ಸಲ್ಮಾನ್ ಜೊತೆ ಚಿತ್ರ ನಿರ್ಮಿಸಲಿದ್ದಾರೆ ಸೂರಜ್

ನವದೆಹಲಿ, ಜ.23, ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಸೂರಜ್ ಬರ್ಜತ್ಯ ಅವರು ಮತ್ತೆ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಚಿತ್ರ ನಿರ್ಮಿಸುವ ಸಾಧ್ಯತೆ ಇದೆ. ಸೂರಜ್ ಬರ್ಜಾತ್ಯ ಅವರು ಸಲ್ಮಾನ್ ಖಾನ್ ಜೊತೆಗೂಡಿ, ಮೈನೇ ಪ್ಯಾರ್ ಕಿಯಾ,  ಹಮ್ ಆಪ್ಕೆ ಹೈ ಕೌನ್, ಹಮ್ ಸಾಥ್ ಸಾಥ್ ಹೈ ಮತ್ತು ಪ್ರೇಮ್ ರತನ್ ಧನ್ ಪಯೋ ಮುಂತಾದ ಯಶಸ್ವಿ ಚಿತ್ರಗಳನ್ನು ಮಾಡಿದ್ದಾರೆ. ಸೂರಜ್ ಮತ್ತೊಮ್ಮೆ ಸಲ್ಮಾನ್ ಜೊತೆಗೂಡಿ ಚಿತ್ರ ಮಾಡಲು ಯೋಜಿಸುತ್ತಿದ್ದಾರೆ. ಸೂರಜ್ ಬರ್ಜಾತ್ಯ ಚಿತ್ರದ ಚಿತ್ರಕಥೆಯನ್ನು ಬರೆಯುತ್ತಿದ್ದಾರೆ ಮತ್ತು ಸಲ್ಮಾನ್ ಖಾನ್ ಈ ಚಿತ್ರದ ಕಲ್ಪನೆಯನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. “ನಾನು ಕಥೆಯೊಂದಕ್ಕೆ ಕೆಲಸ ಮಾಡುತ್ತಿದ್ದೇನೆ. ಇದು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಸಲ್ಮಾನ್ ಖಾನ್ ಅವರೊಂದಿಗೆ ಚಿತ್ರದ ವಿಚಾರವನ್ನು ಚರ್ಚಿಸಿದೆ. ಸಲ್ಮಾನ್ ಈ ಕಲ್ಪನೆಯನ್ನು ಇಷ್ಟಪಟ್ಟಿದ್ದಾರೆ. ಕುಟುಂಬ, ನಾಟಕ ಮತ್ತು ಭಾವನೆಗಳಗೊಂಡ ಚಿತ್ರ ಕಥೆ ನಿರ್ಮಿಸುತ್ತಿರುವೆ. ಮಗ ಅವಿನಾಶ್ ಚೊಚ್ಚಲ ನಿರ್ದೇಶನದ ಚಿತ್ರದ ತಯಾರಿ ನಡೆದಿದೆ” ಎಂದು ಸೂರಜ್ ತಿಳಿಸಿದ್ದಾರೆ.