ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ತಾನಗೆ

ಲೋಕದರ್ಶನ ವರದಿ

ಸಂಬರಗಿ 14: ಕಾಗವಾಡ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ ಅಭ್ಯರ್ಥಿ ಯಾರೇ ಇದ್ದರೆ, ಗಡಿಭಾಗದ ಗ್ರಾಮದ ಹೆಚ್ಚು ಮತ ನೀಡುತ್ತೇವೆ ಎಂದು ಸಂಬರಗಿ ಗ್ರಾಮದ ಗ್ರಾಮಪಂಚಾಯತ ಅಧ್ಯಕ್ಷ ಮಾದೇವ ತಾನಗೆ ಹೇಳಿದರು. 

ಸಂಬರಗಿ ಗ್ರಾಮದಲ್ಲಿ ಗುರುವಾರ ಸುದಿಗಾರರೋಂದಿಗೆ ಮಾತನಾಡಿ ಅವರು ಗ್ರಾಮಿಣ ಪ್ರದೇಶದಲ್ಲಿ ಕಾಂಗ್ರೇಸ್ ಪಕ್ಷದ 30-40% ಕಚಿತ ಮತ ಇರುತ್ತದೆ ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ರ್ಯರ್ಥಿಗೆ ಬೆಂಬಲ ನೀಡಿದ್ದೆವೆ, ಇಗಲೂ ಸಹ ಅಭ್ಯರ್ಥಿ ಯಾರೇ ಇದ್ದರೆ ಕಾಂಗ್ರೇಸ್ ಬಿಡುವುದಿಲ್ಲ, ಹಲವಾರು ವರ್ಷಗಳಿಂದ ನಮ್ಮ ಪಕ್ಷದ ಸರ್ಕಾರ ಇದ್ದರು  ಇಲ್ಲದಿದ್ದರೇ ಸಹ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸಮಾಡಿದ್ದೇನೆ. ಯಾವುದೇ ಆಮಿಶಕ್ಕೆ ಬಲಿಯಾಗುವುದಿಲ್ಲ, ಕಾಂಗ್ರೇಸ್ ಪಕ್ಷಕ್ಕೆ ಬೆಂಬಲವಿದೆ.

ಈ ಭಾಗದ ರೈತರು ಸತತ ಬರಗಾಲಕ್ಕೆ ತುತ್ತಾಗಿ ಬಳಗುತ್ತಿದ್ದು, ಯಾವುದೇ ರಾಜಕಿಯ ಮುಖಂಡರು ಈಭಾಗದ ಸಮಸ್ಯಯನ್ನು ಪರಿಹರಿಸಿಲ್ಲ ಚುನಾವಣೆ ಬಂದನಂತರ ನಮ್ಮಿಂದ ಕೆಲಸ ಪಡೆದುಕೋಲುತ್ತಾರೆ ಆನಂತರ 5 ವರ್ಷ ನಮ್ಮ ಕಡೆ ಕಣ್ಣೆತ್ತಿ ಕೂಡಾನೋಡುವುದಿಲ್ಲ ಆ ಕಾರಣ ನಿಷ್ಠೆಯಿಂದ ಮತ ನೀಡಿ ಸುಮ್ಮನೆ ಕುಡುವ ಸ್ಥಿತಿ ಬಂದಿದೆ. ಎಷ್ಟೆ ಬಂದರು ಪಕ್ಷ ತೋರೆದು ಬೆರೆಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಆ ಕಾರಣ ರಾಜ್ಯ ನಾಯಕರು ನಮ್ಮನು ಗುರುತಿಸುತ್ತಾರೆ. ಅದೋಂದೆ ನಮಗೆ ಸ್ವಾಬಿಮಾನ ಇದೆ ಎಂದು ಹೇಳಿದರು

ಈ ವೇಳೆ ತಾ.ಪಂ. ಮಾಜಿ ಸದಸ್ಯರು ಶ್ರೀಶೈಲ ಪಾಟೀಲ, ಅಮಿತ ಪವಾರ, ಅನೀಲ ಚಿಂಚನೆ, ಅಮಿತಿ ಶಿಂಧೆ, ಅಮೂಲ ಪವಾರ, ಸೇರಿದಂತ ಅನೇಕ ಕಾರ್ಯಕರ್ತರ ಹಾಜರಿದ್ದರು.