ಬೌಲಿಂಗ್ ಕೋಚ್ ದೆ ಪೈಪೋಟಿಯಲ್ಲಿ ಕನ್ನಡಿಗ ಸುನಿಲ್ ಜೋಷಿ...!

ನವದೆಹಲಿ  ಆಗಸ್ಟ್ 6    ಭಾರತ  ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅಜರ್ಿ ಸಲ್ಲಿಸಿದ್ದಾರೆ. ಸುಮಾರು ಎರಡೂವರೆ ವರ್ಷಗಳ ಕಾಲ ಬಾಂಗ್ಲಾದೇಶದ ಬೌಲಿಂಗ್ ಕೋಚ್ ಆಗಿದ್ದ ಜೋಶಿ ....ಭಾರತ ತಂಡದ  ಬೌಲಿಂಗ್ ಕೋಚ್  ಆಗಲು ಪೈಪೋಟಿ ನಡೆಸಿದ್ದಾರೆ.  

ಭಾರತ  ತಂಡದ  ಬೌಲಿಂಗ್  ಕೋಚ್  ವಿಷಯದಲ್ಲಿ   "ಸ್ಪಿನ್ ಬೌಲಿಂಗ್" ನಲ್ಲಿ   ಅನುಭವ ಹೊಂದಿದವರಿಗೆ ಆದ್ಯತೆಯಿದೆ  ಎಂಬುದನ್ನು  ಬಲವಾಗಿ ನಂಬಿರುವ   ಸುನಿಲ್ ಜೋಶಿ  ಅಜರ್ಿ ಸಲ್ಲಿಸಿದ್ದಾರೆ.  

 ಹೌದು .. ನಾನು ಟಿಮಿಂಡಿಯಾ ಬೌಲಿಂಗ್ ಕೋಚ್ಗೆ ಅರ್ಜಿ ಸಲ್ಲಿಸಿದ್ದೇನೆ. ನಾನು ಈಗಾಗಲೇ ಬಾಂಗ್ಲಾದೇಶದ ಬೌಲಿಂಗ್  ಕೋಚ್  ಆಗಿ  ಸಮರ್ಥವಾಗಿ  ನಿರ್ವಹಿಸಿದ್ದೇನೆ. ಮುಂದಿನ ಸವಾಲನ್ನು ನಿಭಾಯಿಸಲು  ಸಿದ್ಧನಾಗಿದ್ದೇನೆ.  ಭಾರತ ತಂಡಕ್ಕೆ  ಸ್ಪೆಷಲಿಸ್ಟ್ ಸ್ಪಿನ್ ಕೋಚ್ ಅಗತ್ಯವಿಲ್ಲ ಎಂದು ನನಗೆ ತಿಳಿದಿದೆ.  ಹಾಗಾಗಿ  ಸ್ಪಿನ್  ಅನುಭವವುಳ್ಳ  ತಮ್ಮನ್ನು   ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲಿದ್ದಾರೆ  ಎಂಬ ಆಶಯವನ್ನು  ಎಂದು ಸುನಿಲ್ ಜೋಶಿ  ವ್ಯಕ್ತಪಡಿಸಿದ್ದಾರೆ. 

ಹಲವು  ಅಂತರರಾಷ್ಟ್ರೀಯ ಕ್ರಿಕೆಟ್ ತಂಡಗಳು  ತಮ್ಮ  ಕೋಚ್ ಗಳನ್ನಾಗಿ ತಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತಿವೆ.  ಇದರ ಜೊತೆ ಸಹಾಯಕ ಸಿಬ್ಬಂದಿ ಕೂಡ ಇರುತ್ತಾರೆ. ಇದರಲ್ಲಿ ಪೇಸ್ ಬೌಲಿಂಗ್ ಕೋಚ್ ಅಥವಾ ಸ್ಪಿನ್ ಬೌಲಿಂಗ್ ಕೋಚ್  ಇರುತ್ತಾರೆ.  

ಭಾರತೀಯ ಕ್ರಿಕೆಟ್ ತಂಡಕ್ಕೂ ಬೌಲಿಂಗ್ ಕೋಚ್ ಅಗತ್ಯವಿದೆ. ಅದು ಸ್ಪಿನ್ ಬೌಲರ್ ಅಥವಾ ಪೇಸ್ ಬೌಲರ್ ಆಗಿರಬಹುದು. ಹಾಗಾಗಿ    ಬೌಲಿಂಗ್ ಕೋಚ್ ಹುದ್ದೆಗೆ  ನಾನು ಆರ್ಜಿ ಸಲ್ಲಿಸಿರುವುದರಲ್ಲಿ  ತಪ್ಪೇನಿಲ್ಲ  ಎಂದು ಸಮರ್ಥಿಸಿಕೊಂಡರು.   

1996-2001ರವರೆಗೆ ಭಾರತ  ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಜೋಶಿ 15 ಟೆಸ್ಟ್ ಪಂದ್ಯಗಳನ್ನು   ಆಡಿ 41 ವಿಕೆಟ್ ಪಡೆದಿದ್ದರು. ಏಕದಿನ ಪಂದ್ಯಗಳಲ್ಲಿ 69 ವಿಕೆಟ್ ಪಡೆದಿದ್ದರು. ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ 160 ಪಂದ್ಯಗಳನ್ನು ಆಡಿರುವ ಜೋಷಿ  ಅವರು 615 ವಿಕೆಟ್ ಪಡೆದಿದ್ದರು.