಸ್ಥಿರ ಮತ್ತು ರಚನಾತ್ಮಕ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ,  ಹೈದರಾಬಾದ ಕರ್ನಾಟಕ ಭಾಗವನ್ನು ಕಲ್ಯಾಣ ಕನರ್ಾಟಕ ಪ್ರದೇಶವೆಂದು ಮರು ನಾಮಕರಣ ಮಾಡಿ, ಈ ಭಾಗದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ ಮಾಹಿತಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಯೋಜನೆಗಳು,  ಎಸ್ ಸಿ. ಪಿ , ಟಿ ಎಸ್ ಪಿ ಅಡಿ  30445 ಕೋಟಿ ರೂ. ಅನುದಾನ ಬಿಡುಗಡೆ ,  ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 23 ಲಕ್ಷ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ,ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಅಭಿವೃದ್ಧಿಗೆ ನೀಡಿರುವ ಆದ್ಯತೆ ಸೇರಿದಂತೆ  ಈ ವಸ್ತುಪ್ರದರ್ಶನದಲ್ಲಿ ಸರ್ಕಾರದ ಹಲವು ಯೋಜನೆ ಮತ್ತು ಸಾಧನೆಗಳ ಬಗ್ಗೆ ಫಲಕಗಳನ್ನು ಅಳವಡಿಸಲಾಗಿದೆ.   ಕರ್ನಾಟಕದ ಶಿಲ್ಪಕಲಾ ಸಂಸ್ಕೃತಿ ಬಿಂಬಿಸುವ ಮಾದರಿಯ ಫಲಕ ಸ್ತಂಭಗಳು  ಜನರನ್ನು ಆಕರ್ಷಿಸುತ್ತಿವೆ. 

ಈ  ಸಂದರ್ಭದಲ್ಲಿ ದಿನ ನೂರು ಸಾಧನೆ ನೂರಾರು ಸರ್ಕಾರದ ನೂರು ದಿನಗಳ ಪ್ರಗತಿ ವರದಿಯನ್ನು ಸಚಿವರು ಬಿಡುಗಡೆ ಮಾಡಿದರು.  

ಕಾರ್ಯಕ್ರಮದಲ್ಲಿ  ಶಾಸಕರಾದ ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ಯಾಪುರ, ಜಿಪಂ ಅಧ್ಯಕ್ಷ ಜಛಿಜಿ. ವಿಶ್ವನಾಥರೆಡ್ಡಿ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಜಿಪಂ ಸಿಇಓ ರಘುನಂದನಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಧಾರವಾಡ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಸುರೇಶ, ವಾರ್ತಾ ಇಲಾಖೆಯ ಅವಿನಾಶ್  ಸೇರಿದಂತೆ ಮತ್ತಿತರರು ಇದ್ದರು.