ನಿರಾಶ್ರಿತರ ಸೇವೆಗೆ ಮುಂದಾದ ಆಸರೆ ಗೆಳೆಯರ ಬಳಗ

ಲೋಕದರ್ಶನ ವರದಿ

ಕೊಪ್ಪಳ 15: ತಾಲೂಕಿನ ಹಿಟ್ನಾಳ ಗ್ರಾಮದ ರಾಮಕುಮಾರ ಶ್ರೀನಿವಾಸ ಮೊರಾರ್ಕ ಪ್ರೌಢಶಾಲೆಯ ಹಳೆಯ ವಿದ್ಯಾಥರ್ಿಗಳ ಗೆಳೆಯರ ಬಳಗದ ಮೂಲಕ ನಿರಾಶ್ರಿತ ಹಾಗೂ ಅನಾಥರಿಗೆ ಬಟ್ಟೆಗಳನ್ನು ವಿತರಣೆ ಮಾಡುವ ಕಾರ್ಯವನ್ನು ಹಮ್ಮೀಕೊಳ್ಳುವ ಮೂಲಕ ಸಮಾಜ ಸೇವೆಗೆ ಮುಂದಾಗಿದೆ ಎಂದು ಶಾಲಾ ಹಳೆಯ ವಿದ್ಯಾಥರ್ಿಗಳ ಬಳಗದ ಸದಸ್ಯ ಹಾಗೂ ಹಿಟ್ನಾಳ ಗ್ರಾ.ಪಂ. ಅಧ್ಯಕ್ಷ ಧರ್ಮರಾಜ ರಾವ್ ತಿಳಿಸಿದರು. 

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಹಿಟ್ನಾಳ ಶಾಲೆಯಲ್ಲಿ ಅಭ್ಯಾಸ ಮಾಡಿದ ನಮ್ಮ ಎಲ್ಲ ಗೆಳೆಯರ ಬಳಗವು ಸೇರಿಕೊಂಡು, ಆಸರೆ ಎನ್ನುವ ಸಂಸ್ಥೆಯ ಮೂಲಕ  ಸಮಾಜದಲ್ಲಿ ನಿರಾಶ್ರಿತ ಹಾಗೂ ಅನಾಥ ವರ್ಗದವರಿಗೆ ಬಟ್ಟೆಗಳನ್ನು ವಿತರಣೆ ಮಾಡುವ ಮೂಲಕ ಸಮಾಜಸೇವೆಯನ್ನು ಮಾಡಲು ನಿರ್ಧರಿಸಿದೆ ಎಂದು ಹೇಳಿದರು. ಈ ಹಿಂದೆ ಶಾಲಾ ವಿದ್ಯಾಥರ್ಿಗಳಿಗೆ ಪುಸ್ತಕ, ಬ್ಯಾಗ್ ವಿತರಣೆ, ಹೀಗೆ ಹಲವಾರು ಸಮಜಮುಖಿ ಕಾರ್ಯಗಳನ್ನು ಆಸರೆ ಸಂಸ್ಥೆಯು ಮಾಡುತ್ತಾ ಬಂದಿದೆ. 

ಅದೇ ಹಾದಿಯಲ್ಲಿ ಡಿ.20 ರಿಂದ ನಗರದ ಪ್ರಾಧಿಕಾರ ಮಳಿಗೆಯಲ್ಲಿ ಧರಿಸಲು ಯೋಗ್ಯವಾದ ಹಳೆಯ ಬಟ್ಟೆಯನ್ನು ಸಂಗ್ರಹಿಸುವುದು ಮತ್ತು ಸ್ವಚ್ಛಗೊಳಿಸುವುದು ಹಾಗೂ ಅಳತೆಗೆ ಅನುಗುಣವಾಗಿ ವಿಂಗಡಿಸಿ ತಾಲೂಕಿನ ನಿರಾಶ್ರಿತರು ಹಾಗೂ ಅನಾಥರಿಗೆ ಬಟ್ಟೆಯನ್ನು ಬದಗಿಸುವ ಕಾರ್ಯವನ್ನು ಹಮ್ಮೀಕೊಳ್ಳಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಈ.ನೀಲಪ್ಪ, ಕಾಂಗ್ರೆಸ್ ಮುಖಂಡ ವಿಜಯ ನಾಲ್ವಾಡ, ನಗರಸಭೆ ಸದಸ್ಯ ಅರುಣ.ಎ.ಶೆಟ್ಟಿ, ಮಾಜಿ ನಗರಸಭೆ ಸದಸ್ಯ ಶರಣಪ್ಪ ಚಂದನಕಟ್ಟಿ, ಹನುಮಂತ ಬೆಸ್ತಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.