ಸಬ್‌ಜೈಲ್, ಗುಲಗಂಜಿಕೊಪ್ಪ ಪ್ರದೇಶದಲ್ಲಿನ ಸಾಮಾಜಿಕ ಸಮೀಕ್ಷೆಗೆ ಕ್ಯಾಂಪ್ ಮೋಡ್ ದಲ್ಲಿ ಸಮೀಕ್ಷೆ ಕಾರ್ಯ ಆಯೋಜನೆ
Survey work organized in camp mode for social survey in Sub-Jail, Gulaganjikoppa area
ಧಾರವಾಡ 29: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು, ಸಬ್‌ಜೈಲ್ ಸುತ್ತಲಿನ ಪ್ರದೇಶಗಳಲ್ಲಿ ಸಮೀಕ್ಷೆಗೆ ತಾಂತ್ರಿಕ ಅಡಚಣೆ ಆಗುತ್ತಿದೆ.
ಸಬ್‌ಜೈಲ್‌ದಲ್ಲಿ ಜಾಮರ್ ಅಳವಡಿಸಿರುವುದರಿಂದ ಸಮೀಕ್ಷೆದಾರರಿಗೆ ನೆಟವರ್ಕ್ ಸಮಸ್ಯೆಯಾಗಿ ಗುಲಗಂಜಿಕೊಪ್ಪ ಸಬ್‌ಜೈಲ್ ಹತ್ತಿರದ ಪ್ರದೇಶಗಳಲ್ಲಿ ಮನೆಮನೆ ಸಮೀಕ್ಷೆಗೆ ತೊಂದರೆ ಆಗಿದೆ.
ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡ ಸಬ್‌ಜೈಲ್ ಪ್ರದೇಶಕ್ಕೆ ಭೇಟಿ ಪರೀಶೀಲಿಸಿತು.
ನೆಟವರ್ಕ ಸಮಸ್ಯೆ ಇರುವ ಪ್ರದೇಶಗಳ ಕುಟುಂಬಗಳಿಗೆ ಕುಮಾರೇಶ್ವರ ನಗರ ಹಾಗೂ ಕಮಲಾಪುರ ಭಾಗದಲ್ಲಿ ಕೇಂದ್ರ ಗುರುತಿಸಿ, ಅಭಿಯಾನದ (ಅಚಿಟಠಿ ಟಠಚಿ) ರೀತಿಯಲ್ಲಿ ಸಮೀಕ್ಷೆ ಮಾಡಲು ಕ್ರಮ ವಹಿಸುವಂತೆ ಸಿಇಒ ಭುವನೇಶ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರೋಬೆಷನರಿ ಐಎಎಸ್ ಅಧಿಕಾರಿ ರೀತೀಕಾ ವರ್ಮಾ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಬಾನುಮತಿ ಎಚ್., ತಹಶೀಲ್ದಾರ್ ಡಾ. ಡಿ.ಎಚ್. ಹೂಗಾರ, ತಾಲೂಕು ಪಂಚಾಯತ ಇಓ ಗಂಗಾಧರ ಕಂದಕೂರ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಮಹಾನಗರ ಪಾಲಿಕೆ ವಲಯ 12 ರ ಸಹಾಯಕ ಆಯುಕ್ತ ಶಂಕರ ಪಾಟೀಲ ಸೇರಿದಂತೆ ಇತರರು ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 