ಗದಗ 01: ಉದ್ಯೋಗಮೇಳವು ಉದ್ಯೋಗದಾತರನ್ನು ಕರೆತಂದು ನಿರುದ್ಯೋಗ ಪರಿಹರಿಸುವ ಪ್ರಕ್ರಿಯೆ ಆಗಿದೆ. ಕುಶಲತೆಗೆ ಬೆಂಬಲ ಹಾಗೂ ಯುವ ಕೈಗಳಿಗೆ ಬಲ ನೀಡುತ್ತದೆ ಎಂದು ಗದಗ ಶಾಸಕ ಎಚ್.ಕೆ.ಪಾಟೀಲ ನುಡಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಗದಗ ಜಿಲ್ಲಾಡಳಿತ ಇವುಗಳ ಸಂಯುಕ್ತ ಆಶ್ರಯದಲ್ಲಿಂದು ಜರುಗಿದ ಗದಗ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಹಾಗೂ ಉದ್ಯೋಗದ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗಾಕಾಂಕ್ಷಿಗಳು ಕೀಳರಿಮೆ ತೊರೆದು ಆತ್ಮವಿಶ್ವಾಸವನ್ನು ಹೊಂದಿ ಕೆಲಸದ ಬಗ್ಗೆ ಆಸಕ್ತಿ ಹೊಂದಬೇಕು. ಮಾನಸಿಕ ಸ್ಥೈರ್ಯ ಹಾಗೂ ಧನಾತ್ಮಕ ಚಿಂತನೆಯ ಅವಶ್ಯಕತೆಯಿದ್ದು ನಿರುದ್ಯೋಗಿಗಳಿಗೆ ಉದ್ಯೋಗವು ಆಪದ್ಭಾಂಧವವಾಗಿ ಪರಿಣಮಿಸಬೇಕು. ಗದಗ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಯುವಜನರಿಗೆ ಉದ್ಯೋಗ ದೊರಕಿಸುವ ಉದ್ಯೋಗ ಮೇಳದ ಮೂಲಕ ಹೊಸ ಉತ್ಸಾಹ ತುಂಬುವ ಪ್ರಯತ್ನ ಮಾಡಲಾಗುತ್ತಿದ್ದು ಯುವಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಚ್.ಕೆ.ಪಾಟೀಲ ನುಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ ರಾಜ್ಯ ಸರ್ಕಾರ ಪ್ರತಿಯೊಂದು ಜಿಲ್ಲೆಯಲ್ಲಿ ಉದ್ಯೋಗಮೇಳವನ್ನು ನಡೆಸುತ್ತಿದೆ. ಗದಗ ಉದ್ಯೋಗ ಮೇಳಕ್ಕೆ ಸುಮಾರು 71 ಕ್ಕೂ ಹೆಚ್ಚು ಕಂಪನಿಗಳು ಈಗಾಗಲೇ ನೊಂದಣಿಯಾಗಿದ್ದು 2,500 ಹೆಚ್ಚು ಹೆಚ್ಚು ವಿದ್ಯಾಥರ್ಿಗಳು ಆನ್ಲೈನ್ ಮೂಲಕ ಹೆಸರು ನೊಂದಾಯಿಸಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಕರ್ಾರಿ ನೌಕರಿಗಾಗಿ ಕಾಯದೇ ಖಾಸಗಿ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಲು ಯುವಕರು ಸನ್ನದ್ದರಾಗಿರಬೇಕು ಎಂದರು.
ಗದಗ ಜಿ.ಪಂ. ಸದಸ್ಯ ವಾಸಣ್ಣ ಕುರಡಗಿ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ, ಉಪವಿಬಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಬಿ, ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಲ್ಲೂರ ಬಸವರಾಜ, ಕೈಮಗ್ಗ ಜವಳಿ ಇಲಾಖೆಯ ಕುಲಕರ್ಣಿ, ವಿವಿಧ ಖಾಸಗಿ ಕಂಪನಿಗಳ ಉದ್ಯೋಗದಾತರು, ಉದ್ಯೋಗಾಕಾಂಕ್ಷಿಗಳು ಸಮಾರಂಭದಲ್ಲಿದ್ದರು.ಜಿಲ್ಲಾ ಉದ್ಯೋಗಾಧಿಕಾರಿ ತನುಜಾ ರಾಮಪೂರೆ ಸ್ವಾಗತಿಸಿದರು. ಅಮರೇಶ ವಂದಿಸಿದರು. ಈರಮ್ಮ ಹಾಗೂ ಸಂಗಡಿಗರು ಪ್ರಾಥರ್ಿಸಿದರು. ಪ್ರೊ. ದತ್ತಪ್ರಸನ್ನ ಪಾಟೀಲ ನಿರೂಪಸಿದರು.