ತಾನು ಅನುರಾಧ ಪೋಡ್ವಾಲ್ ಮಗಳೆಂದು ಮಹಿಳೆಯೊಬ್ಬಳು ಸಲ್ಲಿಸಿದ್ದ ಆರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ನವದೆಹಲಿ, ಜ 30 ಬಾಲಿವುಡ್ ಸುಪ್ರಸಿದ್ದ  ಗಾಯಕಿ ಅನುರಾಧ ಪೋಡ್ವಾಲ  ತನ್ನ ಜೈವಿಕ  ತಾಯಿ  ಎಂದು ಹೇಳಿಕೊಂಡು  ಮಹಿಳೆಯೊಬ್ಬಳು    ಸಲ್ಲಿಸಿರುವ  ಆರ್ಜಿ ಸಂಬಂಧ  ತಿರುವನಂತಪುರ  ಕೌಟುಂಬಿಕ ನ್ಯಾಯಾಲಯ   ಆರಂಭಿಸಿರುವ  ವಿಚಾರಣಾ  ಪ್ರಕ್ರಿಯೆಗಳಿಗೆ  ಸುಪ್ರೀಂ ಕೋರ್ಟ್  ಗುರುವಾರ ತಡೆಯಾಜ್ಞೆ  ನೀಡಿದೆ.ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬ್ಡೆ  ನೇತೃತ್ವದ,  ನ್ಯಾಯಮೂರ್ತಿ  ಬಿ.ಆರ್. ಗವಾಯಿ ಹಾಗೂ ಸೂರ್ಯ ಕಾಂತ್  ಅವರನ್ನೊಳಗೊಂಡ ನ್ಯಾಯಪೀಠ,  ತಿರುವನಂತ ಪುರಂನಿಂದ ಮುಂಬೈಗೆ ಪ್ರಕರಣವನ್ನು ವರ್ಗಾವಣೆ ಮಾಡುವಂತೆ ಗಾಯಕಿ  ಸಲ್ಲಿಸಿದ್ದ ಮನವಿಯ ಮೇರೆಗೆ ಮಹಿಳೆಗೆ ನೋಟಿಸ್ ನೀಡಿ,  ಪ್ರಕರಣದ ವಿಚಾರಣೆಗೆ  ತಡೆಯಾಜ್ಞೆ  ನೀಡಿದೆ.  .ತಾನು  ಗಾಯಕಿ ಪೋಡ್ವಾಲ್ ಅವರ ಪುತ್ರಿ ಎಂದು  ಹೇಳಿಕೊಂಡು  ನ್ಯಾಯಾಲಯಕ್ಕೆ ಆರ್ಜಿ ಸಲ್ಲಿಸಿರುವ ಕರ್ಮಲಾ ಮೊಡೆಕ್ಸ್  ಎಂಬ  45 ವರ್ಷದ ಕೇರಳದ  ಮಹಿಳೆ,   ತನ್ನ ಹಕ್ಕಿನ  ಬಾಲ್ಯ  ಹಾಗೂ  ಜೀವನವನ್ನು  ಜೈವಿಕ ತಾಯಿ  ಅನುರಾಧ ಪೋಡ್ವಾಲ್  ನಿರಾಕರಿಸಿದ್ದು,  ಇದಕ್ಕಾಗಿ  50 ಕೋಟಿ ಪರಿಹಾರ  ಕೊಡಿಸಬೇಕೆಂದು  ಎಂದು ಆಕೆ  ನ್ಯಾಯಾಲಯಕ್ಕೆ  ಸಲ್ಲಿಸಿರುವ ಆರ್ಜಿಯಲ್ಲಿ  ಕೋರಿದ್ದಾಳೆ.ಮಹಿಳೆ ಸಲ್ಲಿಸಿದ್ದ  ಆರ್ಜಿಯನ್ನು ವಿಚಾರಣೆಗೆ  ಸ್ವೀಕರಿಸಿದ್ದ  ತಿರುವನಂತಪುರಂ ಕುಟುಂಬ ನ್ಯಾಯಾಲಯದ  ವಿರುದ್ದ  ಅನುರಾಧ ಪೋಡ್ವಾಲ್  ಸುಪ್ರೀಂ ಕೋರ್ಟ್  ಮೆಟ್ಟಿಲೇರಿದ್ದರು.