ನವದೆಹಲಿ, ಜ 28 : ಆಫ್ರಿಕದ ಚಿರತೆಯನ್ನು ಭಾರತಕ್ಕೆ ಕರೆತರುವ ಕುರಿತ ದಶಕಗಳ ವಿವಾದಕ್ಕೆ ಅಂತ್ಯ ಹಾಡಿರುವ ಸುಪ್ರೀಂಕೋರ್ಟ್ ಕೊನೆಗೂ ಚಿರತೆಗಳನ್ನು ದೇಶದ ಸುರಕ್ಷಿತ ಪ್ರದೇಶಗಳಿಗೆ ಕರೆತರಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಅನುಮಮತಿ ನೀಡಿದೆ.
ಸ್ಥಳೀಯ ಚಿರತೆಗಳು ವಿನಾಶದ ಅಂಚಿನಲ್ಲಿರುವ ಹಿನ್ನೆಲೆಯಲ್ಲಿ ಕನೋ ಪಾಲ್ಪರ್ ಅಭಯರಣ್ಯದಲ್ಲಿ ಆಫ್ರಿಕನ್ ಚಿರತೆಯನ್ನು ಕರೆತರಲು ಮಧ್ಯಪ್ರದೇಶ ಸರ್ಕಾರ 2013ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿದ ಆದೇಶವನ್ನು ಬದಲಾಯಿಸಲು ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಒಪ್ಪಿಗೆ ಸೂಚಿಸಿದೆ.
ಈ ಪ್ರಕ್ರಿಯೆಯ ಮೇಲೆ ನಿಗಾ ಇಡಲು ಪರಿಸರ ತಜ್ಞ ರಂಜಿತ್ ಸಿಂಗ್ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸುವಂತೆ ಕೂಡ ಸರ್ಕಾರಕ್ಕೆ ಸೂಚನೆ ನೀಡಿದೆ.