ಮುಂಬೈ, ಫೆ 3 : ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್, ಸಾಮಾಜಿಕ ಜಾಲತಾಣದ ಟ್ರೋಲ್ ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲವಂತೆ.
ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುತ್ತಾರೆ. ಅನೇಕ ಬಾರಿ ಅವರು ಟ್ರೋಲ್ ಗೂ ಒಳಗಾಗುತ್ತಾರೆ. ಈ ಕುರಿತು ಸನ್ನಿ ಲಿಯೋನ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮಾಡುವ ನಕಾರಾತ್ಮಕ ಕಮೆಂಟ್ ಬಗ್ಗೆ ಸನ್ನಿ ಮಾತನಾಡಿ," ಇತ್ತೀಚೆಗೆ ನಾನು ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ಕುರಿತಾದ ಪೋಸ್ಟ್ ವೊಂದನ್ನು ಶೇರ್ ಮಾಡಿದ್ದೆ. ಈ ಕುರಿತು ಕೆಲವರು ನಕಾರಾತ್ಮಕ ಕಮೆಂಟ್ ಮಾಡಿದ್ದರು. ಆದರೆ, ನಾನ್ಯಾವುದೇ ನಕಾರಾತ್ಮಕ ಕಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಹೇಳಿದರು.
"ನಾನು ನಕಾರಾತ್ಮಕ ಕಮೆಂಟ್ ಬಗ್ಗೆ ಯೋಚಿಸುವಷ್ಟು ಸಮಯ ವ್ಯರ್ಥ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಾಗಿ ರಚನಾತ್ಮಕ ಟೀಕೆಗಳ ಮೇಲೆ ವಿಶ್ವಾಸ ಇಡುತ್ತೇನೆ "ಎಂದು ಹೇಳಿಕೊಂಡಿದ್ದಾರೆ.
ಜನರ ಟೀಕೆಗಳ ಬಗ್ಗೆ ಹೆಚ್ಚು ನಿಗಾ ವಹಿಸುವುದಿಲ್ಲ. ಅವರೆಲ್ಲರೂ ತುಂಬಾ ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ನನ್ನೊಂದಿಗೆ ಬಂಧ ಬೆಳೆಸಿಕೊಂಡಿದ್ದಾರೆ. ಅವರು ನನ್ನ ಹಿತಚಿಂತಕರು ಎಂದು ಸನ್ನಿ ಪ್ರತಿಕ್ರಿಯಿಸಿದ್ದಾರೆ.