ವಿಜಯಪುರ, ಡಿ. 03: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024ಕ್ಕೆ ನೀರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ನಗರದ ಮೂರು ಜನ ಗಣ್ಯರು ಪ್ರಾಯೋಜಕತ್ವಕ್ಕಾಗಿ ಆರ್ಥಿಕ ನೆರವು ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರಿಫ್ ಅವರು ರೂ. 1.50 ಲಕ್ಷ (1 ಲಕ್ಷ 50 ಸಾವಿರ ರೂಪಾಯಿ) ಹಣವನ್ನು ಪ್ರಾಯೋಜಕತ್ವಕ್ಕಾಗಿ ನೆರವು ನೀಡಿದ್ದಾರೆ.
ಅದೇ ರೀತಿ ನಗರದ ಖ್ಯಾತ ಉದ್ಯಮಿ ಜೆ. ಜಿ. ಪಾರೇಖ ಅವರು ರೂ. 1.01 (1 ಲಕ್ಷ 1 ಸಾವಿರ ರೂಪಾಯಿ ಹಣವನ್ನು) ನೀಡಿದ್ದಾರೆ. ಈ ಹಣವನ್ನು ವೃಕ್ಷಥಾನ್ ಹೆರಿಟೇಜ್ ರನ್ 21 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುತ್ತಿರುವ ಬಡ ಯುವಕರ ನೋಂದಣಿಗೆ ಪ್ರಾಯೋಜಕತ್ವಕ್ಕಾಗಿ ನೀಡಿದ್ದಾರೆ.
ನಗರದ ಗಣ್ಯ ವ್ಯಾಪಾರಸ್ಥ ಶರಣು ಗುಡ್ಡೊಡಗಿ ಅವರು ರೂ. 75 ಸಾವಿರ ಹಣವನ್ನು ಪ್ರಾಯೋಜಕತ್ವಕ್ಕಾಗಿ ನೀಡಿದ್ದಾರೆ.
ಹಮೀದ್ ಮುಶ್ರಿಫ್ ಮತ್ತು ಶರಣು ಗುಡ್ಡೊಡಗಿ ಅವರು ಕಳೆದ ಬಾರಿಯ ವೃಕ್ಷಥಾನ್ ಹೆರಿಟೇಜ್ ರನ್ ಓಟಕ್ಕೂ ಪ್ರಾಯೋಜಕತ್ವಕ್ಕಾಗಿ ಆರ್ಥಿಕ ನೆರವು ನೀಡಿದ್ದು ಗಮನಾರ್ಹವಾಗಿದೆ. ಮೂರೂ ಜನ ಪ್ರಾಯೋಜಕರಿಗೆ ವೃಕ್ಷಥಾನ್ ಹೆರಿಟೇಜ್ ರನ್ ಕೋರ್ ಕಮಿಟಿ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.