ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ನಲ್ಲಿ ನಾಳೆ ವಿಚಾರಣೆ

ಶ್ರೀನಗರ, ಆ 27    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರದ ಕ್ರಮವನ್ನು ಮಾಜಿ  ಐ ಎ ಎಸ್  ಅಧಿಕಾರಿ ಹಾಗೂ ರಾಜಕಾರಿಣಿ  ಶಾ ಫಾಸಲ್ ಮತ್ತು ಶೆಹ್ಲಾ ರಶೀದ್ ಅವರು ಸುಪ್ರೀಂ ಕೋರ್ಟ್ನಲ್ಲಿ  ಪ್ರಶ್ನೆ ಮಾಡಿದ್ದಾರೆ.  ಕೇಂದ್ರದ ನಿಲುವು ಪ್ರಶ್ನಿಸಿ, ಕಾಶ್ಮೀರ ವಿಚಾರದಲ್ಲಿ ಸಲ್ಲಿಸಲಾಗಿರುವ ಇದೆ ರೀತಿಯ ಇತರೆ  ಎಲ್ಲ  ಅರ್ಜಿಗಳನ್ನು ಸುಪ್ರೀಂ ಕೋರ್ಟ್ನಾಳೆ ವಿಚಾರಣೆ ನಡೆಸಲಿದೆ. ವಿಶೇಷ ಸ್ಥಾನಮಾನ ವಾಪಸ್ ಪಡೆದು 20 ದಿನ ಕಳೆದಿದ್ದರೂ ಕಣಿವೆಯ ಪರಿಸ್ಥಿತಿ ಇನ್ನು ಉದ್ವಿಗ್ನವಾಗಿದೆ. ಈ ನಡುವೆ  ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ,  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಣಿವೆ ಪರಿಸ್ಥಿತಿಯ  ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.