ಸುಶಾಂತ್ ಕೊನೆಯ ಚಿತ್ರ ‘ದಿಲ್ ಬೆಚರಾ’ದ ಪ್ರಚಾರ ಮಾಡಲಿದ್ದಾರೆ ರಾಜಕುಮಾರ್

ನವದೆಹಲಿ, ಜೂನ್ 26 ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ “ದಿಲ್ ಬೆಚರಾ”ದ ಪ್ರಚಾರ ಮಾಡಲಿದ್ದಾರೆ.ಸುಶಾಂತ್ ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಜುಲೈ 24 ರಂದು ಒಟಿಟಿ ವೇದಿಕೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಪೋಸ್ಟರ್ ಅನ್ನು ರಾಜ್‌ಕುಮಾರ್ ರಾವ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಶಾಂತ್ ಅವರ ಚೊಚ್ಚಲ ಚಿತ್ರ ‘ಕ್ಯಾ ಪೂಛೆ’ ಮತ್ತು 'ರಾಬ್ತಾ' ಚಿತ್ರದಲ್ಲಿ ರಾಜ್‌ಕುಮಾರ್ ನಟಿಸಿದ್ದರು.ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ ರಾಜಕುಮಾರ್ ರಾವ್ ಸಾಮಾಜಿಕ ಮಾಧ್ಯಮದಲ್ಲಿ "ನಿಮ್ಮ ನೆನಪು ಆಯಿತು ಸಹೋದರ" ಎಂದು ಬರೆದಿದ್ದಾರೆ.ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ನಿರ್ಧಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಜನರು ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದರು ಅಲ್ಲದೆ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೆ ಒತ್ತಾಯಿಸಿದ್ದಾರೆ.