ಸಮ್ಮೇಳನದ ಸಿದ್ಧತೆಗಳ ಕಾರ್ಯ ತೃಪ್ತಿ ತಂದಿದೆ: ಡಾ.ಮನು ಬಳಿಗಾರ

ಧಾರವಾಡ 02: ಅಖಿಲ ಭಾರತ 84 ನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿರುವುದು ಸಂತಸ ಹಾಗೂ ಭರವಸೆ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.

ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಆವರಣದ ಸಾಹಿತ್ಯ ಭವನದಲ್ಲಿ ಸ್ಥಾಪಿಸಲಾಗಿರುವ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾಯರ್ಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಸಮಿತಿಗಳು ಈಗಾಗಲೇ ಹಲವಾರು ಸಭೆಗಳನ್ನು ನಡೆಸಿರುವುದು ಕಂಡಾಗ ಸಮಿತಿಗಳ ಉತ್ಸಾಹ ಗೋಚರವಾಗುತ್ತದೆ. ನಗರದ ಸುಂದರೀಕರಣ, ವಿದ್ಯುದಲಂಕಾರ, ಸಾಹಿತಿ, ಸಂಗೀತಗಾರರು, ವಿ????ನಿಗಳು ಸಾಧಕರ ಭಾವಚಿತ್ರಗಳನ್ನು ಅಲ್ಲಲ್ಲಿ ಅಳವಡಿಸಬೇಕು. ಬಹಳ ಭರವಸೆಯೊಂದಿಗೆ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡಕ್ಕೆ ದೊರೆತಿದೆ. ಬೇರೆಯವರು ಇಲ್ಲಿನ ಸಮ್ಮೇಳನ ನೆನಪಿಡುವ ಹಾಗೆ ಸಂಘಟನೆಯಾಗಬೇಕು ಎಂದರು.

ಬಸವರಾಜ ಜಿಗಜಿನ್ನಿ ಅವರು ಮೈಸೂರು ಸ್ಯಾಂಡಲ್ ಸಾಬೂನಿನಿಂದ ತಯಾರಿಸಿದ ಸ್ಮರಣಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ನೀಡಿದರು. 

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ದಿಂದ 2 ಕೋಟಿ ರೂ., ಉಳಿದ ಅನುದಾನವನ್ನು ಸಕರ್ಾರ ಬಿಡುಗಡೆ ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದಶರ್ಿಗಳು ತಿಳಿಸಿದ್ದಾರೆ ಎಂದರು.

ವಿವಿಧ ಉಪಸಮಿತಿಗಳ ಕಾಯರ್ಾಧ್ಯಕ್ಷರು ತಮ್ಮ ಸಮಿತಿಗಳು ಕೈಗೊಂಡಿರುವ ಕಾರ್ಯ ಚಟುವಟಿಕೆಗಳನ್ನು ಸಭೆಗೆ ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಹುಬ್ಬಳ್ಳಿ ಧಾರವಾಡ ಉಪ ಪೊಲೀಸ್ ಆಯುಕ್ತರಾದ ರವೀಂದ್ರ ಗಡಾದಿ, ಬಿ.ಎಸ್. ನೇಮಗೌಡ, ಅಬಕಾರಿ ಉಪ ಆಯುಕ್ತ ಬಿ.ಆರ್. ಹಿರೇಮಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಗೌರವ ಕಾರ್ಯದಶರ್ಿ ಕೆ.ಎಸ್.ಕೌಜಲಗಿ ಮತ್ತಿತರರು ಇದ್ದರು.