ಲೋಕದರ್ಶನ
ವರದಿ
ಬೆಳಗಾವಿ
20: " ಶರಣರ ನೆನೆದಾರ
ಸರಗೀಯ ಇಟ್ಹಂಗಾ, ಅರಳ ಮಲ್ಲೀಗಿ ಮುಡಿದಾಂಗ|
ಕಲ್ಯಾಣ ಶರಣರ ನೆನೆಯೋ ನನ
ಮನವೆ||" ಎಂದು ಜಾನಪದರು 12ನೇ
ಶತಮಾನದ ಶರಣರನ್ನು ಹಾಡಿ ಹಾಡಿ ಹೊಗಳಿರುವುದನ್ನು
ಕಂಡಾಗ - ಕಲ್ಯಾಣ ಕ್ರಾಂತಿಯ ಮಹತ್ವ ತಿಳಿದು ಬರುತ್ತದೆ. ಹಂತಿ ಪದ್ಯಗಳಲ್ಲಿ "ಕೊಂಡಿಗಳು
ಮುಂದಾಗಿ ಭಂಡ ಜಗಳವ ಹೂಡಿ,
ಹೆಂಡ ಕುಡಿಸಿದರು ಚಾಡಿಯಲಿ| ಬಿಜ್ಜಳನು ಹುಂಡ ತಿಳಿಯದಲೆ ಕಿವಿಗೊಟ್ಟ||"
ಎಂದು ತಿಳಿಸಿದಂತೆ, ಕಲ್ಯಾಣದ ಬಿಜ್ಜಳರಾಜ ಚಾಡಿಎಂಬ ಹೆಂಡಕ್ಕೆ ಕಿವಿಗೊಟ್ಟು, ತನ್ನ ರಾಜ್ಯವನ್ನೆ ತಾನು
ಹಾಳುಮಾಡಿದ ಎಂದು ಗೊತ್ತಾಗುತ್ತದೆ. "ಜಾತಿಗಳು ಮಾನವ
ನಿಮರ್ಿತವೇ ವಿನಾ, ದೇವ ನಿಮರ್ಿತವಲ್ಲ ಎಂದು
ಲಿಂಗಾಯತ ಧರ್ಮವನ್ನು ಸ್ವೀಕರಿಸಿದ ಮಂತ್ರಿ ಮಧುವರಸರ ಮಗಳ ಮತ್ತು ವೃತ್ತಿಯಲ್ಲಿ
ಸಮಗಾರನಿದ್ದರೂ, ಲಿಂಗಾಯತ ಧಮರ್ೀಯರಾದ ಹರಳಯ್ಯ ನವರ ಮಗನ ಮದುವೆ
ನಡೆಯಿತು. ಇದನ್ನು ಸಹಿಸದ ಸಾಂಪ್ರವಾದಿಗಳು ಬಿಜ್ಜಳ ರಾಜನಿಗೆ ಚಾಡಿ ಹೇಳಿ, ಅವರಿಗೆ
ಎಳೆಹೂಟೆ ಶಿಕ್ಷೆ ಮತ್ತು ಕಣ್ಣು ಕೀಳಿಸುವ ಶಿಕ್ಷೆ ವಿಧಿಸಿದರು. ಹೀಗೆ ಇತಿಹಾಸ ಪುಟದಲ್ಲಿ
ಒಂದು ತತ್ವಕ್ಕೆ ಬದ್ಧರಾಗಿ ತಮ್ಮ ಪ್ರಾಣವನ್ನೆ ಧಾರೆಯೆರೆದು
ಮಾನವೀಯೆತೆಯನ್ನು ಮೆರೆದಿರುವುದು ಅಪರೂಪ ಮತು ಅಭೂತಪೂರ್ವವಾದದ್ದು. ಜಾನಪದರು ಈ
ಕಲ್ಯಾಣ ಕ್ರಾಂತಿಯನ್ನು ಗುರುತಿಸಿ, ಹೊಗಳಿದಷ್ಟು ಸಾಹಿತಿಗಳಿಂದ ಈ ಕೆಲಸ ಆಗಲಿಲ್ಲವೆಂದು
ತಿಳಿಸಿ, ಜಾನಪದರ ನಿರ್ಮಲ ಮನಸ್ಸನ್ನು ಕೊಂಡಾಡಬೇಕು.
