ಶರಣ ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು

ಲೋಕದರ್ಶನ ವರದಿ

ಬೈಲಹೊಂಗಲ 30: ಇಂದಿನ ಆಧುನಿಕ ಯುಗದಲ್ಲೂ ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗದೇ, ನಾವು ವಿಭೂತಿ, ಜಪ-ತಪ, ಶರಣ ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಕ್ಕಳು ನಮ್ಮನ್ನೇ ಅನುಕರಿಸಿ ಸಂಸ್ಕಾರವಂತರಾಗುತ್ತಾರೆ ಎಂದು ವಿಜಯಪುರದ ಷಣ್ಮೂಖಾರೂಢ ಮಠದ ಅಭಿನವ ಶಿವಪುತ್ರ ಸ್ವಾಮೀಜಿ ಹೇಳಿದರು. 

   ಅವರು ಸಮೀಪದ ಸುಕ್ಷೇತ್ರ ಇಂಚಲದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ 80 ನೇ ಜಯಂತ್ಯುತ್ಸವ (ಸಹಸ್ರ ಚಂದ್ರ ದರ್ಶನ ಮಹೋತ್ಸವ), 50 ನೇ ವರ್ಷದ ಪೀಠಾರೋಹಣ, 50 ನೇ ಅಖಿಲ ಭಾರತ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವ ಮತ್ತು ನೂತನವಾಗಿ ಅಮೃತ ಶೀಲೆಯಲ್ಲಿ ನಿರ್ಮಿಸಿದ ಶ್ರೀ ಅಂಬಾ ಪರಮೇಶ್ವರಿ ನವದುಗರ್ಾ ಮಂದಿರ ಉದ್ಘಾಟನೆ, ನವದುಗರ್ಾ ದೇವಿಯವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ರಜತ ರಥೋತ್ಸವ ಹಾಗೂ ಮಹಾರಥೋತ್ಸವ ಕಾರ್ಯಕ್ರಮದ ಶಿವಯೋಗೀಶ್ವರ ವೇದಾಂತ ವೇದಿಕೆಯಲ್ಲಿ ಜರುಗಿದ ನಾಲ್ಕನೇ ದಿನದ ವೇದಾಂತ ಪರಿಷತ್ನ ವಿಷಯ ತ್ಯಜ ದುರ್ಜನ ಸಂಸರ್ಗಂ ಭಜಃ ಸಾಧು ಸಮಾಗಮ ವಿಷಯದ ಕುರಿತು ಮಾತನಾಡಿ, ಚಂಚಲತೆ ಇರುವ ಹದಿಹರೆಯದಲ್ಲೆ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಪರಿಸರ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು. ಎಷ್ಟೇ ಆಸ್ತಿ, ಪಾಸ್ತಿ ಮಾಡಿದರೂ ಒಂದೇ ಕ್ಷಣದಲ್ಲಿ ಹಾಳಾಗುತ್ತದೆ ಆದರೆ ಸಂಸ್ಕಾರ, ಒಳ್ಳೆಯ ನಡತೆ, ಗುರವಿನ ಸಂಗ ಕೊನೆತನಕ ಇರುತ್ತದೆ ಎಂದರು. 

   ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಇಂಚಲ ಶ್ರೀಗಳ ಆಶೀರ್ವಾದದಿಂದ ದೊಡ್ಡ ಶಕ್ತಿ ಅಡಗಿದೆ. ಇಲ್ಲಿ ಲಕ್ಷಾಂತರ ಭಕ್ತರಿಗೆ ನೂರಾರು ಮಹಾತ್ಮರ ಸಮಾಗಮದ ದರ್ಶನವಾಗುತ್ತಿದೆ, ಪೂಜ್ಯರ ವಾಣಿ ಆಲಿಸಿ ಧನ್ಯರಾಗೋಣ ಎಂದರು. 

   ಬೆಂಗಳೂರು ಕೈಲಾಸ ಆಶ್ರಮ ಮಹಾಸಂಸ್ಥಾನದ ಜಗದ್ಗುರು ಆಚಾರ್ಯ ಮಹಾಮಂಡಲೇಶ್ವರ ಜಯೇಂದ್ರಪುರಿ ಮಹಾರಾಜ ಮಾತನಾಡಿ, ಶಿವಾನಂದ ಭಾರತಿ ಅಪ್ಪನವರು ಸಿದ್ಧಾರೂಢರ, ಗುರುನಾಥಾರೂಢರ ಶಿಷ್ಯರಾಗಿದ್ದರಿಂದ ಅವರ ಶಕ್ತಿ ಶ್ರೀಗಳಲ್ಲಿ ಬಂದಿದೆ. ಇದರಿಂದ ಅವರು ಶಿಕ್ಷಣ, ಆದ್ಯಾತ್ಮಿಕ ಕ್ರಾಂತಿಯನ್ನೆ ಮಾಡುತ್ತಿದ್ದಾರೆ ಎಂದರು.

  ಆಂಧ್ರ ಪ್ರದೇಶ ಕಾಳಹಸ್ತಿ ಶ್ರೀಶುಕಬ್ರಹ್ಮ ಆಶ್ರಮ ವಿದ್ಯಾಸ್ವರೂಪಾನಾಂದ ಸ್ವಾವೀಜಿ ಮಾತನಾಡಿ, ನಾವು ಸುಖದಿಂದ ಇರಬೇಕಾದರೆ ಪುಣ್ಯ ಮಾಡಬೇಕು. ಅದು ನಾವು ಮಾಡುವ ಒಳ್ಳೇಯ ಕೆಲಸದಿಂದ ತಾನಾಗಿಯೇ ಬರುತ್ತದೆ ಎಂದರು. 

