ಒಳ್ಳೆಯ ಆರೋಗ್ಯ ಹೊಂದಲು ಸೂರ್ಯ ನಮಸ್ಕಾರ ಉತ್ತಮ ಮಾರ್ಗ : ರೇಖಾ ಪಾಟೀಲ

Surya Namaskar is the best way to have good health: Rekha Patil

ಒಳ್ಳೆಯ ಆರೋಗ್ಯ ಹೊಂದಲು ಸೂರ್ಯ ನಮಸ್ಕಾರ ಉತ್ತಮ ಮಾರ್ಗ : ರೇಖಾ ಪಾಟೀಲ   

ಶಿಗ್ಗಾವಿ  04: ಒಳ್ಳೆಯ ಆರೋಗ್ಯ ಹೊಂದಲು ಸೂರ್ಯ ನಮಸ್ಕಾರ ಉತ್ತಮ ಮಾರ್ಗವಾಗಿದೆ ಎಂದು ಯೋಗ ಶಿಕ್ಷಕಿ ರೇಖಾ ಪಾಟೀಲ ಹೇಳಿದರು.    ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಆಯುಷ್ ಇಲಾಖೆಯ ಸಹಯೋಗದಲ್ಲಿ ರಥಸಪ್ತಮಿಯ ಪ್ರಯುಕ್ತ ನಡೆದ ವಿದ್ಯಾರ್ಥಿಗಳಿಗೆ ಯೋಗಾಸನ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸೂರ್ಯ ನಮಸ್ಕಾರ ಮಾಡುವುದರಿಂದ ಮಾನವ ದೇಹದ ಹಲವಾರು ಅಂಗಗಳು ಮತ್ತು ವ್ಯವಸ್ಥೆಗಳ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುತ್ತದೆ. ಇದರ ಪ್ರತಿಯೊಂದು ಹೆಜ್ಜೆಯೂ ಅಭ್ಯಾಸ ಮಾಡುವ ವ್ಯಕ್ತಿಯ ಮನಸ್ಸು ಮತ್ತು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸೂರ್ಯ ನಮಸ್ಕಾರದ ರೂಪದಲ್ಲಿ 12 ಪ್ರಬಲ ಯೋಗಾಸನಗಳ ಸರಣಿಯು ವಿಶೇಷವಾಗಿ ಹೃದಯಕ್ಕೆ ಒಳ್ಳೆಯ ವ್ಯಾಯಾಮವನ್ನು ನೀಡುತ್ತದೆ. ರಥಸಪ್ತಮಿ ಎಂಬುದು ಯೋಗ ಸಾಧಕರಿಗೆ ತುಂಬಾ ಪ್ರಮುಖ ದಿನವಾಗಿದ್ದು, 108 ಬಾರಿ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಮನುಷ್ಯನ ಬದುಕನ್ನು ಹೆಚ್ಚಿಸಿಕೊಳ್ಳಬಲ್ಲದು.