ಇಂಡಿ 02: ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ಸದಸ್ಯರ ಪುಣ್ಯ ಆರ್ಶಿವಾದಿಂದ ಎರಡನೇ ಬಾರಿ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ, ಹಿಂದೆ ಆಯ್ಕೆಯಾದ ವಿಧಾನಪರಿಷತ್ ಸದಸ್ಯರು ಚುನಾವಣೆಯಲ್ಲಿ ಗೆದ್ದು ನಂತರ ಈ ಕಡೆ ಸುಳಿಯುವುತ್ತಿರಲ್ಲ, ಆದರೆ ನಾನು ಪ್ರತಿ ವರ್ಷಕ್ಕೆ ಒಮ್ಮೆಯಾದರೂ ಪ್ರತಿ ಮತಕ್ಷೇತ್ರಗಳಲ್ಲಿ ಒಂದು ಸಭೆ ಕರೆದು ಸದಸ್ಯರ ಅಹವಾಲು ಕಾರ್ಯಕ್ರಮ ಮಾಡುತ್ತಿದ್ದೇನೆ ಎಂದು ಶಾಸಕ ಸುನೀಲಗೌಡ ಪಾಟೀಲ ಹೇಳಿದರು.
ಅವರು ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ ವಿಜಯಪೂರ ತಾಲೂಕು ಪಂಚಾಯಿತಿ ಇಂಡಿ ಪುರಸಭೆ ಇಂಡಿ ಸಹಯೋಗದಲ್ಲಿ ಹಮ್ಮಿಕೊಂಡ ಆಡಳಿತಾತ್ಮಾಕ ಅಹವಾಲು ಸ್ವೀಕಾರ ಸಮಾರಂಭವನ್ನು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನನಗೆ ವಿಜಯಪೂರ ಹಾಗೂ ಬಾಗಲಕೋಟೆ ಜಿಲ್ಲೆಯ ಒಟ್ಟು ಹದಿನೈದು ವಿಧಾನಸಭಾ ಮತಕ್ಷೇತ್ರಗಳು ನನ್ನ ವ್ಯಾಪ್ತಿಗೆ ಬರುತ್ತವೆ. ನಾನು ಗ್ರಾಮ ಪಂಚಾಯಿತಿ ಸದಸ್ಯರ ಪರವಾಗಿ ವಿಧಾನಪರಿಷತ್ತಿನಲ್ಲಿ ಅನೇಕ ಬಾರಿ ಪ್ರಶ್ನೆಗಳನ್ನು ಮಾಡುತ್ತಾ ಬಂದಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ ಮಾಡುವಂತೆ ಪ್ರಶ್ನೆ ಮಾಡಿ ಗೌರವ ಧನ ಹೆಚ್ಚಳಕ್ಕೆ ಕಾರಣಿ ಬುಹತನಾಗಿದ್ದೆನೆ . ಮುಂಬರುವ ಅಧಿವೇಶನದಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಉಚಿತ ಬಸ್ ಪಾಸ್, ಕೇರಳ ರಾಜ್ಯದ ಮಾದರಿಯಲ್ಲಿ ಗೌರವ ಧನ ನೀಡಬೇಕು. ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸದನದಲ್ಲಿ ತಮ್ಮ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ಬರವಶ ನೀಡಿದರು.ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಇಂಡಿ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಉಳಿದಿರುವ ಬಹುಪಾಲು ಜನಸಂಖ್ಯೆಗೆ ಮಾತ್ರವಲ್ಲದೆ ಗ್ರಾಮೀಣಾಭಿವೃದ್ಧಿ ಅತ್ಯಗತ್ಯ. ಅದೇ ಸಮಯದಲ್ಲಿ, ರಾಷ್ಟ್ರದ ಒಟ್ಟಾರೆ ಆರ್ಥಿಕ ವಿಸ್ತರಣೆ. ಗ್ರಾಮೀಣಾಭಿವೃದ್ಧಿಯೂ ಅತ್ಯಗತ್ಯ. ಗ್ರಾಮೀಣ ಜನರ ಕಷ್ಟಗಳನ್ನು ನಿವಾರಿಸುವುದು ಗ್ರಾಮೀಣಾಭಿವೃದ್ಧಿಗೆ ಅತ್ಯಗತ್ಯ ಯೋಜನೆಗಳನ್ನು ಜಾರಿಗೆ ತಂದು ಗ್ರಾಮಾಭಿವೃದ್ಧಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸೇರಿ ಗ್ರಾಮ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ್ ರಾಠೋಡ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಇಂಡಿ ತಹಶೀಲ್ದಾರ ಎಸ್ ಬಿ ಕಡಕಬಾವಿ ಪುರಸಭೆ ಅಧ್ಯಕ್ಷರಾದ ನಿಂಬಾಜೀ ರಾಠೋಡ, ಕಾಂಗ್ರೆಸ್ ಮುಖಂಡರಾದ ಜಾವೀದ್ ಮೋಮಿನ್,ಅಲ್ಲಿಯಾಸ್ಸ್ ಬೋರಾಮಣಿ, ಪ್ರಶಾಂತ್ ಕಾಳೆ, ಭೀಮಣ್ಣ ಕೌಲಗಿ, ಸೇರಿದಂತೆ ಇಂಡಿ ತಾಲೂಕು ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಹಿರೇರೂಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಬಬಲಾದಿ ಅವರು ನಿರೂಪಿಸಿದರು.