ಶಾಲೆಗೆ ನೀರು ಶುದ್ಧೀಕರಣ ಘಟಕದ ಯಂತ್ರ ಅಳವಡಿಕೆಗೆ ಸುಷ್ಮಾ ಪತಂಗೆ ಚಾಲನೆ
ಕೊಪ್ಪಳ 25: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ (ಜಿ ಎಚ್ ಪಿ ಎಸ್) ಶಾಲೆಗೆ ನೀರು ಶುದ್ದೀಕರಣ ಘಟಕದ ಯಂತ್ರ ಎರಡು ಲಕ್ಷ ರೂ ವೆಚ್ಚದ ಆರ್ ಓ ಪ್ಲಾಂಟ್‌ನ್ನು ದೇಣಿಗೆ ನೀಡಿದ ಬೆಂಗಳೂರಿನ ಡೊನರ್ಸ್ ಪರವಾಗಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಮುತುವರ್ಜಿ ವಹಿಸಿ ಇಲ್ಲಿನ ಶಾಲೆಯಲ್ಲಿ ಆರ್ ಓ ಪ್ಲಾಂಟ್ ಅಳವಡಿಸಲಾಯಿತು.
ನೀರು ಶುದ್ದೀಕರಣ ಘಟಕದ ಆರ್ ಓ ಪ್ಲಾಂಟ್ ದ ಉದ್ಘಾಟನೆಯನ್ನು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಜಿಲ್ಲಾ ಚೇರ್ಮನ್ ಸುಷ್ಮಾ ಪತಂಗೆ ರವರು ನೆರವೇರಿಸಿ ಚಾಲನೆ ನೀಡಿದರು, ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಸದರಿ ನೀರು ಶುದ್ದಿಕರಣ ಘಟಕದ ಆರ್ ಓ ಪ್ಲಾಂಟನ್ನು ಅಳವಡಿಸಲಾಗಿದೆ ಇದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಗೊಂಡಿದೆ ಮತ್ತು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿದೆ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಅವಶ್ಯಕತೆ ಇತ್ತು ಸದರಿ ಯೋಜನೆಯನ್ನು ನಮ್ಮ ಇನ್ನರ್ ವೀಲ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಕಾಳಜಿ ವಹಿಸಿ ಡೋನರ್ಸ್ ಒಬ್ಬರ ಸಹಾಯ ಪಡೆದು ಅಳವಡಿಸಲಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿ ಇದಕ್ಕೆ ಸಹಕಾರ ಮತ್ತು ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ,ಉಪಾಧ್ಯಕ್ಷರಾದ ಮಧು ಶೆಟ್ಟರ್, ಖಜಾಂಚಿ ಆಶಾ ಕವಲೂರು, ಐಎಸ್‌ಓ ಮಧು ನಿಲೋಗಲ್, ಎಡಿಟರ್ ನಾಗವೇಣಿ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ರಾಧ ಕುಲಕರ್ಣಿ ಹಾಗೂ ಸುಜಾತ ಪಟ್ಟಣಶೆಟ್ಟಿ ಸೇರಿದಂತೆ ಶಿಕ್ಷಕರು, ಅನೇಕರು ಪಾಲ್ಗೊಂಡಿದ್ದರು.