ಹೀಗೆ, ಸಮಾನತೆ ತತ್ವ ಮತ್ತು ಮಾನವೀಯ
ಮೌಲ್ಯಗಳ ಸಿದ್ಧಾಂತಕ್ಕಾಗಿ ಹೋರಾಡಿದ 12ನೇ ಶತಮಾನದ ಶರಣರ
ಸಂದೇಶ ಕುರಿತು ಪರಿಚಯಿಸಿದವರು ಬೆಳಗಾವಿ ರಾಷ್ಟ್ರೀಯ ಬಸವ ದಳದ ಕಾರ್ಯದಶರ್ಿಗಳಾದ
ಶರಣ ಆನಂದ ಗುಡಸ ಅವರು. ಬೆಳಗಾವಿ
ಜಿಲ್ಲಾ ಲಿಂಗಾಯತ ಧರ್ಮ ಮಹಾ ಸಭಾ, ಕ್ರಾಂತಿ
ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ
ಗಣ, ರಾಷ್ಟ್ರೀಯ ಬಸವ ದಳ, ಗಣಾಚಾರ
ದಳ, ವಚನ ಚಿಂತನಾ ವೇದಿಕೆ,
ವಿಶ್ವಗುರು ಬಸವ ಜ್ಯೋತಿ ಯಾತ್ರಾ
ಸಮಿತಿ ಮತ್ತು ಬಸವಾಂಕುರಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ 'ವಿಶ್ವಗುರು ಬಸವ ಮಂಟಪ' ದಲ್ಲಿ
ದಿ.18ರಂದು ಸಂಜೆ ನಡೆದ,
"ಕಲ್ಯಾಣ ಕ್ರಾಂತಿ ಸಂಸ್ಮರಣೋತ್ಸವ"ದ 9ನೇ ದಿನದ
ಕಾರ್ಯಕ್ರಮದಲ್ಲಿ - "ಕಲ್ಯಾಣ
ಕ್ರಾಂತಿ ಚರಿತ್ರೆ ಪಠಣ"ದಲ್ಲಿ, ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರೀಯ ಬಸವದಳದ ಕೋಶಾಧ್ಯಕ್ಷರಾದ ಶರಣ ಮಲ್ಲಕಾಜರ್ುನ ಬಾಬಾನಗರ್ ಮತ್ತು ಅವರ ಧರ್ಮ ಪತ್ನಿ ಶರಣೆ ವಂದನಾ ದಂಪತಿಗಳು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮಜಗಾವಿನ ಲಿಂಗಾಯತ ಧರ್ಮ ಮಹಾ ಸಭಾದ ಮುಖ್ಯಸ್ಥ ಶರಣ ಮಲ್ಲಿಕಾಜರ್ುನ ಆಡಿನ್ ಅಧ್ಯಕ್ಷತೆ ವಹಿಸಿ, ಬಸವ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಪ್ರಾರಂಭದಲ್ಲಿ ಧರ್ಮಪಿತ ಬಸವಣ್ಣನವರ ಪೂಜೆ, ಹುತಾತ್ಮ ಚೇತನರ ಪೂಜೆ, ಸಾಮೂಹಿಕ ಪ್ರಾರ್ಥನೆ ಮತ್ತು ಕಲ್ಯಾಣ ಕ್ರಾಂತಿ ಚರಿತ್ರೆ ಪಠಣ ನೆರವೇರಿತು. ಶರಣ ಕೆ.ಬಸವರಾಜ ಸ್ವಾಗತ ಕೋರಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣೆ ನೀಲಗಂಗಾ ಪಾಟೀಲರು ಶರಣು ಸಮರ್ಪಣೆಗೈದರು.