ಲೋಕದರ್ಶನ ವರದಿ
ಶಿರಹಟ್ಟಿ 27: ಕಳೆದ ವರ್ಷವಿಡೀ ಸುರಿದ ಭಾರಿ ಮಳೆಯಿಂದ ಜನರು ಪ್ರವಾಹಗಳಿಗೆ ತುತ್ತಾಗಿ ತಮ್ಮ ಸರ್ವಸ್ವವನ್ನಷ್ಠೇ ಅಲ್ಲ ತಮ್ಮ ಜೀವವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು, ಇಂಥಹ ಸಮಯದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಭಾಗಿಯಾಗುವವರಿಗೆ ಸೂಕ್ತ ತರಬೇತಿಗಳ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಅವರು ತಾಲೂಕಾ ಪಂಚಾಯ್ತಿ ಸಭಾಭವನದಲ್ಲಿ ವಿಕೋಪ ನಿರ್ವಹಣಾ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ ಮೈಸೂರು ಹಾಗೂ ಜಿಲ್ಲಾಡಳಿತ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿರಹಟ್ಟಿ ತಾಲೂಕು/ ಸಮುದಾಯ ಮಟ್ಟದ ಅಪಾಯ, ದುರ್ಬಲತೆ, ನಷ್ಠ ಹಾಗೂ ಸಾಮಥ್ರ್ಯಗಳ ವಿಶ್ಲೇಶಣೆ ಹಾಗೂ ತಾಲೂಕು ಮಟ್ಟದ ವಿಕೋಪ ನಿರ್ವಹಣಾ ಕ್ರಿಯಾ ಯೋಜನೆ ಹಾಗೂ ಅನುಷ್ಠಾನ ಕಾಯರ್ಾಗಾರದ ಉದ್ಗಾಟನೆಯನ್ನು ಸಸಿಗೆ ನೀರುಣಿಸುವುದರ ಮೂಲಕ ನೆರವೇರಿಸಿ ಮಾತನಾಡಿದರು,
ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಹಾಗೂ ಜೀವಹಾನಿಯಾಗಿದೆ. ಅದೇ ರೀತಿ ಈ ಬಾರಿಯೂ ಹೆಚ್ಚಿನ ಮಳೆಯಾದಲ್ಲಿ ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ತರಬೇತಿಗಳನ್ನು ಹೊಂದುವುದು ಉತ್ತಮ. ಇದಕ್ಕಾಗಿ ಜಿಲ್ಲಾಡಳಿತ ವಿಕೋಪ ನಿರ್ವಹಣಾ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ಸೂಕ್ತ ಮುನ್ನೆಚ್ಚರಿಕೆ ತರಬೇತಿಗಳನ್ನು ಈ ಕಾಯರ್ಾಗಾರದಲ್ಲಿ ನೀಡುತ್ತಿದ್ದು, ಈ ಕಾಯರ್ಾಗಾರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಮುತವಜರ್ಿ ವಹಿಸಿಕೊಂಡು ಕಾರ್ಯ ಮಾಡಬೇಕಾಗುತ್ತದೆ, ಆಸ್ತಿ ಪಾಸ್ತಿ ಹೋದರೆ ಮರಳಿ ಪಡೆಯಬಹುದು ಒಂದು ವೇಳೆ ಜೀವಹಾನಿಯಾದರೆ ಮರಳಿ ಪಡೆಯಲಿಕ್ಕೆ ಆಗದು ಕಾರಣ ಇಂಥಹ ಘಟನೆಗಳು ಆಗದಂತೆ ಮುನ್ನೆಚ್ಚರಿಕೆಯಾಗಿ ಎಲ್ಲರೂ ತರಬೇತಿಗಳನ್ನು ಹೊಂದುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ವಿಕೋಪ ನಿರ್ವಹಣಾ ಕೇಂದ್ರ ಮೈಸೂರಿನ ಡಾ. ಜೆ.ಆರ್. ಪರಮೇಶ, ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಎನ್.ಎಸ್. ಸೋನೆ, ತಾಲೂಕಾ ದಂಡಾಧಿಕಾರಿ ಯಲ್ಲಪ್ಪ ಗೋಣೆಣ್ಣವರ, ತಾಲೂಕಾ ಪಂಚಾಯ್ತಿ ಈಓ ನಿಂಗಪ್ಪ ಓಲೇಕಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು