ಬಾಗಲಕೋಟೆ: ಸಮಾಜದಲ್ಲಿ ಮತ್ತು ಸಮುದಾಯದಲ್ಲಿ ಇಲ್ಲಿಯವರೆಗೂ ಕೇವಲ ಅಭಿವೃದ್ಧಿ ವಿಷಯವೇ ಮಂಚೂಣಿಯಲ್ಲಿದ್ದು, ಅಭಿವೃದ್ಧಿಗೆ ಪರಿಪೂರ್ಣತೆಯನ್ನು ತರಲು ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆ ಅಗತ್ಯವಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಗಂಗಾಧರ ದಿವಟರ ಹೇಳಿದರು.
ನಗರಸಭೆಯ ಸಭಾಭವನದಲ್ಲಿಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡ ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್ ಜನ್ಮ ದಿನಾಚರಣೆ ಅಂಗವಾಗಿ ಆಚರಿಸಲಾಗುತ್ತಿರುವ 13 ನೇ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಕರಾಗಿ ಅವರು ಮಾತನಾಡಿದರು. ವಿಶ್ವ ಸಂಸ್ಥೆಯು ಸುಸ್ಥಿರ ಅಭಿವೃದ್ದಿಯ ಪರಿಕಲ್ಪಣೆ ಹೊಂದಿದ್ದು, ಇದರಲ್ಲಿ 17 ಅಂಶಗಳನ್ನು ಒಳಗೊಂಡಿದೆ ಎಂದರು.
ವಿಶ್ವ ಸಂಸ್ಥೆಯು ನಿಗದಿಪಡಿಸಿರುವ ಮಾನದಂಡಗಳ ಅನುಸಾರ ಬಡತನ ನಿಮರ್ೂಲನೆ, ಹಸಿವು ಮುಕ್ತ ಸಮಾಜ, ಒಳ್ಳೆಯ ಆರೋಗ್ಯ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಇಂಧನ, ವಿನೂತನ ತಂತ್ರಜ್ಞಾನ ಮೂಲ ಸೌಕರ್ಯ ಹೊಂದಿರುವ ಕೈಗಾರಿಕೆಗಳು, ಸಮುದಾಯದಲ್ಲಿ ಸಮಾನತೆ, ಪರಿಸರ ಸಂರಕ್ಷಣೆ, ಶಾಂತಿ-ಸಹಬಾಳ್ವೆ ಮುಂತಾದ ಪ್ರಮುಖ ಅಂಶಗಳನ್ನು ಮಾನವ ಜನಾಂಗಕ್ಕೆ ಖಾತ್ರಿಪಡಿಸುವುದು "ಸುಸ್ಥಿರ ಅಭಿವೃದ್ಧಿ"ಯ ಮುಖ್ಯ ಉದ್ಯೇಶವಾಗಿದೆ ಎಂದರು.
ಬೃಹತ್ ಆಣೆಕಟ್ಟುಗಳನ್ನು ನಿಮರ್ಿಸಿ ಕೃಷಿ ವಲಯವನ್ನು ನೀರಾವರಿಗೆ ಒಳಪಡಿಸುವುದು, ವಿದ್ಯುತ್ ಉತ್ಪಾದನೆ ಅಭಿವೃದ್ಧಿಯಾದರೆ, ಆಣೆಕಟ್ಟು ನಿಮರ್ಿಸಲು ತೆರವುಗೊಳಿಸಿರುವ ಜನಾಂಗದ ಪುನರ್ವಸತಿ ಮತ್ತು ಸರ್ವತೋಮುಖ ಅಭಿವೃದ್ಧಿ ಸಾಧಸಿದರೆ ಅದಕ್ಕೆ "ಸುಸ್ಥಿರ ಅಭಿವೃದ್ಧಿ" ಎನ್ನಬಹುದಾಗಿದೆ ಎಂಬ ಉದಾಹಣೆ ನೀಡುತ್ತಾ, ಅಭಿವೃದ್ಧಿ ಪಥದಲ್ಲಿ ಸಾಗಲು ನಿಖರ ಅಂಕಿ-ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಮಾಹಿತಿ ಸಂಗ್ರಹಣೆಯ ಜೊತೆಗೆ ಮಾಹಿತಿಯನ್ನು ಪರಾಮಶರ್ಿಸುವುದು ವಿಮಶರ್ಿಸುವುದು ಸಾಂಖ್ಯಿಕ ಅಧಿಕಾರಿಗಳ ಆದ್ಯತೆಯಾದರೆ ಮಾತ್ರ ಅಂಕಿ-ಅಂಶಗಳು ಸ್ಪಷ್ಟತೆಯನ್ನು ಪಡೆಯುತ್ತವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಾದಾಮಿ ತಾಲೂಕಾ ಪಂಚಾಯತಿಯ ಯೋಜನಾಧಿಕಾರಿ ಸತೀಶ ನಾಯಕ ಮಾತನಾಡಿ ಪ್ರತಿಯೊಂದು ಸಮೀಕ್ಷೆ, ಗಣತಿ ಕಾರ್ಯಗಳಲ್ಲಿ ಸಮಯಕ್ಕೆ ಸರಿಯಾಗಿ ನಿಗದಿಪಡಿಸಲಾದ ಅವಧಿಯಲ್ಲಿ ಮಾಹಿತಿಯನ್ನು ಸಂಗ್ರಹಿಸುವುದು, ಪರಿಶೀಲನೆ ಕೈಗೊಳ್ಳುವುದು ಪ್ರಸ್ತುತ ತಂತ್ರಜ್ಞಾನ ಯುಗದ ಅಗತ್ಯವಾಗಿದೆ. ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲ ಕಾರ್ಯಕರ್ತರು ಶೃದ್ಧೆ-ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ಮತ್ತು ನಿಖರ ಮಾಹಿತಿಯನ್ನು ಸಂಗ್ರಹಿಸಿದರೆ ಮಾತ್ರ ಸುಸ್ಥಿರ ಅಭಿವೃದ್ಧಿಯನ್ನು ಖಾತ್ರಿಗೊಳಿಸಬಹುದಾಗಿದೆ ಎಂದು ತಿಳಿಸಿದರು.
ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾವು ಸಂಗ್ರಹಿಸುವ, ಪರಿಶೀಲಿಸುವ ಪ್ರತಿಯೊಂದು ಮಾಹಿತಿಯನ್ನು ವಸ್ತುನಿಷ್ಠವಾಗಿ ಇರುವುದನ್ನು ಖಾತ್ರಿಪಡಿಸಿಕೊಂಡರೆ ಮಾತ್ರ ಅಂಕಿ-ಅಂಶಗಳ ಗುಣಮಟ್ಟ ಸುಧಾರಿಸಬಹುದಾಗಿದೆ. ಸಮಾಜದ ಮತ್ತು ಸಮುದಾಯದ ಅಭಿವೃದ್ಧಿಗೆ ದಾರಿದೀಪವಾಗಲಿವೆ ಎಂದು ತಿಳಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಾಯರ್ಾಲಯದ ಸಹಾಯಕ ನಿದರ್ೇಶಕ ಎಮ್.ಆರ್.ಬಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಸಾಂಖ್ಯಿಕ ವಲಯಕ್ಕೆ ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್ ರವರ ಜನ್ಮ ದಿನಾಚರಣೆಯನ್ನು ಸಾಂಖ್ಯಿಕ ದಿನಾಚರಣೆ ಎಂಬುದಾಗಿ ಪ್ರತಿ ವರ್ಷವೂ ಆಚರಿಸಲಾಗುತ್ತಿದೆ. ಇಂದು ರಾಜ್ಯದಲ್ಲಿ 13ನೇ ಸಾಂಖ್ಯಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಂಕಿ-ಸಂಖ್ಯೆ ಬಹಳ ಮುಖ್ಯವಾಗಿದ್ದು, ಮಾಹಿತಿಗಳನ್ನು ತುಲನೆ ಮಾಡಿ ಪರಿಗಣನೆಗೆ ತೆಗೆದುಕೊಳ್ಳದೇ ನೀಡುವಂತಿಲ್ಲವೆಂದರು.
ನಗರಸಭೆಯ ಪೌರಾಯುಕ್ತ ಗಣಪತಿ ಪಾಟೀಲ ಜ್ಯೋತಿ ಬೆಳೆಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಾಂಖ್ಯಿಕ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಲು ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕ್ರಿಯಾಶೀಲತೆಯಿಂದ ಸಾಂಖ್ಯಿಕ ಸಿಬ್ಬಂದಿಯೊಬ್ಬರನ್ನು ಗೌರವಿಸುವುದನ್ನು ಆರಂಭಿಸಲಾಗಿದ್ದು, ಕಳೆದ ಸಾಲಿನಲ್ಲಿ ಅತ್ಯುತ್ತಮ ಸೇವೆಯ ಗೌರವವನ್ನು ಪಡೆದಿರುವ ಮುಧೋಳ ತಹಶೀಲ್ದಾರರ ಕಾಯರ್ಾಲಯದ ಸಾಂಖ್ಯಿಕ ನಿರೀಕ್ಷಕರ ಹುದ್ದೆಯಲ್ಲಿ ಸೇವೆಸಿ ವಯೋನಿವೃತ್ತಿಹೊಂದಿದ ಬಿ.ಎನ್.ಪಾಟೀಲ ಅವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ 2018-19ನೇ ಸಾಲಿನಲ್ಲಿ ನಿಷ್ಠೆ-ಶೃದ್ಧೆಯಿಂದ ಸಾಂಖ್ಯಿಕ ಇಲಾಖೆಯ ಕರ್ತವ್ಯಗಳನ್ನು ನಿರ್ವಹಿಸಿದ ಬಾಗಲಕೋಟೆ ತಹಶೀಲ್ದಾರ ಕಾರ್ಯಲಯದ ಸಾಂಖ್ಯಿಕ ನಿರೀಕ್ಷಕ ಬಸವರಾಜ ತೆಗ್ಗಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಎಂ.ಡಿ.ಆಸೋದಿ, ಎಂ.ಎಂ.ಇನಾಮದಾರ, ಎಸ್.ಎಂ.ಗೂಗಿಹಾಳ, ಎ.ಎಸ್.ಅಂಗಡಿ, ಸಾಂಖ್ಯಿಕ ನಿರೀಕ್ಷಕ ಸಂಕರ ಮುದನಾಳ, ಸಾವಿತ್ರಿ ಹೆಳವರ ಸೇರಿದಂತೆ ಕೆ.ಡಿ.ಬಡಕರಿ, ಆಸಿಪ್ ಮೈದರಗಿ ಉಪಸ್ಥಿತರಿದ್ದರು.