ಬೆಂಗಳೂರು, ಜು 4: ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಸೋಂಕು ಪ್ರಕರಣ ತಡೆಯಲು ಒಂದು ತಿಂಗಳ ಕಾಲ ಭಾನುವಾರ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲು ತೀರ್ಮಾನಿಸಿರುವುದರಿಂದ ನಾಳೆ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರವಿರುವುದಿಲ್ಲ.
ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ಸುಗಳ ಕಾರ್ಯಾಚರಣೆಯು ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆಯವರೆಗೂ ಇರುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಜುಲೈ 5ರಿಂದ ( ನಾಳೆಯಿಂದ) ಜಾರಿಯಾಗುವಂತೆ ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿ ಇರಲಿದೆ. ಅಗತ್ಯ ಸೇವಾ ಚಟುವಟಿಕೆಗಳು ಹಾಗೂ ಈಗಾಗಲೇ ನಿಗದಿಯಾಗಿರುವ ವಿವಾಹಗಳಿಗೆ ಇದು ಅನ್ವಯವಾಗುದಿಲ್ಲ.
ಸರಕಾರಿ ಕಚೇರಿಗಳು ಜು.10ರಿಂದ ಅನ್ವಯವಾಗುವಂತೆ ಎಲ್ಲ ಸರಕಾರಿ ಕಚೇರಿಗಳು, ಮಂಡಳಿಗಳು ಹಾಗೂ ನಿಗಮಗಳು(ಅಗತ್ಯ ಸೇವೆಗಳನ್ನು ನಿರ್ವಹಿಸುತ್ತಿರುವ ಕಚೇರಿಗಳು ಹೊರತುಪಡಿಸಿ) ಆಗಸ್ಟ್ 2ರವರೆಗೆ ಎಲ್ಲ ಶನಿವಾರವೂ ಮುಚ್ಚಲಿದೆ.