ಯುಎಸ್ ಓಪನ್ ಪ್ರಧಾನ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ಸುಮೀತ್ ನಗಾಲ್ ಯಶಸ್ವಿ

ನ್ಯೂಯಾರ್ಕ್ ಆ 24     ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಸುಮೀತ್ ನಗಾಲ್ ಅವರು ಸೋಮವಾರ ದಿಂದ ಆರಂಭವಾಗುವ ಯುಎಸ್ ಓಪನ್ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಕಳೆದ ಆರು ವರ್ಷಗಳಿಂದ ಗ್ರ್ಯಾನ್ ಸ್ಲ್ಯಾಮ್ಗೆ ಪ್ರವೇಶಿಸಿದ ನಾಲ್ಕನೇ ಭಾರತದ ಆಟಗಾರ ಎಂಬ ಕೀರ್ತಿಗೆ ಸುಮೀತ್ ಭಾಜನರಾಗಿದ್ದಾರೆ. 89ನೇ ಶ್ರೇಯಾಂಕದ ಪ್ರಜ್ಞೇಶ್ ಗುಣೇಶ್ವರನ್ ಅವರು ನೇರವಾಗಿ ಗ್ರ್ಯಾನ್ ಸ್ಲ್ಯಾಮ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.  ಶುಕ್ರವಾರ ಎರಡು ಗಂಟೆ 27ನಿಮಿಷಗಳ ಕಾಲ ನಡೆದ ಮೂರನೇ ಅರ್ಹತಾ ಸುತ್ತಿನ ಪಂದ್ಯದಲ್ಲಿ 190ನೇ ಶ್ರೇಯಾಂಕದ ಸುಮೀತ್ ನಗಾಲ್ ಅವರು ಬ್ರೆಜಿಲ್ನ ಜೊವಾವೊ ಮೆನೆಜೆಸ್ ಅವರ ವಿರುದ್ಧ 5-7, 6-4, 6-3 ಅಂತರದಲ್ಲಿ ಗೆದ್ದು ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ಗೆ ಪ್ರವೇಶ ಮಾಡಿದ್ದಾರೆ. ಆ ಮೂಲಕ ಸೋಮವಾರದಿಂದ ಆರಂಭವಾಗುವ ಯುಎಸ್ ಓಪನ್ನಲ್ಲಿ ಭಾರತದಿಂದ ಇಬ್ಬರು ಸ್ಪರ್ಧಿಸಿದಂತಾಗಲಿದೆ. ಪ್ರಜ್ಞೇಶ್ ಆರಂಭಿಕ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಡೆನಿಲ್ ಮೆಡ್ವೆಡೆವ್ ವಿರುದ್ಧ ಕಠಿಣ ಹೋರಾಟ ಎದುರಾಗಲಿದೆ.  ಹರಿಯಾಣದ ಸುಮೀತ್ ನಗಾಲ್ ಅರ್ಹತಾ ಸುತ್ತಿನ ಮೂರು ಪಂದ್ಯಗಳಿಂದ ಒಟ್ಟು 108 ಅಂಕಗಳನ್ನು ಕಲೆಹಾಕಿದರು. ಆದರೆ, ಎದುರಾಳಿ ಆಟಗಾರ ಜೊವಾವೊ ಮೆನೆಜೆಸ್ ಅವರು 97 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡರು.  ಜೊವಾವೊ ಮೆನೆಜೆಸ್ ಅವರು ಒಂಬತ್ತು ಏಸ್ ಅಂಕಗಳನ್ನು ಪಂದ್ಯದಲ್ಲಿ ಪಡೆದಿದ್ದು, ಇದರಲ್ಲಿ ಎರಡು ಡಬಲ್ಸ್ ಫಾಲ್ಟ್ ಮಾಡಿದ್ದರು. ಆದರೆ, ಭಾರತದ ಆಟಗಾರ ಯಾವುದೇ ಏಸ್ ಅಂಕಗಳನ್ನು ಪಡೆದಿಲ್ಲ. ಆದರೆ, ನಾಲ್ಕು ಡಬಲ್ಸ್ ಫಾಲ್ಟ್ ಮಾಡಿದ್ದರು.  ಆರಂಭದ ಪಂದ್ಯದಲ್ಲಿ ಸುಮೀತ್ ನಗಾಲ್ ಎಡವಿದ್ದರು. ಹಾಗಾಗಿ, ಬ್ರೆಜಿಲ್ ಆಟಗಾರನ ವಿರುದ್ಧ ಮೊದಲ ಸೆಟ್ನಲ್ಲಿ ಸೋಲು ಅನುಭವಿಸಿದ್ದರು. ಆದರೆ, ಎರಡನೇ ಸೆಟ್ಗೆ ಕಾರ್ಯ ಯೋಜನೆಯೊಂದಿಗೆ ಕಣಕ್ಕೆ ಇಳಿದ ಸುಮೀತ್ ಮೊದಲ ಸೆಟ್ನಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಮಡರು. ಅದರ ಫಲವಾಗಿ ಎರಡನೇ ಹಾಗೂ ಮೂರನೇ ಸೆಟ್ಗಳಲ್ಲಿ ಕ್ರಮವಾಗಿ ಗೆದ್ದು ಪಂದ್ಯವನ್ನು ತನ್ನದಾಗಿಸಿಕೊಂಡರು.