    ಬೀದರ ಸಿದ್ಧಾರೂಢ ಮಠದ ಚಿದಂಬರ ಆಶ್ರಮದ ಶಿವಾದ್ವೈತ ತತ್ವವಿಭೋಷಣ ಶಿವಕುಮಾರೇಶ್ವರ ಸ್ವಾಮೀಜಿ ಮಾತನಾಡಿ, ಭಕ್ತರನ್ನು ಆದ್ಯಾತ್ಮಿಕತೆಗೆ ಕರೆತರಲು ಎಲ್ಲ ಸಾಧು ಸಂತರು ಭಾರತಿ ಅಪ್ಪಾಜಿಯವರ ಮಾರ್ಗದಲ್ಲಿ ನಡೆಯಬೇಕು ಎಂದರು. 

   ಡಾ.ಶಿವಾನಂದ ಭಾರತಿ ಸ್ವಾಮೀಜಿ  ಆಶೀರ್ವಚನ ನೀಡಿ, ಎಲ್ಲ ಜನ್ಮಗಳಲ್ಲಿ ಶ್ರೇಷ್ಠವಾದ ಮನುಷ್ಯ ಜನ್ಮಕ್ಕೆ ಉತ್ತಮ ಸಂಸ್ಕಾರ ನೀಡಲು ಆದ್ಯಾತ್ಮಿಕತೆಯ ಚಿಂತನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮನುಷ್ಯ ಜೀವಿ ಸಾಧು ಸಂತರ ಸಂಘಮಾಡಿ ಜೀವನದಲ್ಲಿ ಶ್ರೇಷ್ಠತೆಯನ್ನು ಕಾಣಬೇಕು. ದುರ್ಘುನ ದುರಾಚಾರ ಬಿಟ್ಟು ಸುಂದರವಾದ ಜೀವನ ಸಾಗಿಸಬೇಕಾದರೆ ಸಾಧು ಸಂತರ ಆಶೀರ್ವಾದ ಬೇಕು ಎಂದರು.

   ಮೈಸೂರು ಸುತ್ತೂರು ಸಂಸ್ಥಾನ ಮಠದ ಜಗದ್ಗುರು ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಅಂಕಲಿ ನಿರುಪಾದೇಶ್ವರ ಮಠದ ಬ್ರಹ್ಮಶ್ರೀ ವೀರಭದ್ರ ಸ್ವಾಮೀಜಿ, ಕಾಶಿ ರಾಜರಾಜೇಶ್ವರಿ ಮಠದ ಆಚಾರ್ಯ ದಿವ್ಯಚೈತನ್ಯಜಿ ಮಹಾರಾಜ, ಐರಳಿ ಹೊಳಿಮಠ ಮಹಾಸಂಸ್ಥಾನ ಮಠ  ಬಸವರಾಜ ದೇಶೀಕೇಂದ್ರ ಸ್ವಾಮೀಜಿ, ಹಂಪಿ ಹೇಮಕೂಟ ಶಿವರಾಮ ಅವಧೂತ ಆಶ್ರಮದ ವಿದ್ಯಾನಂದ ಭಾರತಿ ಮಹಾಸ್ವಾಮೀಜಿ,  ಕಾದರವಳ್ಳಿ ಸೀಮಿ ಮಠದ ಪಾಲಾಕ್ಷಿ ದೇವರು, ಹರಳಕಟ್ಟಿ ಶೀವಾನಂದ ಬ್ರಹ್ಮ ವಿದ್ಯಾಶ್ರಮ ನಿಜಗುಣ ಸ್ವಾಮೀಜಿ, ದಾವಣಗೇರಿ ಜಡೆಶಾಂತಾಶ್ರಮದ ಶಿವಾನಂದ ಸ್ವಾಮೀಜಿ, ಮರೆಗುದ್ದಿ ನಿರುಪಾದೇಶ್ವರ ಸ್ವಾಮೀಜಿ, ದತ್ತವಾಡ ಬಾಬಾ ಮಹಾರಾಜ ಆಶ್ರಮದ ಅದೃಶ್ಯಾನಂದ ಸ್ವಾಮೀಜಿ, ಕುಳ್ಳೂರ ಶಿವಯೋಗೀಶ್ವರ ಮಠದ ಬಸವಾನಂದ ಭಾರತಿ ಸ್ವಾಮೀಜಿ, ಬೈಲಹೊಂಗಲ ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮಿಗಳು, ಮಲ್ಲಾಪೂರ ಗಾಳೇಶ್ವರ ಮಠ ಚಿದಾನಂದ ಸ್ವಾಮಿಗಳು, ತೊಂಡಿಕಟ್ಟಿ ಗಾಳೇಶ್ವರ ಮಠದ ಆಭಿನವ ವೇಂಕಟೇಶ ಸ್ವಾಮೀಜಿ, ಖಂಡೆರಾಯನ ಹಳ್ಳಿಯ ಸಿದ್ಧಾರೂಢ ಮಠದ ನಾಗರಾಜಾನಂದ ಸ್ವಾಮೀಜಿ, ಕರೀಕಟ್ಟಿಯ ಬಸವರಾಜಾನಂದ ಸ್ವಾಮೀಜಿ, ಸೊಲ್ಲಾಪೂರ ರಾಮಚಂದ್ರ ಶಾಸ್ತ್ರೀಗಳು, ಗುಡಸ ಈಶ್ವರಾನಂದ ಸ್ವಾಮಿಗಳು, ತಿಮ್ಮಾಪೂರ ಬಸವಾರ ಸ್ವಾಮೀಜಿ, ಹಡಗಿನಾಳ, ಮಲ್ಲೇಶ್ವರ ಶರಣರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.